ಶನಿವಾರಸಂತೆ, ಆ. 18: ಸ್ವಾತಂತ್ರ್ಯ ಹೋರಾಟಗಾರರು ಮತ್ತು ದೇಶವನ್ನು ರಕ್ಷಿಸುತ್ತಿರುವ ವೀರ ಸೈನಿಕರ ಶ್ರಮವನ್ನು ಸ್ವಾತಂತ್ರ್ಯೋತ್ಸವ ದಲ್ಲಿ ಸ್ಮರಿಸಿಕೊಳ್ಳಲೇಬೇಕು ಎಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಹೇಳಿದರು.ವಂದೇ ಮಾತರಂ ರಥ ಯಾತ್ರೆಯ ತಂಡ ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತಕ್ಕೆ ಆಗಮಿಸಿದ ಸಂದರ್ಭ ರಥ ಯಾತ್ರೆಯನ್ನು ಸ್ವಾಗತಿಸಿ ಮಾತನಾಡಿದರು.ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಸ್.ಜಿ. ಮೇದಪ್ಪ ಅವರು ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಶ್ರಮ ಪ್ರಮುಖವಾದದ್ದು. ಕೊಡಗು ಜಿಲ್ಲೆಯನ್ನು ಪ್ರಪಂಚದಾದ್ಯಂತ ಪರಿಚಯಿಸಿದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರನ್ನು ನೆನಪಿಸಿಕೊಳ್ಳಬೇಕು ಎಂದರು.ರಥಯಾತ್ರೆ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮದ್ ಗೌಸ್ ಚಾಲನೆ ನೀಡಿದರು. ಯೋಜನಾ ನಿರ್ದೇಶಕ ಎಸ್.ಎಲ್.ಎನ್. ಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮನುಮುತ್ತಪ್ಪ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿ.ಡಿ. ಮಂಜುನಾಥ, ಭುವನೇಶ್ವರಿ ಹರೀಶ್, ಪ್ರಸಾದ್, ರಕ್ಷಿತ್ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ಬೆಂಗಳೂರಿನ ಮೀಡಿಯಾ-ಎನ್-ಮೀಡಿಯಾ ಸಂಸ್ಥೆಯ ರಾಮು, ಕಾರ್ಯಕ್ರಮದ ಮಾಹಿತಿ ನೀಡಿದರು. ನಿರ್ವಹಣೆಯ ವ್ಯವಸ್ಥಾಪಕ ನಿರ್ದೇಶಕರುಗಳಾದ ಮಣಿ, ಕೆ.ಆರ್. ಬಹದ್ದೂರ್, ರಾಜ್ಯ ಪ್ರಶಸ್ತಿ ವಿಜೇತ ಗಾಯಕರು ರಮೇಶ್ ಚಂದ್ರ, ಮಂಜುಳಾ, ರಾಮು, ದೀಪು, ಜ್ಯೋತಿ, ಮೋಹನ್‍ರಾಜ್, ನಂದಿನಿ, ರಾಜು, ಬಸವರಾಜ್ ತಂಡದವರಿಂದ ದೇಶಭಕ್ತಿಗೀತೆ, ಕನ್ನಡ ನಾಡಗೀತೆ ಹಾಡಿ ಕಾರ್ಯಕ್ರಮ ನಡೆಸಿಕೊಟ್ಟರು.