ಮಡಿಕೇರಿ, ಆ. 11 : ದೇಶ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕರೆಯಂತೆ ಭಾರತೀಯ ಜನತಾ ಪಾರ್ಟಿ ದೇಶವ್ಯಾಪಿ ತಾ. 9 ರಿಂದ 23 ರವರೆಗೆ ರಾಷ್ಟ್ರಾಭಿಮಾನದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕೊಡಗು ಜಿಲ್ಲೆಯಲ್ಲೂ ಪಕ್ಷ ಸ್ವಾತಂತ್ರ್ಯೋತ್ಸ ವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಿದೆಯೆಂದು ಪಕ್ಷದ ಜಿಲ್ಲಾಧ್ಯಕ್ಷ ಮನುಮುತ್ತಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 9 ರಂದು ಕ್ವಿಟ್ ಇಂಡಿಯಾ ಚಳವಳಿಯ ಸ್ಮರಣೆಯ ಮೂಲಕ ಬಿಜೆಪಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಸ್ವಾತಂತ್ರ್ಯೋತ್ಸ ವವನ್ನು ಹಬ್ಬದ ಮಾದರಿಯಲ್ಲಿ ಆಚರಿಸುವ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರರನ್ನು ಸ್ಮರಿಸಿಕೊಳ್ಳ ಲಾಗುತ್ತಿದೆ. 27 ಜನರ ಕಲಾತಂಡ ವನ್ನು ಹೊಂದಿರುವ ತಿರಂಗ್ ವಂದೇಮಾತರಂ ರಥ ಯಾತ್ರೆಗೆ ಬೀದರ್‍ನಲ್ಲಿ ಚಾಲನೆ ನೀಡಲಾಗಿದ್ದು, ತಾ. 13 ರಂದು ಕೊಡಗನ್ನು ಪ್ರವೇಶಿಸಲಿದೆ. ಶನಿವಾರಸಂತೆಯಲ್ಲಿ ರಥಯಾತ್ರೆಯ ಬೃಹತ್ ಕಾರ್ಯ ಕ್ರಮವನ್ನು ಆಯೋಜಿಸಲಾಗಿದೆ ಎಂದು ಮನು ಮುತ್ತಪ್ಪ ತಿಳಿಸಿದರು.

ತಾ. 15 ರಂದು ಗೋಣಿಕೊಪ್ಪಲು, ನಾಪೆÇೀಕ್ಲು ಹಾಗೂ ಸೋಮವಾರ ಪೇಟೆಯಲ್ಲಿ ಪÀಂಜಿನ

(ಮೊದಲ ಪುಟದಿಂದ) ಮೆರವಣಿಗೆ ಮತ್ತು ಸಾರ್ವಜನಿಕ ಭಾಷಣವನ್ನು ಆಯೋಜಿಸಲಾಗಿದೆ. ತಾ. 16 ರಂದು ಕೊಡಗಿನ ಗಡಿಭಾಗಗಳಾದ ಕುಟ್ಟ ಮತ್ತು ಕೊಡ್ಲಿಪೇಟೆಯಿಂದ ವಾಹನ ಜಾಥಾ ನಡೆಯಲಿದ್ದು, ಅಂದು ಮಡಿಕೇರಿಯ ಕೊಡವ ಸಮಾಜದಲ್ಲಿ ಬೃಹತ್ ಸಭೆÉಯನ್ನು ಆಯೋಜಿಸಲಾಗಿದೆ. ಕುಟ್ಟದಲ್ಲಿ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಕೊಡ್ಲಿಪೇಟೆಯಲ್ಲಿ ಎಂಎಲ್‍ಸಿ ಸುನಿಲ್ ಸುಬ್ರಮಣಿ ಹಾಗೂ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ವಾಹನ ಜಾಥವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಬಿಜೆಪಿ ಯುವ ಮೋರ್ಚಾ ನÉೀತೃತ್ವದಲ್ಲಿ ವಾಹನ ಜಾಥಾ ನಡೆಯಲಿದೆ ಎಂದು ಮನು ಮುತ್ತಪ್ಪ ಹೇಳಿದರು.

ತಾ. 18 ರಂದು ಮಹಿಳಾ ಮೋರ್ಚಾ ನೆÉೀತೃತ್ವದಲ್ಲಿ ರಕ್ಷಾ ಬಂಧನ ನಡೆಯಲಿದೆ. ಸೈನಿಕರು,ಮಾಜಿ ಸೈನಿಕರು, ಪೆÇಲೀಸ್ ಸಿಬ್ಬಂದಿಗಳು ಇತರ ಸರ್ಕಾರಿ ಅಧಿಕಾರಿಗಳು ಹಾಗೂ ನೈಋತ್ಯ ಭಾಗದಿಂದ ಕೆಲಸಕ್ಕಾಗಿ ಆಗಮಿಸಿರುವ ಕಾರ್ಮಿಕ ವರ್ಗಕ್ಕೆ ರಕ್ಷೆ ಕಟ್ಟುವ ಮೂಲಕ ರಾಷ್ಟ್ರೀಯ ಭಾವನೆಯನ್ನು ಹೆಚ್ಚಿಸಲಾಗುವದೆಂದರು.

ತಾ. 21 ರಂದು ರೈತ ಮೋರ್ಚಾ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮೂಡಿಸು ವದರೊಂದಿಗೆ ವನ ಮಹೋತ್ಸವವನ್ನು ಆಚರಿಸಲಾಗುವದೆಂದು ಮನು ಮುತ್ತಪ್ಪ ತಿಳಿಸಿದರು.

ತಾ. 14 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಐಟಿ ಸಿಬ್ಬಂದಿಗಳು ಮತ್ತು ಸಾರ್ವಜನಿಕರನ್ನು ಒಳಗೊಂಡ ಮೆರಥಾನ್ ನಡೆಯಲಿದೆ. ಸಂಸದ ಪ್ರತಾಪಸಿಂಹ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆಯೆಂದು ಮನು ಮುತ್ತಪ್ಪ ತಿಳಿಸಿದರು. ತಾ. 23 ರವರೆಗೆ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಬಿಜೆಪಿಯ ಧ್ವಜವನ್ನು ಬಳಸದೆ ರಾಷ್ಟ್ರ ಧ್ವಜವನ್ನು ಬಳಸಲಾಗುತ್ತದೆಂದು ಸ್ಪಷ್ಟಪಡಿಸಿದರು.

ಕಾರ್ಯಕರ್ತರು ರಾಷ್ಟ್ರ ಧ್ವಜವನ್ನು ಬಳಸುವಾಗ ಜಾಥಾಗಳ ಸಂದರ್ಭ ವಾಹನಗಳಿಗೆ ರಾಷ್ಟ್ರ ಧ್ವಜಗಳನ್ನು ಅಳವಡಿಸದಂತೆ ಮನವಿ ಮಾಡಿದ ಅವರು, ಗೌರವಯುತವಾಗಿ ಕೈಯಲ್ಲಿ ಧ್ವಜ ಹಿಡಿದು ಗೌರವ ತೋರುವಂತೆ ತಿಳಿಸಿದರು. ಪ್ಲಾಸ್ಟಿಕ್ ಧ್ವಜಗಳನ್ನು ಬಳಸದಂತೆ ಇದೇ ಸಂದರ್ಭ ಮನವಿ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಮನವಿಯಂತೆ ಎಲ್ಲರೂ ಸ್ವದೇಶಿ ಖಾದಿ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವಂತೆ ಕರೆ ನೀಡಿದ ಅವರು, ಈ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಖಾದಿಗೆ ಆದ್ಯತೆ ನೀಡುವಂತೆ ಕರೆ ನೀಡಿದರು. ಪ್ರಧಾನಿಯವರು ಖಾದಿ ಉದ್ಯಮದ ಪ್ರೋತ್ಸಾಹಕ್ಕಾಗಿ ಖಾದಿಯನ್ನು ಬಳಸುವಂತೆ ಮನವಿ ಮಾಡಿದ ಸಂದರ್ಭ ಖಾದಿ ಕ್ಷೇತ್ರದಲ್ಲಿ ಶೇ.108 ರಷ್ಟು ವ್ಯವಹಾರ ನಡೆದಿತ್ತೆಂದು ಮನು ಮುತ್ತಪ್ಪ ಇದೇ ಸಂದರ್ಭ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಬಾಲಚಂದ್ರ ಕಳಗಿ, ಉಪಾಧ್ಯಕ್ಷೆ ಮೋಂತಿ ಗಣೇಶ್, ಮಹಿಳಾ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೀತಾ ಪವಿತ್ರ ಹಾಗೂ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಕಾಳನ ರವಿ ಉಪಸ್ಥಿತರಿದ್ದರು.