ಮಡಿಕೇರಿ, ಸೆ. 14: ಮಂಜಿನ ನಗರಿಯಲ್ಲಿಂದು ಹೊಸತೊಂದು ಲೋಕ ಸೃಷ್ಟಿಯಾಗಿತ್ತು. ಮೂರನೇ ಕಣ್ಣು ತೆರೆದು ನಿಂತಿದ್ದ ಶಿವ, ಭಾರೀ ಗಾತ್ರದ ತೆಂಗಿನ ಕಾಯಿ, ಎಗರಾಡುತ್ತಿದ್ದ ಸಿಂಹ, ನೆಲದಲ್ಲಿ ಮಲಗಿದ್ದ ಮೊಸಳೆ, ಭಕ್ತಾದಿಗಳನ್ನು ಹರಸಲು ಬಂದಿದ್ದ ತೆರೆ ಕಟ್ಟಿದ್ದ ವ್ಯಕ್ತಿ ಇಂತಹ ಹಲವು ದೃಶ್ಯಗಳು ಒಂದೆಡೆ. ಮತ್ತೊಂದೆಡೆಯಲ್ಲಿ ಗ್ರಾಮೀಣ ಸೊಗಡನ್ನು ಪ್ರತಿಬಿಂಬಿಸುವ ಜನಪದ ವೈವಿಧ್ಯತೆಯ ನೃತ್ಯದ ಆಕರ್ಷಣೆ. ಕೋಲು ಕೋಲಣ್ಣ ಕೋಲೆ, ಕೋಲು ಕೋಲೆ, ಹಾಡಿಗೆ ಕೋಲಿನ ಶಬ್ಧ ಮತ್ತಿತರ ಕಲಾ ಪ್ರಾಕಾರಗಳು ಒಂದೇ ಆವರಣದಲ್ಲಿ ಮೇಳೈಸಿತ್ತು.
ಇದಕ್ಕೆ ವೇದಿಕೆಯಾಗಿದ್ದು, ನಗರದ ಸಂತ ಮೈಕಲರ ಶಾಲೆಯಲ್ಲಿ ಇಂದು ಕೊಡಗು ಜಿಲ್ಲಾ ಪಂಚಾ ಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ 2016-17ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವದ ಸ್ಪರ್ಧೆ. ಕ್ಲಸ್ಟರ್ ಮಟ್ಟದಿಂದ, ತಾಲೂಕು ಮಟ್ಟ, ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದ ಜಿಲ್ಲೆ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಇಂದು ಜಿಲ್ಲಾ ಮಟ್ಟದ ಸ್ಪರ್ಧೆ ಆಯೋಜಿಸ ಲಾಗಿತ್ತು. ಸುಮಾರು 22 ಬಗೆಯ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸ್ಪರ್ಧಾತ್ಮಕವಾಗಿ ನಡೆಯುವ ಈ ಪ್ರತಿಭಾ ಪ್ರದರ್ಶನ ನೋಡುಗರ ಗಮನ ಸೆಳೆಯಿತು.
ಛದ್ಮವೇಷ, ಕ್ಲೇ ಮಾಡಲಿಂಗ್ (ಮಾದರಿ ತಯಾರಿಕೆ) ಜನಪದ ನೃತ್ಯ , ದೇಶಭಕ್ತಿ ಗೀತೆ, ಭರತನಾಟ್ಯ, ಜನಪದ ನೃತ್ಯ, ನೃತ್ಯಕಲೋತ್ಸವ, ಮಿಮಿಕ್ರಿ, ನಾಟಕ, ಚರ್ಚಾಸ್ಪರ್ಧೆ, ಭಾಷಣ, ಕವಾಲಿ, ಗಜಲ್, ರಂಗೋಲಿ ಸೇರಿದಂತೆ ಇನ್ನಿತರ ಸ್ಪರ್ಧೆಗಳು ನಡೆದು ರಾಜ್ಯಮಟ್ಟಕ್ಕೆ ಆಯ್ಕೆ ನಡೆಯಿತು. ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅವರು ಉದ್ಘಾಟಿಸಿ ದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಕಲಿಕಾ ಸಂದರ್ಭ ದಲ್ಲಿ ಒಂದಲ್ಲ ಒಂದು ರೀತಿಯ ಪ್ರತಿಭೆ ಇರುತ್ತದೆ. ಇವುಗಳನ್ನು ಗುರುತಿಸುವಲ್ಲಿ ಶಿಕ್ಷಕರು ಹಾಗೂ ಪೋಷಕರು ಮಕ್ಕಳಿಗೆ ಸಹಕಾರಿ ಯಾಗುವಂತೆ ಕರೆ ನೀಡಿದರು.
ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸುವಲ್ಲಿ ಕೆಲವೊಂದು ಶಿಕ್ಷಕರು ಹಾಗೂ ಪೋಷಕರು ಹೆಚ್ಚು ಆಸಕ್ತಿ ವಹಿಸದೆ ಇರುವದು ಕಂಡುಬರುತ್ತಿದೆ. ವಿಶೇಷವಾಗಿ ಮಕ್ಕಳಿಗೆ ಓದಿನ ಜೊತೆಗೆ ಕಲೆ, ಸಾಹಿತ್ಯ, ಸಾಂಸ್ಕøತಿಕ ಚಟುವಟಿಕೆ ಹಾಗೂ ಕ್ರೀಡೆಗಳಲ್ಲಿ ಭಾಗವಹಿಸಲು ಅವಕಾಶಗಳನ್ನು ಪೋಷಕರು ಹಾಗೂ ಶಿಕ್ಷಕಕರು ಕಲ್ಪಿಸಿಕೊಡುವಂತೆ ಆಗಬೇಕು ಎಂದರು. ಶಾಲೆಗಳಲ್ಲಿ ವಿದ್ಯಾರ್ಥಿ ಗಳು ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಾಗ ಪರಿಪೂರ್ಣ ವಿದ್ಯಾರ್ಥಿ ಯಾಗಲು ಸಾಧ್ಯವಾಗಲಿದೆ ಎಂದು ಲೋಕೇಶ್ವರಿ ಗೋಪಾಲ್ ಅಭಿಪ್ರಾಯಪಟ್ಟರು. ಮಡಿಕೇರಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ತೆಕ್ಕಡೆ ಶೋಭಾ ಮೋಹನ್ ಅವರು ಮಾತನಾಡಿ ಪ್ರತಿಭಾ ಕಾರಂಜಿ ಯಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ. ಶಾಲಾ ಮಟ್ಟದಲ್ಲಿ ಮಕ್ಕಳಲ್ಲಿ ಪ್ರತಿಭೆಗಳನ್ನು ಗುರುತಿಸಿದಾಗ ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದರು
ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೋಂಡ ಶಶಿಸುಬ್ರಮಣಿ ಅವರು ಮಾತನಾಡಿ ಪೋಷಕರು ಮಕ್ಕಳ ಉತ್ತಮ ಭವಿಷ್ಯವನ್ನು ರೂಪಿಸಲು ಶಾಲೆಗಳಿಗೆ ಕಳುಹಿಸಿದ್ದಾರೆ ಇದನ್ನು ಮನಗಂಡು ಶಿಕ್ಷಕರು ಮಕ್ಕಳ ಉತ್ತಮ ಬದುಕಿಗೆ ದಾರಿ ದೀಪವಾಗಬೇಕು ಎಂದರು. ಮಕ್ಕಳು ಪಠ್ಯ ಚಟುವಟಿಕೆಗಳ ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವದು ಕೂಡ ಅವಶ್ಯಕವಾಗಿರುತ್ತದೆ ಎಂದು ತಿಳಿಸಿದರು ಪ್ರಸ್ತುತದ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಆಸಕ್ತಿ ತೋರುವಂತೆ ಅವರು ಕರೆ ನೀಡಿದರು. ಕೂಡಿಗೆ ಡಯಟ್ನ ಉಪ ನಿರ್ದೇಶಕ ದೊಡ್ಡಮಲ್ಲಪ್ಪ ಅವರು ಮಾತನಾಡಿ ಮಕ್ಕಳ ಸೂಕ್ತ ಪ್ರತಿಭೆಗಳನ್ನು ಹೊರ ತರಲು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕಿದೆ, ಪ್ರತಿಭೆ ತನ್ನ ಗುಣ ಹಾಗೂ ವ್ಯಕ್ತಿತ್ವವನ್ನು ಗುರುತಿಸುವಲ್ಲಿ ಸಹಕಾರಿಂ iÀiÁಗಿರುತ್ತದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಯು ಇದರ ಸದುಪಯೋಗವನ್ನು ಪಡೆಯುವಂತೆ ಹೇಳಿದರು.ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಆರ್. ಬಸವರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚೇತನ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷÀ ಸೋಮಶೇಖರ್, ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜೋಯಪ್ಪ, ಮತ್ತಿತರರು ಇದ್ದರು. ನಾಪೋಕ್ಲು ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಕ್ಷೇತ್ರ ಶಿಕ್ಷಣಾಧಿಕಾರಿ ಬೊಮ್ಮೇಗೌಡ ಸ್ವಾಗತಿಸಿದರು, ಆಲೂರು ಸಿದ್ದಾಪುರ ಮೊರಾರ್ಜಿ ದೇಸಾಯಿ ಶಾಲೆಯ ಶಿಕ್ಷಕ ಬಸವಣ್ಣಗೌಡ ನಿರೂಪಿಸಿ, ಶಿಕ್ಷಕಿ ಜಾನಕ್ಕಿ ವಂದಿಸಿದರು.