ಸÉೂೀಮವಾರಪೇಟೆ, ಅ.1: ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ಇಂದಿನಿಂದ ಒಂಭತ್ತು ದಿನಗಳು ನಡೆಯಲಿರುವ ಶರನ್ನವರಾತ್ರಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.
ಪ್ರತಿವರ್ಷ ನಾಡಹಬ್ಬ ದಸರಾ ಸಂದರ್ಭ ಒಂಬತ್ತು ದಿನಗಳು ನಡೆಯುವ ನವರಾತ್ರಿ ಹಬ್ಬವನ್ನು ಇಲ್ಲಿ ಶರನ್ನವರಾತ್ರಿ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಶನಿವಾರ ಬೆಳಿಗ್ಗೆ ಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನು ಆನೆಕೆರೆಯಿಂದ ಗಂಗೆ ಪೂಜೆಯೊಂದಿಗೆ ಮೆರವಣಿಗೆಯಲ್ಲಿ ತಂದು ದೇವಾಲಯದಲ್ಲಿ ಪ್ರತಿಷ್ಠಾಪಿಸ ಲಾಯಿತು. ಅರ್ಚಕ ಚಿತ್ರಕುಮಾರ್ ಭಟ್ ಪುರೋಹಿತ್ವದಲ್ಲಿ ದೇವಾಲಯದ ಶಕ್ತಿ ಪಾರ್ವತಿ ದೇವಿಗೆ ಅರ್ಚನೆ, ಅಭಿಷೇಕ, ವಿಶೇಷ ಪೂಜೆ ನಡೆದು ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನೆರವೇರಿತು.
ಸಂಜೆ ದೇವಿಗೆ ಲಲಿತ ಸಹಸ್ರನಾಮ, ಕುಂಕುಮಾರ್ಚನೆ, ರಂಗಪೂಜೆ, ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಿತು. ಈ ಸಂದರ್ಭ ದೇವಾಲಯ ಸಮಿತಿ ಪದಾಧಿಕಾರಿಗಳಾದ ಸೋಮೇಶ್, ಶ್ಯಾಮಸುಂದರ್, ಆನಂದ್, ಶ್ರೀಕಾಂತ್, ಮಧು ಸೂದನ್ ಸೇರಿದಂತೆ ಇತರರು ಹಾಜರಿದ್ದರು.