ಸೋಮವಾರಪೇಟೆ, ನ. 5: ರಾಜ್ಯ ಸರ್ಕಾರ ಪ್ರಾಯೋಜಿತ ಟಿಪ್ಪು ಜಯಂತಿಯನ್ನು ಸೋಮವಾರಪೇಟೆ ಯಲ್ಲಿ ಆಚರಿಸಲು ತಾಲೂಕು ಆಡಳಿತ ಭರದ ಸಿದ್ಧತೆ ನಡೆಸುತ್ತಿದೆ. ಕಳೆದ ಬಾರಿಯ ಆಚರಣೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗಿ, ಅಲ್ಲಲ್ಲಿ ಗಲಭೆಗಳು ನಡೆದ ಹಿನ್ನೆಲೆ ಈ ಬಾರಿ ಪೊಲೀಸ್ ಬಂದೋಬಸ್ತ್ನೊಂದಿಗೆ ಜಯಂತಿ ಆಚರಣೆಗೆ ಮುಂದಾಗಿದೆ.
ಕಳೆದ ಸಾಲಿನ ಆಚರಣೆಗೆ ತೀವ್ರ ಪ್ರತಿರೋಧ ಒಡ್ಡಿದ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಮುಖಂಡ ರನ್ನು ತಹಶೀಲ್ದಾರ್ ನ್ಯಾಯಾಲಯಕ್ಕೆ ಕರೆಸಿಕೊಂಡು ಮುಚ್ಚಳಿಕೆ ಬರೆಸಿಕೊಳ್ಳಲಾಗುತ್ತಿದ್ದು, ಈ ಸಾಲಿನ ಜಯಂತಿಗೆ ಯಾವದೇ ರೀತಿಯ ತಡೆ ಹಾಕದಂತೆ ಎಚ್ಚರಿಕೆ ನೀಡಲಾಗುತ್ತಿದೆ.
ಭಾರತೀಯ ದಂಡ ಸಂಹಿತೆ 107ರಡಿ ವಿಚಾರಣೆಗೆ ಒಳಪಡಿಸು ತ್ತಿರುವ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ, ಇದನ್ನು ಉಲ್ಲಂಘಿಸಿದರೆ ಬಳ್ಳಾರಿ ಜೈಲಿಗೆ ಅಟ್ಟುವ ಎಚ್ಚರಿಕೆ ನೀಡುತ್ತಿದ್ದಾರೆ. ಸೋಮವಾರಪೇಟೆ ಭಾಗದ ಸುಮಾರು 60ಕ್ಕೂ ಅಧಿಕ ಮಂದಿಯನ್ನು ನಿನ್ನೆ ದಿನ ತಾಲೂಕು ಕಚೇರಿಗೆ ಕರೆದು ವಿಚಾರಣೆಗೆ ಒಳಪಡಿಸಿದ್ದಾರೆ. ಮುಂದಿನ ವಿಚಾರಣೆಯನ್ನು ತಾ. 8ಕ್ಕೆ ನಿಗದಿ ಮಾಡಲಾಗಿದೆ.
ಶನಿವಾರದಂದು ಕುಶಾಲನಗರ ಹಾಗೂ ಶನಿವಾರಸಂತೆ ಭಾಗದ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ಕಚೇರಿಗೆ ಕರೆಸಿಕೊಂಡು ತಹಶೀಲ್ದಾರ್ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಮಧ್ಯೆ ತಾ. 7 ರಂದು ಪೂರ್ವಾಹ್ನ 11 ಗಂಟೆಗೆ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ, ತಾಲೂಕು ಕಚೇರಿಯಲ್ಲಿ ಟಿಪ್ಪು ಜಯಂತಿ ಸಂಬಂಧಿತ ಪೂರ್ವಭಾವಿ ಸಭೆ ನಡೆಯಲಿದ್ದು, ತಾ. 8 ರಂದು ವಿವಿಧ ಸಮುದಾಯದ ಮುಖಂಡರನ್ನು ಒಳಗೊಂಡಂತೆ ಸಭೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.
ತಾಲೂಕು ಕೇಂದ್ರದಲ್ಲಿ ಮಾತ್ರ ಆಚರಣೆ ನಡೆಸಲು ಉದ್ದೇಶಿಸ ಲಾಗಿದ್ದು, ಇದನ್ನು ಹೊರತುಪಡಿಸಿ ಅನ್ಯ ಭಾಗಗಳಲ್ಲಿ ಆಚರಣೆಗೆ ಅವಕಾಶ ಕಲ್ಪಿಸದಿರಲು ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಕೊಡ್ಲಿಪೇಟೆ ಭಾಗದಲ್ಲಿ ಮೆರವಣಿಗೆ ಹಾಗೂ ಜಯಂತಿ ನಡೆಸಲು ಅವಕಾಶ ಕಲ್ಪಿಸಬೇಕೆಂದು ಮುಖಂಡ ರೋರ್ವರು ಮಾಡಿದ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ತಿಳಿದುಬಂದಿದೆ.
ತಾ. 8 ರಂದು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಟಿಪ್ಪು ಜಯಂತಿ ಆಚರಿಸುವ ಸಂಬಂಧ ನಡೆಯುವ ಸಭೆಯಲ್ಲಿ, ಈ ಬಾರಿಯ ಆಚರಣೆಯ ಸ್ಪಷ್ಟ ಚಿತ್ರಣ ಸಿಗಲಿದೆ. ಕಾರ್ಯಕ್ರಮಕ್ಕೆ ಯಾರನ್ನು ಆಹ್ವಾನಿಸಬೇಕು, ಎಷ್ಟು ಮಂದಿಗೆ ಅವಕಾಶ ನೀಡಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆದು ಅಂತಿಮ ರೂಪ ಸಿಗಲಿದೆ.
ಈ ಬಾರಿ ಎಲ್ಲಿಯೂ ಪೊಲೀಸ್ ಬಂದೋಬಸ್ತ್ನಲ್ಲಿ ವೈಫಲ್ಯ ಉಂಟಾಗದಂತೆ ಡಿವೈಎಸ್ಪಿ ಸಂಪತ್ಕುಮಾರ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ನಿರಂತರ ಸಭೆ ನಡೆಸುತ್ತಿದ್ದಾರೆ. ಸ್ಥಳೀಯ ಪೊಲೀಸ್ ಜೀಪ್ಗಳ ಗ್ಲಾಸ್ಗಳಿಗೆ ಕಬ್ಬಿಣದ ಗ್ರಿಲ್ಗಳನ್ನು ಅಳವಡಿಸ ಲಾಗಿದ್ದು, ಕೆಟ್ಟು ನಿಂತಿದ್ದ ಸೈರನ್ಗಳಿಗೆ ಜೀವ ತುಂಬಲಾಗುತ್ತಿದೆ. ಸುರಕ್ಷಾ ಕವಚ, ಕೈಯಲ್ಲಿ ಲಾಠಿ ಹಿಡಿದ ಪೊಲೀಸರು ನಗರದಲ್ಲಿ ಮೆರವಣಿಗೆ ನಡೆಸಿ ಸಾರ್ವಜನಿಕ ವಲಯದಲ್ಲಿ ಜಾಗೃತಿಯನ್ನೂ ಮೂಡಿಸಿದ್ದಾರೆ.
ತಾ. 10 ರಂದು ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಟಿಪ್ಪು ಜಯಂತಿ ಆಚರಿಸಲು ತೀರ್ಮಾನಿಸ ಲಾಗಿದೆ. ಇದಕ್ಕಾಗಿ ಪೊಲೀಸರ ತಂಡ ಸಭಾಂಗಣದ ಆವರಣವನ್ನು ಪರಿಶೀಲನೆ ನಡೆಸಿದ್ದು, ಬಂದೋ ಬಸ್ತ್ನ ಬಗ್ಗೆಯೂ ಚರ್ಚಿಸಿದ್ದಾರೆ.
ಕೋಮು ಸಂಬಂಧಿತ ಅತೀ ಸೂಕ್ಷ್ಮ ಪ್ರದೇಶವಾಗಿರುವ ಸೋಮವಾರಪೇಟೆಯಲ್ಲಿ ಮಾತ್ರ ಕಳೆದ ಬಾರಿ ಟಿಪ್ಪು ಜಯಂತಿ ಆಚರಣೆ ನಡೆದಿರಲಿಲ್ಲ. ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಿದ್ದ ಸಂದರ್ಭವೇ ಪ್ರತಿಭಟನಾಕಾರರೂ ಸಹ ತಾ.ಪಂ. ಆವರಣಕ್ಕೆ ಬಂದು ಧಿಕ್ಕಾರದ ಘೋಷಣೆ ಕೂಗುತ್ತಿದ್ದರು. ಈ ಸಂದರ್ಭವೇ ಮಡಿಕೇರಿಯಲ್ಲಿ ಕುಟ್ಟಪ್ಪ ಅವರ ಸಾವಿನ ಸುದ್ದಿ ತಿಳಿದು ಬಂದಿದ್ದು, ನಂತರ ತಾ.ಪಂ. ರಣರಂಗವಾಯಿತು.
ಸಭಾಂಗಣದ ಒಳಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸ ಮಾಡಿ ಕಾರ್ಯಕ್ರಮವನ್ನು ಸ್ಥಗಿತಗೊಳಿಸ ಲಾಗಿತ್ತು. ಬೆರಳೆಣಿಕೆಯ ಸಂಖ್ಯೆಯಲ್ಲಿದ್ದ