ಸೋಮವಾರಪೇಟೆ, ಆ. 5: ಸೇವಾ ಮನೋಭಾವ ಹೊಂದಿರುವ ಯುವಕರು ಸಮಾಜ ಸೇವೆಗೈಯಲು ರೋಟರಿ ಸಂಸ್ಥೆ ಉತ್ತಮ ವೇದಿಕೆಯಾಗಿದೆ ಎಂದು ಚಿಕ್ಕಮಗಳೂರು ಜಿಲ್ಲೆ ಹಾನ್‍ಬಾಳ್ ರೋಟರಿ ಸಂಸ್ಥೆಯ ಕಾರ್ಯದರ್ಶಿ ಜಯರಾಮ್ ಹೇಳಿದರು.
ಇಲ್ಲಿನ ಮಹಿಳಾ ಸಮಾಜದಲ್ಲಿ ನಡೆದ ರೋಟರಿ ಮಾಸಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ರೋಟರಿ ಸಂಸ್ಥೆಯ ಪ್ರತಿಫಲಾ ಪೇಕ್ಷೆಯಿಲ್ಲದ ಶ್ರಮದಿಂದ ದೇಶ ಪೋಲಿಯೋ ಮುಕ್ತವಾಗಿದೆ ಎಂದರು.
ರೋಟರಿ ಅಧ್ಯಕ್ಷ ಭರತ್ ಭೀಮಯ್ಯ ಮಾತನಾಡಿ, ಈ ಮಾಸದಲ್ಲಿ ಸಾರ್ವಜನಿಕರಿಗಾಗಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಏರ್ಪಡಿಸಲಾಗುವದು ಎಂದರು. ರೋಟರಿ ಪದಾಧಿಕಾರಿಗಳಾದ ಮಂಜು ನೀಲಕಂಠ್, ಎಸ್.ಡಿ. ವಿಜೇತ್, ಎ.ಡಿ. ಶುಭಾಕರ್, ದಿನೇಶ್, ಹೆಚ್.ಸಿ. ನಾಗೇಶ್, ಮೋಹನ್ ರಾಂ, ಶಶಿಧರ್, ಜಿ.ಜೆ. ಗೀರೀಶ್, ಸತೀಶ್, ಪಿ.ಕೆ. ರವಿ, ಪ್ರಕಾಶ್, ಸದಾನಂದ್, ಮಲ್ಲೇಶ್, ಕಾರ್ಯದರ್ಶಿ ವನಮಾಲಿ ಹೆಬ್ಬಾರ್ ಇದ್ದರು.