ಮಡಿಕೇರಿ, ಆ. 23: ಶಿಕ್ಷಕರ ದಿನಾಚರಣೆಯನ್ನು ಗಣೇಶ ಚತುರ್ಥಿಯ ದಿನದ ಬದಲು ಸೆ. 6 ರಂದು ಆಚರಿಸಲು ಅನುಮತಿ ಕೋರಿ ವಿಧಾನ ಪರಿಷತ್‍ನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ. ಗಣೇಶ್ ಕಾರ್ಣಿಕ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‍ಸೇಠ್ ಅವರಿಗೆ ಲಿಖಿತ ಮನವಿ ಮಾಡಿದ್ದಾರೆ.

ಶಿಕ್ಷಕರ ದಿನಾಚರಣೆ ಹಾಗೂ ಗಣೇಶ ಚತುರ್ಥಿ ಸೆ. 5 ರಂದೇ ಆಚರಿಸಲ್ಪಡುತ್ತಿರುª Àದರಿಂದ, ರಾಜ್ಯದ ಬಹು ದೊಡ್ಡ ಸಮುದಾಯ, ನಾಡಿನ ಅತ್ಯಂತ ಪ್ರಮುಖ ಹಬ್ಬಗಳಲ್ಲೊಂದಾದ ಗಣೇಶ ಚತುರ್ಥಿಯಂದು ಖಾಸಗಿ ಹಾಗೂ ಸಾರ್ವಜನಿಕ ಕಾರ್ಯ ಕ್ರಮದಲ್ಲಿ ಭಾಗವಹಿಸುವದು ಅನಿವಾರ್ಯವಾಗಿದ್ದು, ರಾಜ್ಯದ ಶಿಕ್ಷಕ ಸಮುದಾಯ ಸ್ವಲ್ಪ ತೊಂದರೆ ಯನ್ನು ಅನುಭವಿಸುವಂತಾ ಗಿದೆ.

ಇದರಿಂದಾಗಿ ಮನೆಗಳಲ್ಲಿ ಪರಂಪರಾ ನುಗತವಾಗಿ ಆಚರಿಸುವ ಗಣೇಶ ಚತುರ್ಥಿ ಹಬ್ಬವನ್ನು ವಿಧಿವತ್ತಾಗಿ ಆಚರಿಸುವಲ್ಲಿ ಸಮಸ್ಯೆಗಳು ಉದ್ಭವಿಸಬಹುದು. ಈ ಹಿನ್ನೆಲೆಯಲ್ಲಿ ರಾಜ್ಯದ ಶಿಕ್ಷಕರಿಗೆ ತಮ್ಮ ಮನೆಗಳಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲು ಅನುಕೂಲವಾಗುವಂತೆ ಶಿಕ್ಷಕರ ದಿನಾಚರಣೆಯನ್ನು ಸೆ. 6 ರಂದು ಆಚರಿಸುವಂತೆ ನಿರ್ಣಯವನ್ನು ಅಂಗೀಕರಿಸಿ ಸೂಕ್ತ ಆದೇಶ ಹೊರಡಿಸುವಂತೆ ಕ್ಯಾ. ಗಣೇಶ್ ಕಾರ್ಣಿಕ್ ಕೋರಿದ್ದಾರೆ.