ಮಡಿಕೇರಿ, ಜ. 10: ಸುದರ್ಶನ ಗೌಡ ಕೂಟದ 11ನೇ ವಾರ್ಷಿಕ ಮಹಾಸಭೆ ಕೊಡಗು ಗೌಡ ವಿದ್ಯಾ ಸಂಘದ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.ಕೂಟದ ಅಧ್ಯಕ್ಷ ಪಾಣತ್ತಲೆ ಬಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಕರ್ಣಯ್ಯನ ರವಿ, ನಗರಸಭಾಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಇದ್ದರು ಕರ್ಣಯ್ಯನ ರವಿ ಉದ್ಘಾಟಿಸಿದರು.
2015ನೇ ಸಾಲಿನ ವಾರ್ಷಿಕ ಮಹಾಸಭೆಯ ನಡಾವಳಿಕೆ ಹಾಗೂ 2016ನೇ ಆಡಳಿತ ಮಂಡಳಿಯ ಸದಸ್ಯರ ವರದಿಯನ್ನು ಕೂಟದ ಕಾರ್ಯದರ್ಶಿ ಬಳಪದ ಮಂದಣ್ಣ ವಾಚಿಸಿದರು. ಲೆಕ್ಕ ಪತ್ರ ಮಂಡನೆಯನ್ನು ಖಜಾಂಚಿ ಮೇರ್ಕಜೆ ಬೋಪಯ್ಯ ಮಾಡಿದರು.
ಸಭೆಯಲ್ಲಿ ನಗರ ಸಭೆ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಅವರನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್ಸಿಯಲ್ಲಿ ಶೇ. 100 ಅಂಕ ಪಡೆದ ಅಂಬೆಕಲ್ಲು ಚಹನ ಜೀವನ್ ಮತ್ತು ಪಿಯುಸಿಯಲ್ಲಿ ಶೇ. 94.84 ಅಂಕಗಳಿಸಿದ ಚೆರಿಯಮನೆ ಗಿರಿಧರ್ ಪುಟ್ಟಪ್ಪ ಇವರುಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಕೂಟದ ಗೌರವಾಧ್ಯಕ್ಷ ತಳೂರು ಆನಂದ ಮಾತನಾಡಿದರು. ಸಭೆಯಲ್ಲಿ ಕೂಟದ ಉಪಾಧ್ಯಕ್ಷ ಕಟ್ರತನ ಸದಾನಂದ, ನಿರ್ದೇಶಕರುಗಳಾದ ಪೊನ್ನೆಟಿ ಚಿಣ್ಣಪ್ಪ, ಪೂಜಾರಿರ ಬೆಳ್ಯಪ್ಪ, ಕರ್ಣಯ್ಯನ ವಿಮಲ, ಪೂಜಾರಿರ ಪುಷ್ಪ, ಪೂಜಾರಿರ ಕೃಪ , ಚಪ್ಪೇರ ಯಾದವ, ಕಾನೆಹಿತ್ಲು ಕೇಶವ, ಉದಿಯನ ಸುಭಾಶ್, ಪೊಯ್ಯಕಂಡಿ ಮಹೇಶ್ ಮತ್ತು ಪಾಣತ್ತಲೆ ವಿನೋದ್ ಭಾಗವಹಿಸಿದ್ದರು. ಮೃತಪಟ್ಟ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು.