ಸುಂಟಿಕೊಪ್ಪ, ನ. 7: ಸುಂಟಿಕೊಪ್ಪ ಪಟ್ಟಣದಲ್ಲಿ ಕನ್ನಡ ಕಂಪು ಎಲ್ಲೆಲ್ಲೂ ಪಸರಿಸಿದ್ದು, ಅಕ್ಷರಶಃ ಪಟ್ಟಣ ಇಂದು ಕನ್ನಡ ಮಯವಾಗಿತ್ತು. ಕನ್ನಡ ಭಾಷೆ ಸಂಸ್ಕøತಿ ಆಚಾರ ವಿಚಾರಗಳನ್ನು ಬಿಂಬಿಸುವ ಸ್ಥಬ್ಧ ಚಿತ್ರಗಳು, ಭುವನೇಶ್ವರಿಯನ್ನು ಹೊತ್ತೊಯ್ಯುತ್ತಿ ರುವ ಪ್ರತಿಮೆಯ ವಿಹಂಗಾಮ ನೋಟ, ಕನ್ನಡ ಸಂಸ್ಕøತಿಯ ಇಲಾಖೆಯ ಸೊಗಡಿನ ಡೊಳ್ಳು ಕುಣಿತ, ವಿದ್ಯಾರ್ಥಿಗಳ ಪರಿಸರ ಸ್ನೇಹಿ, ಕನ್ನಡದ ವೀರ ಮಣಿಗಳ ವೇಷ ಭೂಷಣ, ಸ್ವಚ್ಛತೆ, ಜಲ ನೆಲದ ಕಾಳಜಿಯ ಭಿತ್ತಿ ಪತ್ರಗಳ ಮೆರವಣಿಗೆ ಆಕರ್ಷಕವಾಗಿತ್ತು.

ಕಳೆದ 5 ವರ್ಷಗಳಿಂದ ಇಲ್ಲಿನ ತಲೆಹೊರೆ ಕಾರ್ಮಿಕ ಸಂಘದವರು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದು, ಅದಕ್ಕೆ ಸ್ಥಳೀಯ ಎಲ್ಲಾ ಶಾಲಾ-ಕಾಲೇಜಿನವರು ಸಹಕಾರ ನೀಡುತ್ತಿದ್ದಾರೆ. ಕನ್ನಡ ಸಂಸ್ಕøತಿ ಇಲಾಖೆ ಈ ಬಾರಿ ನೆರವು ನೀಡಿದ್ದ ರಿಂದ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ಬೆಳಿಗ್ಗೆ ಕನ್ನಡ ವೃತ್ತದಲ್ಲಿ ತಾಯಿ ಭುವನೇಶ್ವರಿ ದೇವಿಯ ಜಾಥಾಕ್ಕೆ ಸುಂಟಿಕೊಪ್ಪ ಠಾಣಾಧಿಕಾರಿ ಅನೂಪ್ ಮಾದಪ್ಪ, ಕನ್ನಡ ಸಾಹಿತ್ಯ ಪರೀಷತ್ ಅಧ್ಯಕ್ಷ ಎಂ.ಎಸ್. ಸುನೀಲ್ ಚಾಲನೆ ನೀಡಿದರು. ಚಾಮುಂಡೇಶÀ್ವರಿ ದೇವಾಲಯದಿಂದ ಕುಂಭ ಕಳಶ ಹೊತ್ತ ಮಹಿಳೆಯರು, ಸಂತ ಅಂತೋಣಿ ಶಾಲೆ, ಸರಕಾರಿ ಪದವಿ ಪೂರ್ವ ಕಾಲೇಜು, ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು, ಸರಕಾರಿ ಪ್ರೌಢಶಾಲೆ, ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಗದ್ದೆಹಳ್ಳ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು, ಸಂತ ಮೇರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಬ್ಯಾಂಡ್ ವಾದ್ಯದೊಂದಿಗೆ ತಾಯಿ ಭುವನೇಶ್ವರಿ ದೇವಿಯ ತೇರಿನ ಮೆರವಣಿಗೆಯಲ್ಲಿ ಕನ್ನಡ ಭಾಷೆ, ನೆಲ-ಜಲ, ಪರಿಸರವನ್ನು ಪ್ರತಿಬಿಂಬಿಸುವ ಸ್ಥಬ್ಧ ಚಿತ್ರಗಳನ್ನು ಟ್ರ್ಯಾಕ್ಟರ್‍ನಲ್ಲಿ ಅಳವಡಿಸಿ ಕನ್ನಡ ಭಾಷೆ ನೆಲ, ಜಲ ಸಂರಕ್ಷಣೆ ಬಗ್ಗೆ ಘೋಷಣೆ ಕೂಗುತ್ತಾ ಗದ್ದೆಹಳ್ಳದ ಗಾಂಧಿ ವೃತ್ತÀದವರೆಗೆ ಬಂದು ಅನಂತರ ವಾಪಾಸ್ಸು ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ತೆರಳಿ ಕೊನೆಗೆ ವಾಹನ ಚಾಲಕರ ಸಂಘದ ಆವರಣದಲ್ಲಿ ಸಮಾಪ್ತಿಗೊಳಿಸಲಾಯಿತು.

‘ಹಸಿರು ಬೆಳೆಸಿ ನಿರು ಉಳಿಸಿ’ ಪಟಾಕಿ ಮುಕ್ತ ಹಬ್ಬ ಆಚರಿಸಿ ಜಲ,ನೆಲ ಸಂರಕ್ಷಣೆ ನಮ್ಮೆಲ್ಲರ ಹೊಣೆ ‘ಸ್ವಚ್ಛ ಕರ್ನಾಟಕ ಸ್ವಚ್ಛ ಸುಂಟಿಕೊಪ್ಪ’ ಎಂಬ ನಾಮಫಲಕಗಳನ್ನು ಹಿಡಿದ ವಿದ್ಯಾರ್ಥಿಗಳು ಕನ್ನಡ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಜನರ ಗಮನ ಸೆಳೆದರು.

ವಾಹನ ಚಾಲಕರ ಸಂಘದ ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಜಿ.ಪಂ. ಸದಸ್ಯೆ ಚಂದ್ರಕಲಾ, ಕನ್ನಡಿಗರಲ್ಲಿ ಭಾಷಾಭಿಮಾನದ ಕೊರತೆ ಇದೆ. ಹೊರ ರಾಜ್ಯಕ್ಕೆ ತೆರಳಿದಾಗ ಅಲ್ಲಿನ ಮಾತೃ ಭಾಷೆಯಲ್ಲಿ ಮಾತನಾಡಿಸು ತ್ತಾರೆ. ಕನ್ನಡ ಭಾಷೆ ಬೆಳವಣಿಗೆಗೆ ಇಲ್ಲಿ ನೆಲೆಸಿರುವ ಎಲ್ಲಾ ಭಾಷಿಕರು ಕೈ ಜೋಡಿಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಗ್ರಾ. ಪಂ. ಉಪಾಧ್ಯಕ್ಷ ಪಿ. ಆರ್. ಸುಕುಮಾರ್ ಮಾತನಾಡಿ, ಈ ವರ್ಷ ಬರಗಾಲ ಬಂದಿದೆ. ಕಾವೇರಿ ನೀರಿನ ವಿವಾದದಿಂದ ಕೊಡಗಿನ ಜನತೆಗೆ ಆತಂಕದಲ್ಲಿದ್ದಾರೆ. ಕಾವೇರಿ ತಾಯಿ, ಭುವನೇಶ್ವರಿ ತಾಯಿ ನಾಡಿಗೆ ಒಳಿತನ್ನು ಅನುಗ್ರಹಿಸಲಿ ಎಂದು ಹಾರೈಸಿದರು. ತಾ.ಪಂ. ಸದಸ್ಯೆ ವಿಮಲಾವತಿ ಮಾತನಾಡಿ, ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯರುಗಳಾದ ಕೆ.ಇ.ಕರೀಂ, ಎ.ಶ್ರೀಧರ್, ಸೋಮಯ್ಯ, ಸಿ. ಚಂದ್ರ, ಶಾಯಿದ್, ವಳ್ಳಿ, ಗಿರಿಜಾ ಉದಯ್, ನಾಗರತ್ನ, ಶೋಭಾರವಿ, ಸಮಾಜ ಸೇವಕ ಇಸಾಕ್ ಖಾನ್, ವಾಹನ ಚಾಲಕರ ಸಂಘದ ಅಧ್ಯಕ್ಷ ಬಿ.ಕೆ. ತಿಮ್ಮಪ್ಪ, ಆಟೋ ಚಾಲಕರ ಸಂಘದ ಅಧ್ಯಕ್ಷ ಮುಸ್ತಾಫ, ಕೊಡವ ಸಮಾಜದ ಉಪಾಧ್ಯಕ್ಷ ಎಂ.ಎ. ವಸಂತ್, ಕನ್ನಡ ರಕ್ಷಣಾ ವೇದಿಕೆಯ ನಾಗೇಶ್ ಪೂಜಾರಿ, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೋಮಚಂದ್ರ, ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಾಲಕೃಷ್ಣ, ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಸ್.ಸಿ. ಗೀತಾ, ಸಂತಮೇರಿ ಅಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಸೆಲ್ವರಾಜ್, ವಾಹನ ಚಾಲಕರ ಸಂಘದ ಅಧ್ಯಕ್ಷ ಬಿ.ಕೆ. ತಿಮ್ಮಪ್ಪ, ಸಂತ ಅಂತೋಣಿ ಶಾಲೆಯ ಶಿಕ್ಷಕ, ಶಿಕ್ಷಕಿಯರು, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್, ಟೈಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ಎಚ್. ಶಿವಣ್ಣ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕಾರ್ಯದರ್ಶಿ ಬಿ.ಡಿ. ರಾಜುರೈ, ಕೊಡಗು ಜಿಲ್ಲಾ ಕಾರ್ಮಿಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಅಣ್ಣಾ ಶರೀಫ್, ಸುಂಟಿಕೊಪ್ಪ ನಾಡು ಗೌಡ ಸಂಘದ ಖಜಾಂಜಿ ಪಟ್ಟೆಮನೆ ಉದಯ ಕುಮಾರ್ ಮತ್ತಿತರರು ಇದ್ದರು.

ಸನ್ಮಾನ: 10 ಬಾರಿ ಫುಟ್ಬಾಲ್‍ನಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳನ್ನು ತಯಾರು ಪಡಿಸಿದ ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ದೈÀಹಿಕ ಶಿಕ್ಷಣ ಶಿಕ್ಷಕÀ ಪಿ.ಇ. ನಂದಾ ಅವರಿಗೆ ತಲೆಹೊರೆ ಕಾರ್ಮಿಕ ಸಂಘದವರು ಸನ್ಮಾನಿಸಿ ಗೌರವಿಸಲಾಯಿತು.

ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮಂಜುಳ ಪ್ರಾರ್ಥಿಸಿ, ಎಂ. ಎ. ಉಸ್ಮಾನ್ ಸ್ವಾಗತಿಸಿ, ಪುನೀತ್, ಶಿಕ್ಷಕ ಟಿ.ಜಿ. ಪ್ರೇಮ್‍ಕುಮಾರ್ ಹಾಗೂ ಡಿ.ಎಂ. ಮಂಜುನಾಥ್ ಕಾರ್ಯಕ್ರಮ ನಿರ್ವಹಿಸಿದರು.