ಮಡಿಕೇರಿ, ಜು. 8: ಮಂಗಳೂರಿಲ್ಲಿ ಸೇವೆಯಲ್ಲಿದ್ದ ದಕ್ಷ ಅಧಿಕಾರಿ ಎಂ.ಕೆ. ಗಣಪತಿ ಅವರು ಸಂಶಯಾಸ್ಪದ ರೀತಿಯಲ್ಲಿ ಮಡಿಕೇರಿಯಲ್ಲಿ ಸಾವಿಗೀಡಾಗಿರುವದು ಕೊಡಗಿನ ಜನತೆಗೆ ದಿಗ್ಭ್ರಮೆಯನ್ನುಂಟುಮಾಡಿದೆ. ಸಾವಿಗೆ ಮುನ್ನ ಅವರು ನೀಡಿರುವ ಮಾಧ್ಯಮದ ಹೇಳಿಕೆ ತುಂಬಾ ಆಘಾತವನ್ನುಂಟು ಮಾಡಿದ್ದು, ಬಗ್ಗೆ ಸೂಕ್ತ ತನಿಖೆಯಾಗಬೇಕಿದೆ. ಕೊಡಗಿನ ದಕ್ಷ ಅಧಿಕಾರಿಯ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಕೊಡಗು ಬಂದ್ ಮಾಡಿ ಹೋರಾಟವನ್ನು ಮಾಡಬೇಕಾಗುತ್ತದೆ. ಪ್ರಕರಣವನ್ನು ಸಿ.ಬಿ.ಐ. ತನಿಖೆಗೆ ಒಪ್ಪಿಸುವಂತೆ ಜೆಡಿಎಸ್ ಮುಖಂಡ ಎಂ.ಟಿ. ಕಾರ್ಯಪ್ಪ ಆಗ್ರಹಿಸಿದ್ದಾರೆ.