ಸಿದ್ದಾಪುರ, ಜ.29: ಕೊಡಗು ಮುಸ್ಲಿಂ ಒಕ್ಕೂಟ ವಾಟ್ಸಾಪ್ ಗ್ರೂಪ್ ವತಿಯಿಂದ ಎರಡು ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ರಮ ಇಲ್ಲಿನ ಸ್ವರ್ಣಮಾಲಾ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಎಮ್ಮೆಮಾಡು ಜುಮಾ ಮಸೀದಿಯ ಖತೀಬ್ ಇಸ್ಮಾಯಿಲ್ ಲತೀಫಿ ಹಾಗೂ ಗೋಣಿಕೊಪ್ಪಲು ಮಸೀದಿಯ ಖತೀಬ್ ಮುಹಮ್ಮದ್ ಅಲಿ ಫೈಝಿ ನಿಖಾಹ್ ನೇತೃತ್ವ ವಹಿಸಿದರು. ಸಮಸ್ತ ಕೊಡಗು ನಾಯಬ್ ಖಾಝಿ ಎಂ.ಎಂ ಅಬ್ದುಲ್ಲಾ ಫೈಝಿ ಪ್ರಾರ್ಥನೆ ನಿರ್ವಹಿಸಿದರು.

ಕೊಡಗು ಮುಸ್ಲಿಂ ಒಕ್ಕೂಟ ವಾಟ್ಸಾಪ್ ಗ್ರೂಪಿನ ಅಧ್ಯಕ್ಷ ಕೆ.ಹೆಚ್ ಮುಹಮ್ಮದ್ ರಫಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಹೊಳಮಾಳದ ಶಾಹಿಲ್ ಖಿರಾಹತ್ ಕೊಡಗು ಪಾರಾಯಣ ಮಾಡಿದರು. ಜಮಿಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಮಹಮ್ಮೂದ್ ಮುಸ್ಲಿಯಾರ್ ಉದ್ಘಾಟಿಸಿದರು. ಸಿದ್ದಾಪುರ ಜುಮಾ ಮಸೀದಿಯ ಖತೀಬ್ ಅಬ್ದು ಸಲಾಂ ಲತೀಫಿ ನಿಖಾಹ್ ಮಹತ್ವದ ಬಗ್ಗೆ ಭಾಷಣ ಮಾಡಿದರು.

ಜಿ.ಪಂ ಸದಸ್ಯ ಅಬ್ದುಲ್ ಲತೀಫ್ ಮಾತನಾಡಿ, ವಾಟ್ಸಾಪ್ ಮೂಲಕ ಯುವಕರು ಬಡ ಕುಟುಂಬದ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ಕೆ ಮುಂದಾಗಿರುವದು ಒಳ್ಳೆಯ ಬೆಳವಣಿಗೆ. ಉಳ್ಳವರು ಇಲ್ಲದವರಿಗೆ ಸಹಾಯ ಮಾಡಬೇಕು ಎಂದರು. ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಮಾತನಾಡಿ, ಸಾಮಾಜಿಕ ಜಾಲತಾಣದ ಮೂಲಕ ಬಡ ಕುಟುಂಬದ ಕೈ ಹಿಡಿದು ಸಹಾಯಕ್ಕೆ ಮುಂದಾಗಿರುವ ಯುವಕರು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಭದ್ರಾವತಿಯ ಹಾರೂನ್ ಅಲ್ ಬುಖಾರಿ ತಂಙಳ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಕೆ.ಎ ಯಾಕೂಬ್, ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ ಉಸ್ಮಾನ್ ಹಾಜಿ, ಕೊಡಗು ಮುಸ್ಲಿಂ ಒಕ್ಕೂಟ ವಾಟ್ಸಾಪ್ ಗ್ರೂಪಿನ ಗೌರವಾಧ್ಯಕ್ಷ ನಾಸಿರ್ ಮಕ್ಕಿ, ವೀರಾಜಪೇಟೆ ಅನ್ವಾರುಲ್ ಹುದಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಲಿಯಾಕತ್ ಅಲಿ, ಗೋಣಿಕೊಪ್ಪ ಶಾಫಿ ಮುಸ್ಲಿಂ ಜಮಾಅತ್ ಸದಸ್ಯ ಪಿ.ಎ ಹಕೀಂ, ಗೋಣಿಕೊಪ್ಪ ಗ್ರಾ.ಪಂ ಸದಸ್ಯರಾದ ಪ್ರಮೋದ್ ಗಣಪತಿ, ಸಿ ಸೋಮಣ್ಣ, ಸಿದ್ದಾಪುರ ಗ್ರಾ.ಪಂ. ಸದಸ್ಯರಾದ ಹುಸೈನ್, ಅಬ್ದುಲ್ ಶುಕೂರ್, ಜಾಫರ್ ಅಲಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಗೋಣಿಕೊಪ್ಪದ ಸರ್ಫುದ್ದೀನ್ ಸ್ವಾಗತಿಸಿ, ಮೂರ್ನಾಡಿನ ಸೈಫ್ ಅಲಿ ನಿರೂಪಿಸಿ, ಪಾಲಿಬೆಟ್ಟದ ಅಬ್ದುಲ್ ರಶೀದ್ ವಂದಿಸಿದರು.