ಸಿದ್ದಾಪುರ, ಸೆ. 6: ಸಿದ್ದಾಪುರ ಗ್ರಾಮ ಪಂಚಾಯಿತಿಯ ತ್ಯಾಜ್ಯ ವಿಲೇವಾರಿಗೆ ಸೂಕ್ತ ಸ್ಥಳವನ್ನು ಜಿಲ್ಲಾಧಿಕಾರಿಗಳು ನೀಡಿದ್ದು, ಅಧಿಕಾರಿಗಳ ಕ್ರಮಕ್ಕೆ ಪಂಚಾಯಿತಿ ಆಡಳಿತ ಮಂಡಳಿ ಸಾಮಾನ್ಯ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.ಕಳೆದ ಸಾಲಿನ ಆಡಳಿತ ಮಂಡಳಿಗಳು ತ್ಯಾಜ್ಯ ವಿಲೇವಾರಿಗೆ ಶಾಶ್ವತ ಪರಿಹಾರಕ್ಕೆ ಯಾವದೇ ಸ್ಥಳ ನಿಗದಿಪಡಿಸಲು ಮುಂದಾಗಲಿಲ್ಲ. ಶರವೇಗದಲ್ಲಿ ಬೆಳೆಯುತ್ತಿರುವ ಪಟ್ಟಣದಲ್ಲಿ ಜನಸಂಖ್ಯೆಯು ಅಧಿಕವಾಗತೊಡಗಿತ್ತು. ತ್ಯಾಜ್ಯದ ಉಲ್ಭಣವು ಅಧಿಕವಾಗತೊಡಗಿತ್ತು. ಪ್ರಸ್ತುತ ಆಡಳಿತ ಮಂಡಳಿಗೆ ಭಾರೀ ಸಮಸ್ಯೆಯಾಗಿತ್ತು.
ಅಧಿಕಾರ ವಹಿಸಿಕೊಂಡ ಕ್ಷಣದಿಂದ ಆಡಳಿತ ಮಂಡಳಿ ಸದಸ್ಯರು ಪಣ ತೊಟ್ಟಿದರು. ಪಂಚಾಯಿತಿ ನಿಗದಿಪಡಿಸಿದ ಹಲವು ಪೈಸಾರಿ ಜಾಗಗಳನ್ನು ಕಂದಾಯ ಅಧಿಕಾರಿಗಳು ಪರಿಶೀಲನೆ ನಡೆಸಿದೆಯಾದರೂ ಫಲಿತಾಂಶ ಸಿಗಲಿಲ್ಲ. ಸ್ಥಳದ ಕೊರತೆಯಿಂದ ಪಂಚಾಯಿತಿ ಹಿಂಭಾಗ ಗುಂಡಿ ನಿರ್ಮಿಸಿ ತ್ಯಾಜ್ಯ ಶೇಖರಣೆಗೆ ಆಡಳಿತ ಮಂಡಳಿ ಮುಂದಾಗಿತ್ತು. ಈ ಸಮಸ್ಯೆ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀಳತೊಡಗಿತ್ತು.ಕೊನೆಗೆ ಚುನಾಯಿತ ಪ್ರತಿನಿಧಿಗಳು ಪ್ರತಿಭಟನೆಯ ಮೂಲಕ ತ್ಯಾಜ್ಯ ವಿಲೇವಾರಿಗೆ ಸ್ಥಳ ಪಡೆದುಕೊಳ್ಳುವಲ್ಲಿ ಯಶ್ವಸಿಯಾಗಿದ್ದಾರೆ. ಸ್ಥಳ ಗುರುತಿಸಿದ ಕಂದಾಯ ಇಲಾಖೆ, ಪ್ರತಿಭಟನೆಗೆ ಕೈ ಜೋಡಿಸಿದ ವಾಣಿಜ್ಯ ಉದ್ಯಮಿಗಳಿಗೆ ಹಾಗೂ ಎಲ್ಲಾ ಸಂಘಟನೆಗಳಿಗೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಕೃತಜ್ಞತೆ ವ್ಯಕ್ತ ಪಡಿಸಿದರು.
ಸಿದ್ದಾಪುರ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷ ಎಂ.ಕೆ. ಮಣಿ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್, ಸಿಬ್ಬಂದಿಗಳು ಹಾಜರಿದ್ದರು. - ಅಂಚೆಮನೆ ಸುಧಿ