ಮಡಿಕೇರಿ, ಆ. 29: ಕಸ ವಿಲೆÉೀವಾರಿ ಸಮಸ್ಯೆಗೆ ಸಂಬಂಧಿಸಿ ದಂತೆ ಕಾಂಗ್ರೆಸ್ ಹಾಗೂ ಎಸ್‍ಡಿಪಿಐ ತಾ. 30 ರಂದು (ಇಂದು) ಸಿದ್ದಾಪುರ ಬಂದ್‍ಗೆ ಕರೆ ನೀಡಿರುವದು ಖಂಡನೀಯವೆಂದು ಸಿಪಿಐಎಂ ಪಕ್ಷದ ಸಿದ್ದಾಪುರ ಗ್ರಾಮ ಸಮಿತಿ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಕಾರ್ಯದರ್ಶಿ ಎಸ್. ಬೈಜು, ಸಿದ್ದಾಪುರ ವ್ಯಾಪ್ತಿಯಲ್ಲಿ ಕಳೆದ ಅನೇಕ ವರ್ಷಗಳಿಂದ ಕಸದ ಸಮಸ್ಯೆ ಇದ್ದು, ಇಲ್ಲಿಯವರೆಗೆ ಬಗೆಹರಿದಿಲ್ಲ. ಇದೀಗ ಗ್ರಾ.ಪಂ.ಯಲ್ಲಿ ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ಮತ್ತು ಎಸ್‍ಡಿಪಿಐ ಆಡಳಿತ ನಡೆಸುತ್ತಿದ್ದು, ಸಮಸ್ಯೆ ಪರಿಹಾರಕ್ಕೆ ಸ್ಪಂದಿಸದೆ ಬಂದ್‍ಗೆ ಕರೆ ನೀಡಿರುವದು ಅತ್ಯಂತ ಖಂಡನೀಯವೆಂದರು. ಅಧಿಕಾರದಲ್ಲಿ ಇರುವವರೇ ಪಂಚಾಯಿತಿ ಎದುರು ಪ್ರತಿಭಟನೆ ನಡೆಸುತ್ತಿರುವದು ಅತ್ಯಂತ ಹಾಸ್ಯಾಸ್ಪದವಾಗಿದೆ.

ಸಿದ್ದಾಪುರ ವ್ಯಾಪ್ತಿಯಲ್ಲಿ ಶ್ರೀಮಂತರು ಒತ್ತುವರಿ ಮಾಡಿಕೊಂಡಿ ರುವ ಜಾಗವನ್ನು ವಶಕ್ಕೆ ಪಡೆದು ಕೊಂಡು ಕಸ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರೂ ಇದನ್ನು ನಿರ್ಲಕ್ಷಿಸಲಾಗಿದೆ. ಜನ ವಿರೋಧಿಯಾಗಿ ಬಂದ್‍ಗೆ ಕರೆ ನೀಡದೆ ಕಸ ವಿಲೆÉೀವಾರಿ ಸಮಸ್ಯೆಗೆ ಸೂಕ್ತ ಯೋಜನೆ ರೂಪಿಸದಿದ್ದಲ್ಲಿ ಜನ ಬೆಂಬಲದೊಂದಿಗೆ ಪಕ್ಷದ ವತಿಯಿಂದ ಹೋರಾಟ ನಡೆಸಲಾಗುವದೆಂದು ಬೈಜು ಎಚ್ಚರಿಕೆ ನೀಡಿದರು.

ಸಮಿತಿ ಸದಸ್ಯ ಎನ್.ಕೆ. ಅನಿಲ್ ಮಾತನಾಡಿ, ಕಳೆದ ಐವತ್ತು ವರ್ಷ ಗಳಿಂದ ಸಿದ್ದಾಪುರ ಗ್ರಾ.ಪಂ.ಯನ್ನು ಆಳುತ್ತಿರುವ ಕಾಂಗ್ರೆಸ್ ಪಕ್ಷವೇ ಇಂದು ಬಂದ್‍ಗೆ ಕರೆ ನೀಡಿರುವದು ಅತ್ಯಂತ ನಾಚಿಕೆಗೇಡಿನ ವಿಚಾರವಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್‍ನ ಜಿ.ಪಂ. ಸದಸ್ಯರಿದ್ದಾರೆ. ಅಲ್ಲದೆ, ರಾಜ್ಯದÀಲ್ಲಿ ಕಾಂಗ್ರೆಸ್ ಆಡಳಿತವಿದೆ. ಆದರೂ ಬಂದ್‍ಗೆ ಕರೆ ನೀಡುವ ಮೂಲಕ ಪ್ರತಿಭಟನೆಗೆ ಮುಂದಾಗಿರು ವದು ಖಂಡನೀಯ. ಜನ ಪ್ರತಿನಿಧಿಗಳ ಮತ್ತು ಅಧಿಕಾರಿಗಳ ಸಲಹೆಯಂತೆ ಇತ್ತೀಚೆಗೆ ಅರಣ್ಯ ವ್ಯಾಪ್ತಿಯಲ್ಲಿ ಕಸ ವಿಲೆÉೀವಾರಿ ಮಾಡಲಾಗುತ್ತಿತ್ತು. ಕಸದ ಗುಂಡಿಗೆ ಕಾಡಾನೆಗಳು ಬಿದ್ದ ಹಿನ್ನೆಲೆ ಯಲ್ಲಿ ಅರಣ್ಯ ಇಲಾಖೆÉ ಕಸ ವಿಲೆÉೀವಾರಿಗೆ ತಡೆಯೊಡ್ಡಿತ್ತು. ಈ ಕಾರಣದಿಂದ ಜನರು ಗ್ರಾ.ಪಂ. ಹಿಂಭಾಗದಲ್ಲೇ ಕಸ ವಿಲೇವಾರಿ ಮಾಡತೊಡಗಿದರು. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತದೆ ಎಂದು ಜನರಲ್ಲಿ ಜಾಗೃತಿ ಮೂಡಿಸ ಲಾಗುತ್ತಿತ್ತು. ಇದರಿಂದ ಬೇಸತ್ತ ಕಾಂಗ್ರೆಸ್ ಮತ್ತು ಎಸ್‍ಡಿಪಿಐ ಪ್ರತಿನಿಧಿ ಗಳು ಜನರ ಹಾದಿ ತಪ್ಪಿಸಲು ಬಂದ್‍ಗೆ ಕರೆ ನೀಡಿವೆ ಎಂದು ದೂರಿದರು.

ಸಿಪಿಐಎಂ ಜನರ ಬೆಂಬಲ ಪಡೆದು ಗ್ರಾ.ಪಂ. ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಲಿದೆ ಎಂದು ಎನ್.ಕೆ. ಅನಿಲ್ ಹೇಳಿದರು. ಸುದ್ದಿಗೋಷ್ಠಿ ಯಲ್ಲಿ ಸಮಿತಿ ಸದಸ್ಯ ರಾಮನ್ ಕುಟ್ಟಿ ಉಪಸ್ಥಿತರಿದ್ದರು.