ಮಡಿಕೇರಿ ಅ. 3: ಕೊಡವ ನ್ಯಾಷನಲ್ ಕೌನ್ಸಿಲ್‍ನ ಅಧ್ಯಕ್ಷರಾದ ಎನ್.ಯು.ನಾಚಪ್ಪ ಸುಳ್ಳು ಇತಿಹಾಸವನ್ನು ಸೃಷ್ಟಿಸು ತ್ತಿದ್ದಾರೆ ಎಂದು ಆರೋಪಿಸಿರುವ ವಕೀಲ ಕೆ.ಆರ್. ವಿದ್ಯಾಧರ್, ನಾಚಪ್ಪ ವಿರುದ್ಧ ಕಾನೂನು ಹೋರಾಟವನ್ನು ಆರಂಭಿಸಿರುವದಾಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಚಪ್ಪ ಅವರಿಂದ ಮುಗ್ದ ಕೊಡವರ ಗೌರವಕ್ಕೆ ಧಕ್ಕೆಯಾಗುತ್ತಿದ್ದು, ಪ್ರಜ್ಞಾವಂತ ಕೊಡವರು, ಕೊಡವ ಸಮಾಜ ಹಾಗೂ ಮಾಜಿ ಸೈನಿಕರು ಈ ಬಗ್ಗೆ ಗಮನಿಸುವಂತೆ ಕೋರಿದರು. ಕೊಡವ ಲ್ಯಾಂಡ್ ಬೇಡಿಕೆ ಮುಂದಿಡುವದು ಸರಿಯಲ್ಲ. ಶೋಷಣೆಗೆ ಒಳಗಾಗುತ್ತಿರುವ ಕೆಂಬಟ್ಟಿ, ಕುಡಿಯ, ಯರವ, ಕುರುಬ ಇಂತಹ ಜನಾಂಗಗಳ ಬಗ್ಗೆಯೂ ಕಾಳಜಿ ಅಗತ್ಯ ಎಂದರು.

ಕೊಡಗು ಜಿಲ್ಲೆಯಲ್ಲಿ ನಕ್ಸಲರಿಗೆ ಯಾರು ಬೆಂಬಲ ನೀಡುತ್ತಿದ್ದಾರೆ ಎನ್ನುವುದನ್ನು ಪತ್ತೆಹಚ್ಚಲು ತನಿಖೆÉ ನಡೆಸುವಂತೆ ಎನ್.ಯು. ನಾಚಪ್ಪ ಒತ್ತಾಯಿಸಿದ್ದು, ಇದನ್ನು ತಾವು ಸ್ವಾಗತಿಸುವದಾಗಿ ತಿಳಿಸಿದರು. ಈ ತನಿಖೆÉಯಿಂದಷ್ಟೇ ನಕ್ಸಲರಿಂದ ಪ್ರಚೋದನೆಗೆ ಒಳಗಾದವರು ಯಾರು ಎನ್ನುವದು ಬಹಿರಂಗವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಿಎನ್‍ಸಿ ಸಂಘಟನೆಯನ್ನು ಇಲ್ಲಿಯವರೆಗೆ ನೋಂದಣಿ ಮಾಡಿಕೊಳ್ಳದೆ ಸರ್ಕಾರದ ನೋಂದಾವಣೆÉ ಕಾಯ್ದೆ ಯನ್ನು ಉಲ್ಲಂಘಿಸಲಾಗಿದೆ. ಸಂಘÀಟನೆ ಸಂಗ್ರಹಿಸುವ ಹಣದ ಲೆಕ್ಕ ಪತ್ರ ನೀಡಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ ನೋಂದಾವಣೆ ಮಾಡದೆ ನುಣುಚಿಕೊಳ್ಳಲಾಗುತ್ತಿದೆ ಎಂದು ವಿದ್ಯಾಧರ್ ಆರೋಪಿಸಿದರು.

ನಕ್ಸಲ್ ಕಾರ್ಯಾಚರಣೆಯ ಆರೋಪ ಎದುರಿಸುತ್ತಿರುವ ರೂಪೇಶ್‍ನ ಪರವಾಗಿ ತಾನೊಬ್ಬ ನ್ಯಾಯವಾದಿಯಾಗಿರುವದರಿಂದ ವಕಾಲತ್ತನ್ನು ವಹಿಸಿದ್ದೇನೆ. ಈ ಹಕ್ಕು ದೇಶದ ಕಾನೂನಿನಲ್ಲಿ ನೀಡಲಾಗಿದೆ ಯೆಂದು ಅವರು ಸಮರ್ಥಿಸಿ ಕೊಂಡರು. ದೇವಟ್ ಪರಂಬು ವಿವಾದವನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.

ಕೊಡಗಿನ ಹಿರಿಯ ಸಾಹಿತಿ ದಿ. ಡಾ. ಐ.ಮಾ. ಮುತ್ತಣ್ಣ ಅವರು ರಚಿಸಿ 1980 ರಲ್ಲಿ ಪ್ರಕಟಗೊಂಡ ಟಿಪ್ಪುವಿನ ಕುರಿತಾದ ಸಂಶೊಧನಾ ಗ್ರಂಥದಲ್ಲಿ ಟಿಪ್ಪುವನ್ನು ಖಳ ನಾಯಕನೆಂದು ಹೇಳಲಾಗಿದೆಯೇ ಹೊರತು ಎಲ್ಲಿಯೂ ದೇವಟ್ ಪರಂಬು ಎನ್ನುವ ಪ್ರದೇಶ ಅಥವಾ ಹತ್ಯಾಕಾಂಡದ ಪ್ರಸ್ತಾಪವಿಲ್ಲವೆಂದು ವಿದ್ಯಾಧರ್ ಹೇಳಿದರು.

ರಾಜ್ಯದಲ್ಲಿ ನಿಷೇಧಕ್ಕೆ ಒಳಗಾಗಿರುವ ಕರ್ನಾಟಕ ವಿಮೋಚನಾ ರಂಗದಿಂದ ಪ್ರೇರೇಪಿತರಾಗಿ ನಾಚಪ್ಪ ಅವರು ಕಾರ್ಯಾಚರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‍ನ ಮುಖಂಡರಾದ ಬ್ರಿಜೇಶ್ ಕಾಳಪ್ಪ ಹಾಗೂ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು, ಸಿಎನ್‍ಸಿ ಸಂಘಟನೆಯಿಂದ ಸನ್ಮಾನ ಸ್ವೀಕರಿಸುವ ಮೂಲಕ ನಾಚಪ್ಪ ಮಾಡುತ್ತಿರುವದು ಸರಿಯೆಂದು ಒಪ್ಪಿಕೊಂಡಿದ್ದಾರೆ. ಫ್ರೆಂಚ್ ಸರ್ಕಾರ ಕೊಡವರನ್ನು ಕ್ಷಮೆ ಕೇಳಬೇಕೆಂದು ಒತ್ತಾಯಿಸುತ್ತಿರುವ ಸಿಎನ್‍ಸಿಯ ಬೇಡಿಕೆ ಬೌದ್ಧಿಕ ದಿವಾಳಿತನದ್ದೆಂದು ಟೀಕಿಸಿದರು. ರಂಗಕರ್ಮಿ ಅಡ್ಡಂಡÀ ಸಿ. ಕಾರ್ಯಪ್ಪ ಅವರು ವಂಚನೆಯನ್ನು ಮರೆಮಾಚಲು ಜಿಲ್ಲೆಯನ್ನು ತ್ಯಜಿಸಿದ್ದಾರೆ ಎಂದು ವಿದ್ಯಾಧರ್ ಆರೋಪಿಸಿದರು.