ನಾಪೆÇೀಕ್ಲು, ಜ. 28: ರಾಸಾಯನಿಕ ಕೃಷಿಯಿಂದ ಮಾನವನ ಕುಲ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ ಎಂದು ಬಲ್ಲಮಾವಟಿ ಗ್ರಾಮದ ಪ್ರಗತಿಪರ ಕೃಷಿಕ ಎಡಿಕೇರಿ ಗಣಪತಿ ಅಭಿಪ್ರಾಯಪಟ್ಟರು.
ಸಮೀಪದ ಬಲ್ಲಮಾವಟಿಯ ಎಡಿಕೇರಿ ಗಣಪತಿ ಅವರ ಕಾಫಿ ತೋಟದಲ್ಲಿ ನವಭಾರತ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಸಾವಯವ ಕಾಫಿ ಬೆಳೆ ಕ್ಷೇತ್ರೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾನು ಕಳೆದ 5 ವರ್ಷಗಳಿಂದ ನವಭಾರತ ಸಂಸ್ಥೆಯ ಸಾವಯವ ಗೊಬ್ಬರವನ್ನು ಬಳಸುತ್ತಿದ್ದು, ಮಣ್ಣಿನ ಫಲವತ್ತತೆ ಹೆಚ್ಚುವದರ ಮೂಲಕ ಉತ್ತಮ ಇಳುವರಿ ಪಡೆಯುತ್ತಿದ್ದೇನೆ ಎಂದರು.
ರಾಸಾಯನಿಕ ಗೊಬ್ಬರ ಬಳಕೆಯಿಂದ ತೋಟ ಬಂಜರು ಬೀಳುವದರ ಮೂಲಕ ಹಂತ ಹಂತವಾಗಿ ಇಳುವರಿ ಕಡಿಮೆ ಯಾಗುತ್ತಿದೆ. ಆದುದರಿಂದ ಕೃಷಿಕರು ಸಾವಯವ ಗೊಬ್ಬರ ಬಳಸುವದರ ಮೂಲಕ ಉತ್ತಮ ಇಳುವರಿ ಪಡೆದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ನವಭಾರತ ಸಂಸ್ಥೆಯ ವ್ಯವಸ್ಥಾಪಕ ಶಿವರಾಜ್, ಸಾವಯವ ಗೊಬ್ಬರ ಬಳಕೆಯಿಂದ ಜಮೀನಿನ ಫಲವತ್ತತೆ ಹೆಚ್ಚುವದರಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದರು. ಕೃಷಿ ಅಧಿಕಾರಿಗಳಾದ ಸೋಮಶೇಖರ್, ನಂದೀಶ್ ಸಾವಯವ ಗೊಬ್ಬರ ಬಳಕೆಯಿಂದ ಆಗುವ ಪ್ರಯೋಜನಗಳ ಬಗ್ಗೆ ವಿವರಿಸಿದರು.
ಈ ಸಂದರ್ಭ ಕೃಷಿ ಅಧಿಕಾರಿಗಳಾದ ಕುಮಾರ ಸ್ವಾಮಿ ದಯಾನಂದ್, ಗಣೇಶ್, ಗ್ರಾಮಸ್ಥರಾದ ಕುಶಾಲಪ್ಪ, ಸೋಮಯ್ಯ, ರಾಣಿ ಇದ್ದರು.