ಮಡಿಕೇರಿ, ಆ. 31: ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶ್ರೀ ಸಾಯಿಶಂಕರ ಶಾಲೆಯಲ್ಲಿ ಆಚರಿಸಲಾಯಿತು. ಶಾಲಾ ಭವನಾ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಶಾಲಾ ಪುಟಾಣಿ ವಿದ್ಯಾರ್ಥಿಗಳು ಕೃಷ್ಣ ಹಾಗೂ ರಾಧೆಯ ವೇಷಧರಿಸಿ ಪ್ರದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಹೇಶ್ ಭಟ್ ಭಾಗವಹಿಸಿ ದಿನದ ಮಹತ್ವವನ್ನು ತಿಳಿಸಿದರು. ರೀನಾ ಹಾಗೂ ಟಿ. ವಿನಾಯಕ ಕಾರ್ಯ ಕ್ರಮದಲ್ಲಿ ತೀರ್ಪುಗಾರರಾಗಿ ಭಾಗವಹಿಸಿದರು. ಆಡಳಿತ ಮಂಡಳಿಯವರು ಮತ್ತು ಪೋಷಕರು ಹಾಜರಿದ್ದರು.
ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ ಹಾಗೂ ಮುಖ್ಯ ಅತಿಥಿಗಳು ಬಹುಮಾನ ವಿತರಿಸಿದರು. ಕಾರ್ಯಕ್ರಮವನ್ನು ಮುಕ್ಕಾಟಿರ ಮಂಜುರಾಯ್ ನಿರೂಪಿಸಿದರು.