ಮಡಿಕೇರಿ, ಡಿ. 10: ಕನ್ನಡ ಮತ್ತು ಸಂಸ್ಕøತಿ ಇಲಾಖೆ, ವಿವಿಧ ಅಕಾಡೆಮಿಗಳು ಮತ್ತು ಪ್ರಾಧಿಕಾರಗಳ ಆಶ್ರಯದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಆತಿಥ್ಯದೊಂದಿಗೆ ಇಲ್ಲಿನ ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆದ ಸಂಗಮ-ಸಂಭ್ರಮ ಕಾರ್ಯಕ್ರಮ ಸಾಂಸ್ಕøತಿಕ ಸಾಮರಸ್ಯಕ್ಕೆ ಸಾಕ್ಷಿಯಾಯಿತು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ನಡೆದ ಭಾಷಾ ಬಾಂಧವ್ಯ ಸಂವಾದದಲ್ಲಿ ವಿವಿಧ ಭಾಷೆಗಳ ಸಂಬಂಧಗಳು ಬೆಸೆದುಕೊಂಡವು. ಕೊಡವ ಸಾಹಿತ್ಯ ಅಕಾಡೆಮಿಯಿಂದ ಕರವಟ್ಟಿರ ಬಿ. ಅಯ್ಯಣ್ಣ ಅವರ ಚಿಂಗಾರ ಪೊಟ್ಟಿ ಕವನ ಸಂಕಲನ ಹಾಗೂ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಹೊರತರಲಾದ ಸೋಬಾನೆ ಸೊಬಗು ಸಿಡಿ ಬಿಡುಗಡೆಗೊಂಡಿತು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಜಾನಪದ ಅಕಾಡೆಮಿ ಯಕ್ಷಗಾನ ಬಯಲಾಟ ಅಕಾಡೆಮಿಗಳ ಸಾಂಸ್ಕøತಿಕ ಕಾರ್ಯಕ್ರಮ ಗಮನಸೆಳೆದವು.

ಅರೆಭಾಷೆ ಅಕಾಡೆಮಿ ಹಾಗೂ ಕೊಡವ ಸಹಿತ್ಯ ಅಕಾಡೆಮಿಗಳ ಸಂಸ್ಕøತಿಯನ್ನು ಬಿಂಬಿಸುವ ವೈವಿಧ್ಯಮಯ ಕಾರ್ಯಕ್ರಮಗಳು ಜನಮನ ಸೂರೆಗೊಂಡವು. ಮಂಜೇಶ್ವರದ ಸಿದ್ದಿಕ್ ಅವರ ಕಂಠಸಿರಿಯಲ್ಲಿ ಮೂಡಿಬಂದ ಐಕ್ಯತಾ ಗೀತೆ ಮೆಚ್ಚುಗೆ ಗಳಿಸಿತು.