ಸಿದ್ದಾಪುರ, ಸೆ. 20: ಶಾಲಾ ಬಾಲಕಿಗೆ ಚುಂಬಿಸಲು ಮುಂದಾಗಿ ಬಳಿಕ ಬೆದರಿಕೆಯೊಡ್ಡಿದ ವ್ಯಕ್ತಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ ಘಟನೆ ಸಮೀಪದ ಮಾಲ್ದಾರೆಯ ಗುಡ್ಲೂರು ಬಳಿ ನಡೆದಿದೆ.
ಮಾಲ್ದಾರೆ ಗುಡ್ಲೂರು ನಿವಾಸಿ ನಾಗೇಶ್ (45) ಎಂಬಾತ ಬಾಲಕಿಯೊಬ್ಬಳು ಶಾಲೆಯಿಂದ ಮನೆಗೆ ಹಿಂತಿರುಗುವ ವೇಳೆ ದಾರಿ ಮಧ್ಯದಲ್ಲಿ ಆಕೆಯನ್ನು ತಡೆದು ಆಕೆಯ ಕೆನ್ನೆ ಕಚ್ಚಿದ್ದಾನೆ. ಬಾಲಕಿಯು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಸಂದರ್ಭ ನಾಗೇಶ್ ತನ್ನ ಕಾಲಿನಿಂದ ಆಕೆಯನ್ನು ಬೀಳಿಸಿದ್ದು, ವಿಷಯ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವದಾಗಿ ಬೆದರಿಕೆಯೊಡಿರುವದಾಗಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣಾಧಿಕಾರಿ ಬಿ.ಜಿ. ಕುಮಾರ್ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ನಾಗೇಶ್‍ನನ್ನು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.