ಸೋಮವಾರಪೇಟೆ, ಅ.20: ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾಗಿ ಎಚ್.ಎನ್ ವೆಂಕಟೇಶ್ ಆಯ್ಕೆ ಯಾಗಿದ್ದಾರೆ.

ಇಲ್ಲಿನ ಸವಿತಾ ಸಮಾಜದ ಸಭಾಂಗಣದಲ್ಲಿ ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಕೆ.ಎನ್. ದೊರೇಶ್, ರಾಜ್ಯ ಪ್ರತಿನಿಧಿಯಾಗಿ ಪುಟ್ಟರಾಜು ಹಾಗೂ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾಗಿ ರಾಧಾ ಪುಟ್ಟರಾಜು ಆಯ್ಕೆಯಾದರು. ಇದೇ ಸಂದರ್ಭ ಜಿಲ್ಲೆಯ ಮೂರು ತಾಲೂಕುಗಳಿಗೆ ನೂತನ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಯಿತು. ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷರಾಗಿ ಮಧು, ಜಿಲ್ಲಾ ಪ್ರತಿನಿಧಿಯಾಗಿ ಚರಣ, ಮಹಿಳಾ ಘಟಕದ ಅಧ್ಯಕ್ಷರಾಗಿ ಸುಂದರಮ್ಮ ಆಯ್ಕೆಯಾದರು. ವೀರಾಜಪೇಟೆ ಘಟಕದ ಅಧ್ಯಕ್ಷರಾಗಿ ಕೆ.ಟಿ. ವೆಂಕಟೇಶ್, ಜಿಲ್ಲಾ ಪ್ರತಿನಿಧಿಯಾಗಿ ಪಿ.ಎಸ್. ದಿನೇಶ್ ಆಯ್ಕೆಯಾದರು.

ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷರಾಗಿ ಶಿವಣ್ಣ, ಜಿಲ್ಲಾ ಪ್ರತಿನಿಧಿಯಾಗಿ ಎಚ್.ಆರ್. ರಾಮಕೃಷ್ಣ, ಮಹಿಳಾ ಘಟಕದ ಅಧ್ಯಕ್ಷರಾಗಿ ಪುಷ್ಪಾ ಜಯರಾಂ ಆಯ್ಕೆಯಾದರು. ಇದರೊಂದಿಗೆ ಸೋಮವಾರಪೇಟೆ ಪಟ್ಟಣದ ಘಟಕದ ಅಧ್ಯಕ್ಷರಾಗಿ ಎ.ಪಿ. ಶಂಕರ್, ಕಾರ್ಯದರ್ಶಿಯಾಗಿ ಎನ್. ಬಾಲಕೃಷ್ಣ ಆಯ್ಕೆಯಾದರು.