ಗೋಣಿಕೊಪ್ಪಲು, ಸೆ. 20: ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸರ್ಕಾರಿ ಪದವಿ ಕಾಲೇಜು ಹೊರತು ಪಡಿಸಿದರೆ, ವೀರಾಜಪೇಟೆ ತಾಲೂಕಿನ 22 ಗ್ರಾ.ಪಂ. ವ್ಯಾಪ್ತಿಯಲ್ಲಿ ಒಂದೇ ಒಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇರುವದಿಲ್ಲ. ಈ ನಿಟ್ಟಿನಲ್ಲಿ ರಾಜಕೀಯ ರಹಿತವಾಗಿ ಎಲ್ಲ ಗ್ರಾ.ಪಂ. ಪ್ರತಿನಿಧಿಗಳು, ಜಿ.ಪಂ., ತಾ.ಪಂ. ಹಾಗೂ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಚಿವರ ಸಹಕಾರದೊಂದಿಗೆ ಪೆÇನ್ನಂಪೇಟೆ ಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪಿಸುವ ನಿಟ್ಟಿನಲ್ಲಿ ಪೆÇನ್ನಂಪೇಟೆ ತಾ.ಪಂ. ಸಾಮಥ್ರ್ಯ ಸೌಧದಲ್ಲಿ ಕಾಲೇಜು ಕ್ರಿಯಾ ಸಮಿತಿ ಸಂಚಾಲಕ ಆಪಟ್ಟಿರ ಟಾಟು ಮೊಣ್ಣಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಕಾಲೇಜು ಸ್ಥಾಪನೆಗೆ ಅಗತ್ಯವಿರುವ ನಿವೇಶನ ಹಾಗೂ ಕೊಠಡಿಗಳ ಅವಶ್ಯಕತೆ ಬಗ್ಗೆ ಹಲವು ಗಣ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ಸಂದರ್ಭ ಪೆÇನ್ನಂಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಭಕ್ಕೆ ಹೋರಾಟ ನಡೆಸಲು ಸಂಚಾಲಕ ಟಾಟು ಮೊಣ್ಣಪ್ಪ, ಅರುಣ್ ಭೀಮಯ್ಯ, ತೀತಿರ ಧರ್ಮಜ ಉತ್ತಪ್ಪ ಹಾಗೂ ಕೋಳೇರ ದಯಾ ಚಂಗಪ್ಪ ಅವರಿಗೆ 12 ಮಂದಿಯ ಸಮಿತಿ ರಚಿಸಲು ಸಭೆಯಲ್ಲಿ ಅಧಿಕಾರ ನೀಡಲಾಯಿತು.
ಉದ್ದೇಶಿತ ಸರ್ಕಾರಿ ಪದವಿ ಕಾಲೇಜು ಸ್ಥಾಪನೆಗೆ 1995 ರಲ್ಲಿಯೇ ಬೇಡಿಕೆ ಇದ್ದು ಮಾಜಿ ಸಂಸದ ಎಸ್.ಎಂ. ವಿಶ್ವನಾಥ್ ಅವರ ಅವಧಿಯಲ್ಲಿಯೂ ಈ ಬಗ್ಗೆ ಪತ್ರ ವ್ಯವಹಾರ ನಡೆದರೂ, ಕೆಲವು ಖಾಸಗಿ ಕಾಲೇಜುಗಳ ತಂತ್ರಗಾರಿಕೆ ಯಿಂದಾಗಿ ಕಾಲೇಜು ಸ್ಥಾಪನೆಗೆ ಹಿನ್ನಡೆ ಉಂಟಾಯಿತು. ಈ ನಿಟ್ಟಿನಲ್ಲಿ ಸುಮಾರು 22 ಗ್ರಾ.ಪಂ.ಗಳ ಪರಿಶಿಷ್ಟ ಜಾತಿ ಮತ್ತು ಪಂಗಡ, ಬಡ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅತ್ಯವಶ್ಯಕವಾದ ಪದವಿ ಕಾಲೇಜನ್ನು ಪೆÇನ್ನಂಪೇಟೆಯಲ್ಲಿ ಸ್ಥಾಪಿಸುವದು ಅನಿವಾರ್ಯ ಎಂದು ಸಭೆಯಲ್ಲಿ ಚರ್ಚಿಸಲಾಯಿತು. ಪೆÇನ್ನಂಪೇಟೆಯ ಪುಚ್ಚಿಮಾಡ ಹರೀಶ್ ಮಾತನಾಡಿ, ಇಲ್ಲಿನ ಸರ್ಕಾರಿ ಪ.ಪೂ. ಕಾಲೇಜು ಮುಂಭಾಗ ಈ ಹಿಂದಿನ ಬಿಎಚ್ಇಎಲ್ ಕಾರ್ಖಾನೆಗೆ ನೀಡಿದ ಸ್ಥಳ ಆಹಾರ ನಿಗಮದ ಸುಪರ್ದಿಯಲ್ಲಿದ್ದು, ಮತ್ತೊಂದೆಡೆ ಪೆÇನ್ನಂಪೇಟೆ ನ್ಯಾಯಾಲಯ ಕಲಾಪಕ್ಕೆ ಅವಕಾಶ ಮಾಡಿಕೊಡ ಲಾಗಿದೆ. ಇದೀಗ ನಿರೀಕ್ಷಣಾ ಮಂದಿರ ಸಮೀಪ ಪೆÇನ್ನಂಪೇಟೆ ನ್ಯಾಯಾಲಯ ಸಮುಚ್ಛಯ ಕಾಮಗಾರಿ ನಡೆಯುತ್ತಿದ್ದು ಮುಂದೆ ಹಾಲಿ ನ್ಯಾಯಾಲಯ ತೆರವುಗೊಳ್ಳಲಿದೆ. ಮುಂದೆ ಸರ್ಕಾರಿ ಪದವಿ ಕಾಲೇಜಿಗೆ ಪ್ರತ್ಯೇಕ ನಿವೇಶನದೊಂದಿಗೆ ಕಾಲೇಜು ಕ್ಯಾಂಪಸ್ಗೆ ಉತ್ತಮ ಸ್ಥಳವಾಗಲಿದೆ. ತಾತ್ಕಾಲಿಕವಾಗಿ ಪದವಿ ತರಗತಿ ಗಳನ್ನು ಆರಂಭಿಸಲು ಎರಡು-ಮೂರು ಕೊಠಡಿ ಖಾಲಿ ಇರುವದಾಗಿ ಹೇಳಿದರು.
ಕಾಂಗ್ರೆಸ್ ಪ್ರಮುಖ ಸರಾ ಚಂಗಪ್ಪ ಮಾತನಾಡಿ, ಈ ಹಿಂದೆ ಪೆÇನ್ನಂಪೇಟೆ ಸರ್ಕಾರಿ ಪ.ಪೂ. ಕಾಲೇಜು ಆವರಣದಲ್ಲಿಯೇ ಸುಮಾರು ಒಂದೂವರೆ ಎಕರೆ ನಿವೇಶನ ಗುರುತಿಸಿದ್ದು, ಹಲವು ಕೊಠಡಿಗಳೂ ಖಾಲಿ ಇರುವ ಹಿನ್ನೆಲೆ ಮೊದಲಿಗೆ ತಾತ್ಕಾಲಿಕವಾಗಿ ಪ.ಪೂ. ಕಾಲೇಜು ಆವರಣದಲ್ಲಿಯೇ ಪದವಿ ಕಾಲೇಜು ಆರಂಭಿಸುವದು ಸೂಕ್ತ ಎಂದು ಅಭಿಪ್ರಾಯಪಟ್ಟರು. ಪ.ಪೂ. ಕಾಲೇಜು ಮೈದಾನವನ್ನೇ ಪದವಿ ಕಾಲೇಜು ವಿದ್ಯಾರ್ಥಿಗಳು ಬಳಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಮಾಜಿ ಜಿ.ಪಂ. ಸದಸ್ಯ ಮೂಕಳೇರ ಕುಶಾಲಪ್ಪ ಮಾತನಾಡಿ, ಪೆÇನ್ನಂಪೇಟೆ ಕೊಡವ ಸಮಾಜ ಆಶ್ರಯದಲ್ಲಿ ವಿದ್ಯಾಸಂಸ್ಥೆ ನಡೆಸುವ ಉದ್ದೇಶದೊಂದಿಗೆ ಅಪ್ಪಚ್ಚ ಕವಿ ಪ.ಪೂ. ಕಾಲೇಜು ಆರಂಭಿಸಲಾಗಿ, ವಿದ್ಯಾರ್ಥಿ ಕೊರತೆಯಿಂದಾಗಿ ಇದೀಗ ಸ್ಥಗಿತಗೊಂಡಿದೆ. ಆಟದ ಮೈದಾನ, ಬಾಸ್ಕೆಟ್ ಬಾಲ್ ಮೈದಾನ, ಕೊಠಡಿಗಳು ಒಳ ಗೊಂಡಂತೆ ಸುಮಾರು ನಾಲ್ಕು ಎಕರೆ ನಿವೇಶನ ಲಭ್ಯವಿದೆ. ಇದರಲ್ಲಿ ಶಿಕ್ಷಣ ಸಂಸ್ಥೆ ಅಭಿವೃದ್ಧಿ ಉದ್ಧೇಶಕ್ಕಾಗಿಯೇ ಸುಮಾರು ಎರಡು ಎಕರೆ ಪೈಸಾರಿ ಜಾಗವನ್ನು ಸರ್ಕಾರ ನೀಡಿದೆ. ಕೊಡವ ಸಮಾಜಕ್ಕೆ ಸರ್ಕಾರಿ ಪದವಿ ಕಾಲೇಜು ಸ್ಥಾಪನೆಗೆ 4 ಎಕರೆ ಜಾಗವನ್ನು ಕೋರಿ ಮನವಿ ಮಾಡಿದ್ದಲ್ಲಿ ಶಿಕ್ಷಣ ಸಂಸ್ಥೆ ಅಭಿವೃದ್ಧಿಗೂ ಪೂರಕವಾಗಲಿದೆ. ಈ ನಿಟ್ಟಿನಲ್ಲಿ ಪ್ರಯತ್ನಿಸುವ ಎಂದು ಮಾಹಿತಿ ನೀಡಿದರು.
ಖಾಸಗಿ ಕಾಲೇಜುಗಳಲ್ಲಿ ದುಬಾರಿ ಶುಲ್ಕವಿದ್ದು ಪರಿಶಿಷ್ಟ ಜಾತಿ-ಪಂಗಡದ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣ ಕಷ್ಟ ಸಾಧ್ಯವಾಗುತ್ತಿದ್ದು, ಪೆÇನ್ನಂಪೇಟೆಯಲ್ಲಿ ಸರ್ಕಾರಿ ಪದವಿ ಕಾಲೇಜು ಬೇಗನೆ ಆರಂಭಗೊಳ್ಳಲಿ ಎಂದು ಜಿಲ್ಲಾ ಯರವ ಒಕ್ಕೂಟದ ಅಧ್ಯಕ್ಷ ಮಣಿಕುಂಜ್ಞ ಅಭಿಪ್ರಾಯ ಪಟ್ಟರು. ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಸರ್ಕಾರಿ ಕಾಲೇಜು ಸ್ಥಾಪನೆ ಪೆÇನ್ನಂಪೇಟೆ ಮುಖ್ಯ ರಸ್ತೆ ಸಮೀಪವೇ ಇರುವ ಸರ್ಕಾರಿ ನಿವೇಶನದಲ್ಲಿ ಆರಂಭಗೊಳ್ಳುವದು ಉತ್ತಮ. ಮೊದಲಿಗೆ ಇಲ್ಲಿನ ಸರ್ಕಾರಿ ಪ.ಪೂ. ಕಾಲೇಜು ಆವರಣದಲ್ಲಿರುವ ಕೊಠಡಿಗಳಲ್ಲಿ ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವ. ಪೆÇನ್ನಂಪೇಟೆಯ ಹಲವೆಡೆ ಸರ್ಕಾರಿ ನಿವೇಶನಗಳಿದ್ದು ಮುಂದೆ ಕಟ್ಟಡ ಕಾಮಗಾರಿ ಕೈಗೊಳ್ಳಬಹುದು. ಈ ನಿಟ್ಟಿನಲ್ಲಿ ರಾಜಕೀಯ ರಹಿತವಾಗಿ ಎಲ್ಲರೂ ಸಹಕಾರ ನೀಡಬೇಕೆಂದರು.
ವೀರಾಜಪೇಟೆ ವಿಧಾನ ಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಅರುಣ್ ಭೀಮಯ್ಯ ಮಾತನಾಡಿ, ಪೆÇನ್ನಂಪೇಟೆಯಲ್ಲಿ ಸರ್ಕಾರಿ ಕಾಲೇಜು ಸ್ಥಾಪನೆಗೆ ಹಲವು ವರ್ಷಗಳ ಬೇಡಿಕೆ ಇದ್ದರೂ, ಇನ್ನೂ ಈಡೇರಲಿಲ್ಲ. ಮಡಿಕೇರಿ ತಾಲೂಕಿನಲ್ಲಿ ಒಟ್ಟು 3 ಸರ್ಕಾರಿ ಪದವಿ ಕಾಲೇಜುಗಳಿದ್ದು, ಇಲ್ಲಿ ಒಂದೇ ಪದವಿ ಕಾಲೇಜು ಇದೆ. ಈ ನಿಟ್ಟಿನಲ್ಲಿ ಜಿ.ಪಂ. ಸಭೆಯಲ್ಲಿಯೂ ಕಾಲೇಜು ಸ್ಥಾಪನೆ ಬಗ್ಗೆ ಚರ್ಚೆ ಆಗಬೇಕಾಗಿದೆ. ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಸಂಸದರು, ಸಚಿವರು ಹಾಗೂ ಎಲ್ಲಾ ರಾಜಕೀಯ ಪಕ್ಷಗಳ ಜನಪ್ರತಿನಿಧಿ ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶೀಘ್ರ ಕಾಲೇಜು ಸ್ಥಾಪನೆಗೆ ಸರ್ಕಾರದ ಅನುಮತಿ ಹೊಂದಿಕೊಳ್ಳುವದು ಅಗತ್ಯವಿದೆ ಈ ಬಗ್ಗೆ ತಾನೂ ಪೂರಕವಾಗಿ ಸಹಕಾರ ನೀಡುವದಾಗಿ ಹೇಳಿದರು.
ಸಭೆಯಲ್ಲಿ ಎರ್ಮು, ಹುದಿಕೇರಿಯ ವಾಸು ಕುಟ್ಟಪ್ಪ, ತೀತಿರ ಊರ್ಮಿಳಾ, ಕೋಳೇರ ದಯಾ ಚಂಗಪ್ಪ, ಕುಟ್ಟದ ತಿಮ್ಮಯ್ಯ ಮುಂತಾದವರು ಮಾತನಾಡಿದರು. ಸಭೆಯಲ್ಲಿ ಪೆÇನ್ನಂಪೇಟೆ ಜಿ.ಪಂ. ಸದಸ್ಯೆ ಶ್ರೀಜಾ ಸಾಜಿ ಅಚ್ಯುತನ್, ಪೆÇನ್ನಂಪೇಟೆ ಗ್ರಾ.ಪಂ.ಅಧ್ಯಕ್ಷೆ ಸುಮಿತ, ತಾ.ಪಂ. ಸದಸ್ಯರಾದ ಆಶಾ ಜೇಮ್ಸ್, ಆಶಾ ಪೂಣಚ್ಚ, ಜಯ ಪೂವಯ್ಯ, ಬಾಳೆಲೆಯ ಬೋಸ್ ಮಂದಣ್ಣ, ಮಾಯಮುಡಿ ಗ್ರಾ.ಪಂ. ಅಧ್ಯಕ್ಷ ಟಿಪ್ಪು ಬಿದ್ದಪ್ಪ, ಪೆÇನ್ನಂಪೇಟೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ರೇಖಾ ಶ್ರೀಧರ್, ತಾಲೂಕು ಯುವ ಒಕ್ಕೂಟ ಅಧ್ಯಕ್ಷೆ ಜ್ಯೋತಿ ಪೆÇನ್ನಪ್ಪ, ಹರಿಹರದ ಮುಕ್ಕಾಟಿರ ಸಂದೀಪ್, ಕಂದಾ ಸುಬ್ಬಯ್ಯ, ದ.ಸಂ.ಸ.ದ ಹೆಚ್.ಡಿ. ರಮೇಶ್, ಕಾನೂರಿನ ಚಿರಿಯಪಂಡ ನಾಣಯ್ಯ, ಮೂಕಳಮಾಡ ಅರಸು ನಂಜಪ್ಪ ಮುಂತಾದವರು ಪಾಲ್ಗೊಂಡಿದ್ದರು.
- ಟಿ.ಎಲ್. ಶ್ರೀನಿವಾಸ್