ಮಡಿಕೇರಿ, ಸೆ. 28: ವಿದ್ಯಾರ್ಥಿಗಳು ಸಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಭ್ರಷ್ಟಾಚಾರದ ವಿರುದ್ಧ ಯುವಕರು ನಿಲ್ಲಬೇಕು ಎಂದು ಜೆ.ಸಿ.ಐ. ಸಂಸ್ಥೆ ವಲಯ ಅಧ್ಯಕ್ಷ ದೇವಿ ಪ್ರಸಾದ್ ಹೇಳಿದರು.

ಕಾವೇರಿ ಕಾಲೇಜಿನಲ್ಲಿ ರಾಷ್ಟ್ರೀಯ ಯೋಜನ ಘಟಕದ ವತಿಯಿಂದ ಸಂವಹನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಯೋಜನಾ ಅಧಿಕಾರಿಗಳಾದ ಅಂಬಿಕಾ, ನಾಗರಾಜ್ ಮತ್ತು ಉಪನ್ಯಾಸಕಿಯರಾದ ರೇವತಿ ಮತ್ತು ಕಾವೇರಿ ಉಪಸ್ಥಿತರಿದ್ದರು. ಮೈನಾ ಸ್ವಾಗತಿಸಿ, ಗಗನ್ ವಂದಿಸಿದರು.