ಕೊಣನೂರು, ಡಿ. 10: ಸಂಗೀತ ಪಿತಾಮಹ ಪುರಂದರ ದಾಸರು, ಶ್ರೇಷ್ಟ ಕೀರ್ತನಾಕಾರ ಕನಕದಾಸರು, ತ್ಯಾಗರಾಜರು, ವಾದಿರಾಜರಂತಹ ಮಹಾನ್ ದಿಗ್ಗಜರುಗಳು ತಮ್ಮ ಸಂಗೀತದ ಮಾಂತ್ರಿಕ ಶಕ್ತಿಯಿಂದಲೇ ಸಾಕ್ಷಾತ್ ಭಗವಂತನನ್ನು ಧ್ಯಾನಿಸಿ ದರ್ಶನ ಪಡೆಯುತ್ತಿದ್ದರು ಎಂಬದಕ್ಕೆ ಇಲ್ಲಿ ನಿರ್ಮಾಣ ಮಾಡಿರುವ ಸಪ್ತಸ್ವರ ದೇವತಾ ಮಂದಿರವೇ ಸಾಕ್ಷಿ ಎಂದು ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ತಿಳಿಸಿದರು.ಸಂಗೀತ ಗ್ರಾಮ ರುದ್ರಪಟ್ಟಣದ ವಿಶ್ವ ವಿಖ್ಯಾತ ಸಪ್ತಸ್ವರ ದೇವತಾ ಮಂದಿರದ ಆವರಣದಲ್ಲಿರುವ ರಾಮ ಮಂದಿರದಲ್ಲಿ ಪೂಜಾ ಕೈಂಕರ್ಯದ ನಂತರ ಮಾತನಾಡಿದರು.

ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಪಿಟೀಲು ಚೌಡಯ್ಯ, ಕೃಷ್ಣಮೂರ್ತಿ, ಭಾಗವತರಂತಹ ಮಹಾನ್ ದಿಗ್ಗಜರು ಪುರಾತನ ಕಾಲದಿಂದಲೂ ಈ ರಾಮಮಂದಿರ ದಲ್ಲಿ ಸಂಗೀತ ಕಚೇರಿ ನಡೆಸಿ ಕೊಡುತ್ತಿದ್ದರು ಎಂಬದನ್ನು ಕೇಳಿ ನಮಗೆ ಬಹಳ ಆನಂದವಾಯಿತು. ದೇಶದ ನಾನಾ

(ಮೊದಲ ಪುಟದಿಂದ) ಭಾಗಗಳಿಂದ ಬರುವ ಸಹಸ್ರಾರು ಸಂಗೀತಾಸಕ್ತರನ್ನು ಹಾಗೂ ಸಂಗೀತ ಕಲಾವಿದರನ್ನು ಕರೆಸಿ, ಇದರ ಜೊತೆಗೆ ಸ್ಥಳೀಯ ಯುವ ಗಾಯನ ಸಮೂಹದ ಪ್ರತಿಭೆ ಅನಾವರಣ ಮಾಡಲು ವೇದಿಕೆಯನ್ನು ಕಲ್ಪಿಸಿ ಕೊಡುವ ಸಲುವಾಗಿ ಅವರಿಗೆ ಮೊದಲ ಆದ್ಯತೆ ನೀಡುತ್ತಿರುವದು ಹಾಗೂ ರುದ್ರಪಟ್ಟಣ ಸಂಗೀತ ಪರಂಪರೆಯ ಪ್ರೇಮವನ್ನು ಹಾಡಿನ ಮೂಲಕ ತೋರಿಸುತ್ತಿರುವದು ಶ್ಲಾಘನೀಯ ಎಂದು ಹೇಳಿದರು.

ಸೋಮವಾರಪೇಟೆ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಚಂದ್ರಮೋಹನ್ ಮಾತನಾಡಿ, ತಂಬೂರಿಯಾಕೃತಿ ಮಾದರಿಯಲ್ಲಿ ಸಪ್ತಸ್ವರ ಸಂಗೀತ ದೇವಾಲಯವನ್ನು ಅದ್ಭುತವಾಗಿ ನಿರ್ಮಿಸಿ, ಸಂಗೀತ ಮಂದಿರದ ಒಳಗೆ ಸಪ್ತಸ್ವರಗಳ ಅಧಿನಾಯಕರಾದ ವಿದ್ಯಾ ದೇವತೆ ಸರಸ್ವತಿ, ವಾದಿರಾಜರು, ಕನಕದಾಸರು, ಪುರಂದರದಾಸರು, ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಶಾಮಶಾಸ್ತ್ರಿಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಸಂಗೀತದ ಮೂಲಕವೇ ಈ ಮೂರ್ತಿಗೆ ಪೂಜೆ ಸಲ್ಲಿಸುತ್ತಿರುವದು ಒಂದು ವಿಶೇಷವಾದ ಪೂಜೆಯ ಜೊತೆಗೆ ಪ್ರತಿವರ್ಷ ಇಲ್ಲಿ ಸಂಗೀತೋತ್ಸವವನ್ನು ಅಚರಿಸಿ ಕೊಂಡು ಬರುತ್ತಿರಲು ಕಾರಣಕರ್ತರಾದ ಸಂಗೀತ ವಿಧ್ವಾನ್ ಗಾನ ಕೋಗಿಲೆ ರುದ್ರಪಟ್ಟಣದ ಅರ್.ಕೆ ಪದ್ಮನಾಭ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ಜಿಲ್ಲಾ ಜಾನಪದ ಪರಿಷತ್ ಉಪಾಧ್ಯಕ್ಷ ಕುಶಾಲಪ್ಪ, ಜಿಲ್ಲಾ ಸಂಚಾಲಕ ಸಂಕೇತ್ ಪೂವಯ್ಯ, ಆಕಾಶವಾಣಿ ಕಲಾವಿದೆ ಸುಜಾಲಾದೇವಿ, ಮಡಿಕೇರಿ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಅರಕಲಗೂಡು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಜಮೀರ್ ಅಹಮದ್, ರಾಮನಾಥಪುರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಎಂ.ಎನ್.ಕುಮಾರಸ್ವಾಮಿ, ಶರಣ ಸಾಹಿತ್ಯ ಪರಿಷತ್ತು ಖಜಾಂಚಿ ಸಿದ್ದರಾಜು ಮೊದಲಾದವರು ಭಾಗವಹಿಸಿದ್ದರು. ಕೊಡಗು ಜಿಲ್ಲಾ ಜನಪದ ಅಧ್ಯಯನ ತಂಡ ಸಂಗೀತ ಗ್ರಾಮ ರುದ್ರಪಟ್ಟಣದ ಸಪ್ತಸ್ವರ ದೇವತಾ ಮಂದಿರÀಕ್ಕೆ ಆಗಮಿಸಿತ್ತು.