ಮಡಿಕೇರಿ, ಅ. 5: ಮಡಿಕೇರಿ ದಸರಾ ಉತ್ಸವದಲ್ಲಿ ಕಳೆದ ಬಾರಿ ದ್ವಿತೀಯ ಬಹುಮಾನ ಪಡೆದ ನಗರದ ಶ್ರೀ ಚೌಡೇಶ್ವರಿ ದೇವಾಲಯ ಈ ಬಾರಿ 54ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದ್ದು, ಸಂಕಷ್ಟ ಹರ ಗಣಪತಿಯ ವ್ರತದೊಂದಿಗೆ ಮಹಾದೇವನಿಂದ ತ್ರಿಪುರಾಸುರರ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ಶ್ರೀ ಚೌಡೇಶ್ವರಿ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ಆರ್. ಗಿರೀಶ್ ತಿಳಿಸಿದ್ದಾರೆ.

ಎರಡು ಟ್ರ್ಯಾಕ್ಟರ್‍ಗಳನ್ನು ಅಳವಡಿಸಲಾಗುತ್ತಿದ್ದು, ದಿಂಡಿಗಲ್‍ನ ಅಣೈ ಲೈಟಿಂಗ್ ಬೋರ್ಡ್ ಒದಗಿಸಲಿದ್ದಾರೆ. ಬೆಂಗಳೂರಿನ ಸೌಂಡ್ ವಲ್ರ್ಡ್ ಸಂಸ್ಥೆ ಧ್ವನಿವರ್ಧಕ ವ್ಯವಸ್ಥೆ ಮಾಡಲಿದ್ದು, ಬೆಂಗಳೂರಿನ ಮಧುರಾ ಸಂಸ್ಥೆ ಸ್ಟುಡಿಯೋ ಸೆಟ್ಟಿಂಗ್ಸ್ ಮಾಡಲಿದೆ. ಟ್ರ್ಯಾಕ್ಟರ್ ಸೆಟ್ಟಿಂಗ್ಸ್‍ನ್ನು ಶೇಖರ, ರಾಕಿ ಮತ್ತು ತಂಡ ಮಾಡಲಿದ್ದು, ಶಶಿ ಮತ್ತು ಜನ್ನು ತಂಡ ಪ್ಲಾಟ್‍ಫಾರಂ ನಿರ್ಮಿಸಲಿದೆ. ಒಟ್ಟು 25 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್‍ನವರು ಕಲಾಕೃತಿಗಳನ್ನು ತಯಾರಿಸುತ್ತಿದ್ದಾರೆ. ಕಲಾಕೃತಿಗಳಿಗೆ ಚಲನವಲನವನ್ನು ಜಯರಾಂ ಆಚಾರ್ಯ, ಲಕ್ಷ್ಮಣ ಆಚಾರ್ಯ, ಹರೀಶ್ ಭೀಮಯ್ಯ ತಂಡದವರು ನೀಡಲಿದ್ದಾರೆ. ಬೆಂಗಳೂರಿನ ಫೈರೋ ಟೆಕ್ಕೊ ಸಂಸ್ಥೆಯ ಜಿ ಕನ್ನಡ ಮತ್ತು ಕಲರ್ಸ್ ಕನ್ನಡ ಶೋಗಳಲ್ಲಿ ಛಾಪು ಮೂಡಿಸಿರುವ ರಘು ಅವರ ಕೆನಾನ್ ಬ್ಲೋವರ್, ಟ್ವಿಸ್ಟಿಂಗ್ ಫೈಯರ್ ಮಂಟಪಕ್ಕೆ ವಿಶೇಷ ಮೆರುಗು ನೀಡಲಿದೆ ಎಂದು ಗಿರೀಶ್ ತಿಳಿಸಿದ್ದಾರೆ.ಒಟ್ಟು 18 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರ ಲಾಗುತ್ತಿದ್ದು, ಕುಡ್ಲದ ಮಿಂಚು ನಾಸಿಕ್ ಬ್ಯಾಂಡ್ ಮಂಟಪವನ್ನು ಮುನ್ನಡೆಸಲಿದೆ. ಬಹುಮಾನ ದೊಂದಿಗೆ ಜನಾಕರ್ಷ ಣೆಗೂ ಒತ್ತು ನೀಡಲಾಗುವದು ಎಂದು ಗಿರೀಶ್ ವಿವರಿಸಿದರು.

- ಉಜ್ವಲ್ ರಂಜಿತ್