ಮಡಿಕೇರಿ, ಆ. 2: ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ಮಹದೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಇತ್ತೀಚೆಗೆ ಪುತ್ತೂರು ಕೆಮ್ಮಿಂಜೆ ಬ್ರಹ್ಮಶ್ರೀ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ದೇವಾಲಯದ ಅನುಜ್ಞಾ ಕಲಶಾಭಿಷೇಕ, ಬಾಲಾಲಯ ಪ್ರತಿಷ್ಠೆ, ಮಹಾಪೂಜೆ ನಡೆಯಿತು.ಬಾಲಾಲಯ ಪ್ರತಿಷ್ಠಾಪನೆಯೊಂದಿಗೆ ಪ್ರತಿ ಸೋಮವಾರ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಮೃತ್ಯುಂಜಯ ಪೂಜೆ ಹಾಗೂ ರುದ್ರಾಭಿಷೇಕ ನಡೆಯಲಿದೆ. ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ದಾನಿಗಳ ಸಹಾಯವನ್ನು ಅಪೇಕ್ಷೆ ಪಡುತ್ತಿದ್ದು, ಧನ ಸಹಾಯ ನೀಡುವವರು ಮೂರ್ನಾಡು ಬ್ಯಾಂಕ್ ಆಫ್ ಮಹಾರಾಷ್ಟ್ರ ಬ್ಯಾಂಕ್ ಶಾಖೆಯ ಖಾತೆ ಸಂಖ್ಯೆ 60217415107 (IಈSಅ : ಒಂಊಃ0001514) ಕ್ಕೆ ಜಮಾ ಮಾಡಬಹುದು. ಹೆಚ್ಚಿನ ಮಾಹಿತಿಗೆ ಅಧ್ಯಕ್ಷರು ರಾಮಕೃಷ್ಣ 9449292650, ಕಾರ್ಯದರ್ಶಿ ಕಳ್ಳೀರ ಗಣಪತಿ 9448452190 ಅಥವಾ ಅರ್ಚಕರು 9449911225ನ್ನು ಸಂಪರ್ಕಿಸುವಂತೆ ಆಡಳಿತ ಮಂಡಳಿ ತಿಳಿಸಿದೆ.