ಶ್ರೀಮಂಗಲ, ಸೆ. 10: ವೆಸ್ಟ್ ನೆಮ್ಮಲೆ ಗ್ರಾಮದ ಕೆ.ಕೆ.ಆರ್.ನ ಕಾವೇರಿ ಕೊಡವ ಸಾಂಸ್ಕೃತಿಕ ಕೇಂದ್ರದ ಆಶ್ರಯದಲ್ಲಿ 34ನೇ ವರ್ಷದ ಕೈಲ್ ಪೊಳ್ದ್ ಹಬ್ಬದ ಪ್ರಯುಕ್ತ ಕ್ರೀಡಾಕೂಟ ನಡೆಯಿತು.ಕ್ರೀಡಾಕೂಟವನ್ನು ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಮಿದೇರಿರ ಕೆ. ಸೋಮಯ್ಯ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ರಸ್ತೆ ಓಟ, ಹಗ್ಗ ಜಗ್ಗಾಟ, ಮೋಟಾರ್ ಸೈಕಲ್ ಸ್ಲೋ ರೇಸ್, ತೆಂಗಿನಕಾಯಿಗೆ ಗುಂಡು ಹೊಡೆಯುವದು ಇತ್ಯಾದಿ ಸ್ವರ್ಧೆ ಏರ್ಪಡಿಸಲಾಗಿತ್ತು.ಈ ಸಂದರ್ಭ ಕೇಂದ್ರದ ಕಾರ್ಯದರ್ಶಿ ಮುಲ್ಲೇಂಗಡ ಕೆ. ಮುದ್ದಪ್ಪ, ಖಜಾಂಚಿ ಚೆಟ್ಟಂಗಡ ಪಿ. ಅಚ್ಚಪ್ಪ, ಆರ್.ಎಂ.ಸಿ. ಸದಸ್ಯ ಚೊಟ್ಟೆಯಂಡಮಾಡ ವಿಶು, ಗ್ರಾ.ಪಂ. ಸದಸ್ಯ, ಚೊಟ್ಟೆಯಂಡಮಾಡ ಉದಯ, ಉಳುವಂಗಡ ಪ್ರವೀಣ, ಕಾಯಪಂಡ ಅಪ್ಪಣ್ಣ, ಕಟ್ಟೇರ ಉದಯ ಮತ್ತಿತರರು ಹಾಜರಿದ್ದರು.

ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಡಿ.ಡಿ. ಕಾರ್ಯಪ್ಪ (ಪ್ರಥಮ), ಬಿ.ಪಿ. ರೋಶನ್ (ದ್ವಿತೀಯ), ಎಂ.ಕೆ. ಮುತ್ತಣ್ಣ (ತೃತೀಯ)ಸ್ಥಾನ ಪಡೆದರು.