ವೀರಾಜಪೇಟೆ, ಆ.10: ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 16ನೇ ವಾರ್ಡ್Àಗೆ ಸೇರಿದ ಪುರಾತನ ಶಿವಕೇರಿ ಬಡಾವಣೆ ಇತಿಹಾಸದಲ್ಲಿ ಪ್ರಾಮುಖ್ಯತೆ ಯನ್ನು ಪಡೆದಿದೆ. ಶಿವಕೇರಿಯಲ್ಲಿ ಅಧಿಕವಾಗಿ ಕಡು ಬಡವರು, ಶ್ರಮಿಕ ವರ್ಗ, ಕಾರ್ಮಿಕರಿಂದ ಕೂಡಿದ್ದರೂ ಜನಪ್ರತಿನಿಧಿಗಳು 4ದಶಕಗಳಿಂದಲೂ ಭೇಟಿ ಮಾಡದೆ ಶಿವಕೇರಿಯನ್ನು ತಿರಸ್ಕಾರ ಮನೋಭಾವದಿಂದ ನೋಡಿದ್ದಾರೆ. ಇದರಿಂದಾಗಿ ಶಿವಕೇರಿ ಹಿಂದುಳಿದ ಬಡಾವಣೆಗಳ ಪಟ್ಟಿಗೆ ಸೇರಿದಂತಾಗಿದೆ ಎಂದು ಜಾತ್ಯತೀತ ಜನತಾ ದಳದ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ಜನತಾ ದಳದ ಪಕ್ಷದಿಂದ ಶಿವಕೇರಿ ಬಡಾವಣೆಯಲ್ಲಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ಸುರೇಶ್ ಮಾತನಾಡಿ ಜಿಲ್ಲೆಯಾದ್ಯಂತ ನಿಷ್ಕ್ರಿಯವಾಗಿದ್ದ ಪಕ್ಷ ಈಗ ಪುನಃಶ್ಚೇತನದತ್ತ ಅಂಬೆಗಾಲಿರಿ ಸುತ್ತಿದೆ. ಮುಂದಿನ ಚುನಾವಣೆಯಲ್ಲಿ ಜನತೆಯ ಈಗಿನ ನಿರೀಕ್ಷೆಯಂತೆ ಸರಕಾರ ಬದಲಾಗುವದು ಖಚಿತ. ಎಲ್ಲರೂ ಸೇರಿ ಜನತಾ ದಳ ಪಕ್ಷದ ಸಂಘಟನೆ ಯನ್ನು ಬಲಿಷ್ಠ ಗೊಳಿಸೋಣ, ಪಕ್ಷದ ತಾಲೂಕು ಸಮಿತಿ ಅಧ್ಯಕ್ಷರಾದ ಮನಿಯಪಂಡ ಸಿ ಬೆಳ್ಳಿಯಪ್ಪ ಅವರು ಮತಗಟ್ಟೆ ಸಮಿತಿ ರಚನೆ ಅಭಿಯಾನ ಹಾಗೂ ಸದಸ್ಯತ್ವ ನೋಂದಣಿ ಯಲ್ಲಿ ಕಾರ್ಯ ¥ವೃತ್ತರಾಗಿದ್ದಾರೆ. ಪಕ್ಷ ಮತದಾರರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸಲಿದೆ ಎಂದು ಹೇಳಿದರು.

ಶಿವಕೇರಿಯ ಸಮುದಾಯ ಭವನದ ಆವರಣದಲ್ಲಿ ನಡೆದ ಸದಸ್ಯತ್ವ ನೋಂದಣಿ ಸಭೆಯಲ್ಲಿ ಪಕ್ಷದ ನಗರ ಘಟಕದ ಆರ್.ಎ. ಸಕ್ಲೇನ್, ಸಿ.ಎ.ನಾಸರ್, ಎಂ. ಆಯಾಜ್, ಎಸ್.ಎಟಿ. ಎಸ್.ಸಿ ಜಿಲ್ಲಾ ಘಟಕದ ಉಪಾಧ್ಯಕ್ಷ ಎಚ್.ಜಿ. ಗೋಪಾಲ್, ಶಿವಕೇರಿ ವಿಭಾಗದ ಪಕ್ಷದ ಕಾರ್ಯಕರ್ತರುಗಳಾದ ಎಚ್.ಎಸ್. ಶಂಕರ್, ಎಚ್.ವಿ. ಲೊಕೇಶ್, ಎಚ್.ಎಸ್. ಸುನಿಲ್, ನಂದಕುಮಾರ್ ಇತರರು ಹಾಜರಿದ್ದರು. ಎಚ್.ವಿ.ರವಿಕುಮಾರ್ ಸ್ವಾಗತಿಸಿ ನಿರೂಪಿಸಿದರು.

ಸಭೆಯ ನಂತರ ಪಕ್ಷದ ಕಾರ್ಯಕರ್ತರು ಎಚ್.ಜಿ. ಗೋಪಾಲ್ ನೇತೃತ್ವದಲ್ಲಿ ಶಿವಕೇರಿ ಬಡಾವಣೆಯ ಮನೆ ಮನೆಗೆ ತೆರಳಿ ಪುರುಷರ ಮಹಿಳೆಯರ 18 ವರ್ಷ ಮೇಲ್ಪಟ್ಟು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವವರನ್ನು ಸದಸ್ಯರಾಗಿ ಪಕ್ಷಕ್ಕೆ ನೋಂದಾಯಿಸುವ ಕಾರ್ಯ ಮುಂದುವರೆಸಿದರು.