ಗೋಣಿಕೊಪ್ಪಲು, ನ.15: ವೆಸ್ಟ್ನೆಮ್ಮಲೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಪ್ರಮಿಳಾ(35)ರನ್ನು ಸೋಮವಾರ ಅಪರಾಹ್ನ ಸ್ಥಳೀಯ ಯುವಕ ಅತ್ಯಾಚಾರವೆಸಗಿ ಬಳಿಕ ಭೀಕರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಗೋಣಿಕೊಪ್ಪಲಿನಲ್ಲಿ ಶವಪರೀಕ್ಷೆ ಸಂದರ್ಭ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ , ವಿವಿಧ ಮಹಿಳಾ ಸಂಘಟನೆ ಮೂಲಕ ನ್ಯಾಯಕ್ಕೆ ಒತ್ತಾಯಿಸಿ ವ್ಯಾಪಕ ಪ್ರತಿಭಟನೆ ನಡೆಯಿತಲ್ಲದೆ ಸ್ಥಳಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪೆÇಲೀಸ್ ಅಧೀಕ್ಷಕರು ಹಾಗೂ ವೀರಾಜಪೇಟೆ ತಹಶೀಲ್ದಾರರು ಆಗಮಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿ ಮಧ್ಯಾಹ್ನ 2 ಗಂಟೆಯವರೆಗೂ ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆ ಶವಾಗಾರ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿದ ಘಟನೆ ನಡೆಯಿತು.
ವೆಸ್ಟ್ನೆಮ್ಮಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಪ್ರಮಿಳಾ ಅವರು ತಾ.14ರಂದು ಅಪರಾಹ್ನ ರೂಟ್ಸ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪುತ್ರಿ ಹಾಗೂ ಪುತ್ರನನ್ನು ಕರೆತರುವ ಸಲುವಾಗಿ ಸುಮಾರು ಮುಕ್ಕಾಲು ಕಿ.ಮೀ. ಕಾಲ್ನಡಿಗೆಯಲ್ಲಿ ಬರುತ್ತಿದ್ದ ಸಂದರ್ಭ ಪಕ್ಕದ ಅಡವಿಯಲ್ಲಿ ಪೂರ್ವ ಯೋಜಿತವಾಗಿ ಅಡಗಿ ಕುಳಿತ್ತಿದ್ದ ಜೇನುಕುರುಬರ ಹರೀಶ್ ಎಂಬಾತ ಎಳೆದೊಯ್ದು ಮರದ ತುಂಡಿನಿಂದ ತಲೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಬಳಿಕ ಅತ್ಯಾಚಾರವೆಸಗಿದ್ದ.
ಅತಿಥಿ ಶಿಕ್ಷಕಿ ಹತ್ಯೆಯಾದ ಸುದ್ದಿ ಎಲ್ಲೆಡೆ ಬಿತ್ತರವಾಗುತ್ತಿದ್ದಂತೆ ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆ ಶವಾಗಾರ ಮುಂಭಾಗ ರಾತ್ರಿಯಿಡಿ ಶ್ರೀಮಂಗಲ, ನೆಮ್ಮಲೆ, ಬಿರುನಾಣಿ, ಗೋಣಿಕೊಪ್ಪಲು ಗ್ರಾಮಸ್ಥರು ನೆರೆದು ಸಂತಾಪ ವ್ಯಕ್ತಪಡಿಸುತ್ತಿದ್ದುದು ಕಂಡು ಬಂತು. ಶವಪರೀಕ್ಷೆಯನ್ನು ಮಡಿಕೇರಿ ಮೆಡಿಕಲ್ ಕಾಲೇಜಿನ ವಿಧಿ ವಿಜ್ಞಾನ ತಜ್ಞರು ನಡೆಸಬೇಕಾದುದರಿಂದ ಇಂದು ಮಧ್ಯಾಹ್ನದ ವರೆಗೂ ಕಾಯಬೇಕಾಯಿತು. ಮೆಡಿಕಲ್ ಕಾಲೇಜಿನ ಡಾ. ರವಿಕುಮಾರ್ ಅವರು ಸ್ಥಳೀಯ ವೈದ್ಯರ ನೆರವಿನೊಂದಿಗೆ ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ನೆರವೇರಿಸಿದರು.
ಶಿಕ್ಷಕಿಯ ಹತ್ಯೆ ವಿಚಾರ ತಿಳಿದು ಇಂದು ಕೊಡಗು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಸ್.ಚೇತನ್, ಸೋಮವಾರ ಪೇಟೆ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಸುರೇಂದ್ರ, ರಾಜ್ಯ ವಲಯ ಉಪಾಧ್ಯಕ್ಷ ಶಿವಕುಮಾರ್, ರಾಜ್ಯ ಗೌರವ ಅಧ್ಯಕ್ಷ ಯೋಗೇಶ್, ಪದಾಧಿಕಾರಿಗಳಾದ ಬಸವರಾಜು, ದೇವರಾಜು, ಶಶಿಧರ್, ದೇವರಾಜೇಗೌಡ ಮುಂತಾದವರು ಶಿಕ್ಷಕ ಮಿತ್ರರೊಂದಿಗೆ ಶವಾಗಾರದ ಮುಂಭಾಗದಲ್ಲಿಯೇ ನ್ಯಾಯಕ್ಕಾಗಿ ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಸಿದರು.
ಕೊಡಗು ಜಿಲ್ಲೆಯಲ್ಲಿ ಶಿಕ್ಷಕರ ಕೊರತೆಯಿದ್ದು ವೀರಾಜಪೇಟೆ ತಾಲೂಕಿನಲ್ಲಿಯೂ ಸುಮಾರು 100 ಶಿಕ್ಷಕರ ಕೊರತೆ ಇದೆ. ಇದೀಗ ದುರಂತ ಅಂತ್ಯ ಕಂಡ ಪ್ರಮೀಳಾ ಅವರಿಗೆ ಕ್ಷೇತ್ರ ಶಿಕ್ಷಣ ಇಲಾಖೆಯಿಂದ ಕಿಂಚಿತ್ತೂ ಆರ್ಥಿಕ ಸಹಾಯವಿಲ್ಲ. ಶಾಲಾಭಿವೃದ್ಧಿ ಸಮಿತಿ ರೂ.2000 ಗೌರವ ಧನ ನೀಡುತ್ತಿದೆ. ಇಬ್ಬರು ಪುಟ್ಟ ಮಕ್ಕಳನ್ನು ಪ್ರಮಿಳಾ ಅಗಲಿದ್ದು ಸರ್ಕಾರ ತುರ್ತು ಪರಿಹಾರ ಘೋಷಣೆ ಮಾಡಬೇಕು. ಅತಿಥಿ ಶಿಕ್ಷಕಿ ಪ್ರಮೀಳಾಳ ಅಂತ್ಯ ಸಂಸ್ಕಾರಕ್ಕೂ ವೀರಾಜಪೇಟೆ ಕ್ಷೇತ್ರ ಶಿಕ್ಷಣ ಇಲಾಖೆ ಯಾವದೇ ಸಹಾಯ ಧನ ನೀಡದಿರುವದು ಅಕ್ಷಮ್ಯ. ನೆಮ್ಮಲೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 34 ವಿದ್ಯಾರ್ಥಿಗಳಿಗೆ ಪಾರ್ವತಿ ಎಂಬ ಒಬ್ಬರೇ ಶಿಕ್ಷಕಿ ಇದ್ದಾರೆ. ಇದ್ದು ಶಾಲೆಗೆ ರಜೆ ಘೋಷಣೆ ಮಾಡಿ ಸಹಪಾಠಿ ಯನ್ನು ನೋಡಲು ಬಾರದಂತಹಾ ಅಸಹಾಯಕ ಸ್ಥಿತಿಯಲ್ಲಿ ಇದ್ದಾರೆ. ಇದಕ್ಕೆಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಯ ಉದಾಸೀನವೇ ಕಾರಣ.
ಕೊಡಗಿನಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಯ ಬಗ್ಗೆ ಇವರ್ಯಾರೂ ಸರ್ಕಾರದ ಗಮನಕ್ಕೆ ತಂದಿಲ್ಲ. ಇಲ್ಲಿನ ಗುಡ್ಡಗಾಡು ಪ್ರದೇಶದಲ್ಲಿ ಸುಮಾರು 5-6 ಕಿ.ಮೀ ದೂರ ಕಾಲ್ನಡಿಗೆಯಲ್ಲಿ ನಡೆದು ಹೋಗಿ ಪಾಠ ಮಾಡಬೇಕಾದ ಸ್ಥಿತಿ ಇದೆ. ಇದೀಗ ಅತಿಥಿ ಶಿಕ್ಷಕಿಯ ಮೇಲಿನ ದೌರ್ಜನ್ಯದ ನಂತರ ಹೆಚ್ಚಿನ ಮಹಿಳಾ ಶಿಕ್ಷಕರು ಭಯಪಡುವ ವಾತಾವರಣ ನಿರ್ಮಾಣವಾಗಿದೆ ಎಂದು ಜಿಲ್ಲಾಧ್ಯಕ್ಷ ಚೇತನ್ ಅಭಿಪ್ರಾಯಪಟ್ಟರು.
ಕೊಡಗಿನಲ್ಲಿ ಇಂತಹಾ ಒಂದು ಘೋರ ಘಟನೆ ನಡೆದರೂ ಜಿಲ್ಲಾ ಮಟ್ಟದ ಪ್ರಮುಖ ಅಧಿಕಾರಿಗಳು ಇತ್ತ ಭೇಟಿಯೇ ನೀಡಿಲ್ಲ ಎಂದು ತಮ್ಮ ತೀವೃ ಅಸಮಾಧಾನವನ್ನು ವ್ಯಕ್ತಪಡಿಸಿದರು.
ನಾವು ಬೇರೆಯಾಗಿಲ್ಲ- ಪತಿ ಗಿರೀಶ್
ನಾನು ಮತ್ತು ಪ್ರಮೀಳಾ ಬೇರೆ ಬೇರೆಯಾಗಿಲ್ಲ. ಸುಮಾರು 1 ವರ್ಷ 10 ತಿಂಗಳಿನಿಂದ ನಾನು ಕೇರಳದಲ್ಲಿ ಉದ್ಯೋಗ ನಿಮಿತ್ತ ನೆಲೆಸಿದ್ದೇನೆ. ನಿರಂತರ ದೂರವಾಣಿ ಸಂಪರ್ಕದಲ್ಲಿ ತಾವಿದ್ದು, ಇತ್ತೀಚೆಗೆ ಮಕ್ಕಳೊಂದಿಗೆ ಮೈಸೂರು ದಸರಾ ವೀಕ್ಷಣೆಗೂ ತೆರಳಿದ್ದೆವು. ಇದೊಂದು ದುರಂತ ನಡೆಯಬಾರದಿತ್ತು. ಮಕ್ಕಳ ವಿದ್ಯಾಭ್ಯಾಸದ ಹಿನ್ನೆಲೆ ಪ್ರಮೀಳಾ ತವರಿನಲ್ಲಿ ನೆಲೆಸಬೇಕಾಗಿತ್ತು ಎಂದು ಪತಿ ಗಿರೀಶ್ ತಿಳಿಸಿದ್ದಾರೆ.
ಜನಪ್ರತಿನಿಧಿಗಳ ಭೇಟಿ
ಇಂದು ಬೆಳಿಗ್ಗೆಯಿಂದಲೇ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ಶವಾಗಾರಕ್ಕೆ ಭೇಟಿ ನೀಡಿ ತಮ್ಮ ತೀವೃ ಸಂತಾಪ ವ್ಯಕ್ತ ಪಡಿಸಿದ್ದು ಘಟನೆಯನ್ನು ಖಂಡಿಸಿದ್ದಾರೆ.
ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸಂಕೇತ್ ಪೂವಯ್ಯ ಅವರು ಇಂದು ಗೋಣಿಕೊಪ್ಪಲಿಗೆ ಭೇಟಿ ನೀಡಿ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ್ದಾರೆ.
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಂಗೇರ ಪದ್ಮಿನಿಪೆÇನ್ನಪ್ಪ ಅವರು ಪ್ರತಿಭಟನಾಕಾರ ಶಿಕ್ಷಕರನ್ನು ಉದ್ಧೇಶಿಸಿ, ಮೃತಳ ಕುಟುಂಬಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಎಸ್ಪಿಯೊಂದಿಗೆ ಮಾತೂಕತೆ ನಡೆಸುವೆ. ರಾಜ್ಯ ಗ್ರಹ ಸಚಿವ ಜಿ.ಪರಮೇಶ್ವರ್ ಅವರಲ್ಲಿಯೂ ಮಾತೂಕತೆ ನಡೆಸಿ, ಪರಿಹಾರ ನೀಡುವಂತಾಗಲು ಶ್ರಮಿಸುವದಾಗಿ ಭರವಸೆ ನೀಡಿದರು. ಸ್ಥಳದಲ್ಲಿಯೇ ಗೋಣಿಕೊಪ್ಪಲು ಜಿ.ಪಂ.ಸದಸ್ಯ ಸಿ.ಕೆ.ಬೋಪಣ್ಣ ಅವರಿದ್ದು ಅಪರಾಹ್ನ ಮೃತ ದೇಹವನ್ನು ನೆಮ್ಮಲೆಗೆ ಕೊಂಡೊಯ್ಯಲು ವಾಹನ ಚಾಲಕರ ಸಂಘದ ತುರ್ತು ಚಿಕಿತ್ಸಾ ವಾಹನವನ್ನು ಉಚಿತವಾಗಿ ವ್ಯವಸ್ಥೆ ಮಾಡಿದ್ದರು. ಶ್ರೀಮಂಗಲ ಜಿಲ್ಲಾ ಪಂಚಾಯಿತಿ ಸದಸ್ಯ ಶಿವುಮಾದಪ್ಪ, ವೀರಾಜಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಅರುಣ್ಭೀಮಯ್ಯ ಅವರುಗಳು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಕುಟ್ಟ ಪೆÇಲೀಸ್ ವೃತ್ತ ನಿರೀಕ್ಷಕ ದಿವಾಕರ್, ಶ್ರೀಮಂಗಲ ಪೆÇಲೀಸ್ ಉಪ ನಿರೀಕ್ಷಕ ಶ್ರೀಧರ್, ಕುಟ್ಟ ಪೆÇಲೀಸ್ ಉಪ ನಿರೀಕ್ಷಕ ರವಿಕಿರಣ್, ಗೋಣಿಕೊಪ್ಪಲು ಪೆÇಲೀಸ್ ಉಪನಿರೀಕ್ಷಕ ಪಿ.ಕೆ.ರಾಜು, ಪೆÇಲೀಸ್ ಉಪ ನಿರೀಕ್ಷಕ ಗೋವಿಂದರಾಜು ಮತ್ತು ಸಿಬ್ಬಂದಿಗಳೂ ಇಂದು ಮಾನವೀಯತೆಯನ್ನು ಮೆರೆದು ಪ್ರತಿಭಟನಾ ನಿರತರೊಂದಿಗೆ ಸೌಜನ್ಯದಿಂದ ವರ್ತಿಸಿದ್ದು ಕಂಡು ಬಂತು. ಆರೋಪಿ ಜೇನುಕುರುಬರ ಹರೀಶ್ ವಿರುದ್ಧ ಸೆ.376,302 ಹಾಗೂ 511 ರಂತೆ ಪ್ರಕರಣ ದಾಖಲಿಸಲಾಗಿದೆ.
ವರದಿ:-ಟಿ.ಎಲ್.ಶ್ರೀನಿವಾಸ್