ಮಡಿಕೇರಿ, ಡಿ. 19: ಚೆಯ್ಯಂಡಾಣೆಯ ನರಿಯಂದಡ ಸೆಂಟರ್ ಎಜ್ಯುಕೇಶನ್ ಸೊಸೈಟಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ತಾ. 20ರಂದು (ಇಂದು) ನಡೆಯಲಿದೆ.
ಬೆಳಿಗ್ಗೆ 10 ಗಂಟೆಗೆ ಕ್ರೀಡಾಕೂಟ ನಡೆಯಲಿದ್ದು, ಬೆಳೆಗಾರ ಸುಮಂತ್ ಶ್ಯಾನ್ಬಾಗ್, ಗ್ರಾ.ಪಂ. ಸದಸ್ಯರಾದ ಕೋಡಿರ ಪ್ರಸನ್ನ ತಮ್ಮಯ್ಯ, ಮುಂಡ್ಯೋಳಂಡ ಜಿ. ಲಲಿತ, ಬೆಳಿಯಂಡ್ರ ರತೀಶ್ ಕುಮಾರ್, ಉಪಾಧ್ಯಕ್ಷ ಮುಂಡ್ಯೋಳಂಡ ಪಿ. ಸೋಮಣ್ಣ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ, ಜಿ.ಪಂ. ಸದಸ್ಯ ನೆಲ್ಲಚಂಡ ಟಿ. ಕಿರಣ್ ಕುಮಾರ್, ತಾ.ಪಂ. ಸದಸ್ಯೆ ಉಮಾಪ್ರಭು ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ.