ಶನಿವಾರಸಂತೆ, ನ. 3: ಹಂಡ್ಲಿ ಪಂಚಾಯಿತಿ ವ್ಯಾಪ್ತಿಯ ಮೂದರವಳ್ಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಒಂದು ಕೊಠಡಿಯಲ್ಲಿ ಮೇಲ್ಛಾವಣಿಯ ಕೌಕೋಲುಗಳೆರಡು ಗೆದ್ದಲು ಹಿಡಿದು ಅಸ್ಥಿಪಂಜರದ ಹಾಗೆ ಕಾಣುತ್ತಿದೆ. ಯಾವದೇ ಸಂದರ್ಭದಲ್ಲಿ ಕೌಕೋಲು ಕುಸಿದು ಹೆಂಚು ಸಹಿತ ವಿದ್ಯಾರ್ಥಿಗಳ ತಲೆಯ ಮೇಲೆ ಬೀಳಬಹುದು.

ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ತಾಲೂಕು ಕಾರ್ಯನಿರ್ವಾಹಣಧಿಕಾರಿ ಚಂದ್ರಶೇಖರ್ ಹಾಗೂ ತಾ.ಪಂ. ಸದಸ್ಯ ಕುಶಾಲಪ್ಪ ಅವರುಗಳು ಅನೀರೀಕ್ಷಿತವಾಗಿ ಮೂದರವಳ್ಳಿ ಗ್ರಾಮಕ್ಕೆ ಬಂದವರು ಶಾಲಾ ಕೊಠಡಿಯ ಪರಿಸ್ಥಿತಿ ನೋಡಿದ ಶಾಲಾ ಶಿಕ್ಷಕಿಯರನ್ನು ಸಮಿತಿಯವರನ್ನು ಹಾಗೂ ಸಂಬಂಧಿಸಿದ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡು, ಕೌಕೋಲುಗಳನ್ನು ಬದಲಿಸಿ ವ್ಯವಸ್ಥೆ ಸರಿಪಡಿಸುವಂತೆ ಆದೇಶ ನೀಡಿದರು.