ವೀರಾಜಪೇಟೆ, ಆ. 24: ಜಮಾಅತೆ ಇಸ್ಲಾಮೀ ಹಿಂದ್ ತಾ. 21 ರಿಂದ ಸೆ. 4 ರವರೆಗೆ ನಡೆಸುತ್ತಿರುವ ‘ಶಾಂತಿ ಮತ್ತು ಮಾನವೀಯತೆ’ ರಾಷ್ಟ್ರಮಟ್ಟದ ಅಭಿಯಾನದ ಜಿಲ್ಲಾ ಸ್ವಾಗತ ಸಮಿತಿಯನ್ನು ರಚಿಸಲಾಯಿತು.

ಅರಮೇರಿ ಶ್ರೀ ಕಳಂಚೇರಿ ಮಠದಲ್ಲಿ ನಡೆದ ಸಭೆಯಲ್ಲಿ ಸ್ವಾಗತ ಸಮಿತಿಯ ಸಂಚಾಲಕರಾಗಿ ಹಿರಿಯ ಸಾಹಿತಿ, ನ್ಯಾಯವಾದಿ ಕೆ.ಪಿ. ಬಾಲಸುಬ್ರಹ್ಮಣ್ಯ ಅವರನ್ನು ಆಯ್ಕೆ ಮಾಡಲಾಯಿತು. ಮಡಿಕೇರಿಯ ಉಪನ್ಯಾಸಕಿ ಕೆ. ಜಯಲಕ್ಷ್ಮಿ ಹಾಗೂ ಸಿದ್ದಾಪುರದ ಕೆ.ಕೆ. ಅಶೋಕ್ ಉಪಸಂಚಾಲಕರಾಗಿರುತ್ತಾರೆ. ಕಾರ್ಯದರ್ಶಿಗಳಾಗಿ ಪಿ.ಕೆ. ಅಬ್ದುಲ್ ರೆಹಮಾನ್ (ವೀರಾಜಪೇಟೆ), ಸಮಿತಿ ಗೌರವ ಅಧ್ಯಕ್ಷರಾಗಿ ಅರಮೇರಿ-ಕಳಂಚೇರಿ ಮಠದ ಪೀಠಾಧಿಪತಿ ಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮಡಿಕೇರಿಯ ಸಿ.ಎಸ್.ಐ. ಚರ್ಚ್‍ನ ಫಾದರ ಸಂದೀಪ್ ರಾಬಿನ್‍ಸನ್, ಆನಂದ, ಮಡಿಕೇರಿ ಮಕ್ಕಾ ಮಸೀದಿಯ ಖತೀಬ್ ಮೌಲಾನಾ ಅಬ್ದುಲ್ ಹಕೀಂ ಆಯ್ಕೆಯಾಗಿದ್ದಾರೆ.

ಸಭೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕರಾವಳಿ ವಲಯ ಸಂಚಾಲಕ ಯು. ಅಬ್ದುಸ್ಸಲಾಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿ ಸದಸ್ಯರುಗಳಾದ ಎಂ.ಜಿ. ಮೋಹನ್, ಐ.ಎಂ. ಕಾವೇರಮ್ಮ, ನೀರಜ್ ನೀಲಮ್ಮ, ಹೆಚ್.ಸಿ. ಸಣ್ಣಯ್ಯ, ರಫೀ ಚಡ್‍ಖಾನ್ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಮುಹಮ್ಮದ್ ಮುಸ್ತಫಾ ಸ್ವಾಗತಿಸಿದರು.