ಸೋಮವಾರಪೇಟೆ,ಜ.4: ಸಮೀಪದ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಜಾತ್ರೋತ್ಸವ ಅಂಗವಾಗಿ ತಾ. 15 ಮತ್ತು 16ರಂದು ಅಂತರ್ ಜಿಲ್ಲಾಮಟ್ಟದ ಕ್ರೀಡಾಕೂಟ ಶಾಂತಳ್ಳಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಶ್ರೀ ಕುಮಾರಲಿಂಗೇಶ್ವರ ಯುವಕ ಸಂಘದ ಅಧ್ಯಕ್ಷ ಬಿ.ಡಿ. ನಿರಂಜನ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಅಂತರ್ ಜಿಲ್ಲಾಮಟ್ಟದ ಪುರುಷರ ಕಬಡ್ಡಿ ಮತ್ತು ಮಹಿಳೆಯರ ಥ್ರೋಬಾಲ್ ಪಂದ್ಯಾಟ ನಡೆಯಲಿದೆ. ಪುರುಷರ ಕಬಡ್ಡಿ ಪಂದ್ಯಾಟಕ್ಕೆ ಪ್ರಥಮ ಬಹುಮಾನ 25ಸಾವಿರ ರೂ. ದ್ವಿತೀಯ ಬಹುಮಾನ 15 ಸಾವಿರ ರೂ. ಹಾಗೂ ಮೂರು ಮತ್ತು ನಾಲ್ಕನೇ ಬಹುಮಾನ 5ಸಾವಿರ ರೂ. ನಗದು ಮತ್ತು ವಿಜೇತರಿಗೆ ಆಕರ್ಷಕ ಟ್ರೋಫಿ ನೀಡಲಾಗುವದು ಎಂದು ಹೇಳಿದರು.

ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟ ನಡೆಯಲಿದ್ದು ಪ್ರಥಮ ಬಹುಮಾನ 6ಸಾವಿರ ರೂ. ನಗದು, ದ್ವಿತೀಯ ಬಹುಮಾನ 4ಸಾವಿರ ರೂ. ನಗದು ಹಾಗು ಆಕರ್ಷಕ ಟ್ರೋಫಿ ನೀಡಲಾಗುವದು. ಇದರೊಂದಿಗೆ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ ಎಂದರು.

ಕಬಡ್ಡಿ ಮತ್ತು ಥ್ರೋಬಾಲ್ ತಂಡಗಳು ಜ. 15ರೊಳಗೆ ತಮ್ಮ ತಂಡದ ಹೆಸರನ್ನು ನೋದಾಯಿಸಿ ಕೊಳ್ಳಬೇಕೆಂದು ಮನವಿ ಮಾಡಿದರು. ಹೆಚ್ಚಿನ ಮಾಹಿತಿಗಾಗಿ ಮೊ: 9483834527 ಅಥವಾ 8762934072 ಸಂಖ್ಯೆಗಳನ್ನು ಸಂಪರ್ಕಿಸುವಂತೆ ತಿಳಿಸಿದರು. ಗೊಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಕೆ.ಆರ್. ರತನ್, ಪದಾಧಿಕಾರಿಗಳಾದ ಗಣಪತಿ, ಎಸ್.ಆರ್. ಉತ್ತಯ್ಯ, ಕೆ.ಟಿ. ಮಧುಕುಮಾರ್ ಉಪಸ್ಥಿತರಿದ್ದರು.