ಶನಿವಾರಸಂತೆ, ಆ. 27: ಪ್ರಾಥಮಿಕ ಶಾಲಾ ವಿಭಾಗದ ವಲಯ ಮಟ್ಟದ ಕ್ರೀಡಾಕೂಟ 4 ದಿನಗಳ ಕಾಲ ನಡೆದಿದ್ದು, ಶನಿವಾರಸಂತೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು.

ಬಾಲಕರ ಹಾಕಿ, ಫುಟ್‍ಬಾಲ್, ಬಾಲಕಿಯರ ಹಾಕಿ ಟೂರ್ನಿಯಲ್ಲಿ ಪ್ರಥಮ ಸ್ಥಾನ ಹಾಗೂ ಬಾಲಕರ ಷಟಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ದ್ವಿತೀಯ ಸ್ಥಾನ ಗಳಿಸಿತು.

ಬಾಲಕರ ವಿಭಾಗದಲ್ಲಿ ವಿದ್ಯಾರ್ಥಿ ಧನು ಬಹದ್ದೂರ್ ಸಿಂಗ್ ಭಾರದ ಗುಂಡು ಎಸೆತ, 200 ಮೀ. ಓಟದ ಸ್ಪರ್ಧೆಯಲ್ಲಿ ಪ್ರಥಮ, 100 ಮೀ. ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಗಳಿಸಿದ್ದಾನೆ.

ಬಾಲಕಿಯರ ವಿಭಾಗದಲ್ಲಿ ಎನ್.ಪಿ. ಕವನಾ ಭಾರದ ಗುಂಡು ಎಸೆತದಲ್ಲಿ ಪ್ರಥಮ, 400 ಮೀ. ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾಳೆ. ಎ.ವಿ. ರಂಸೀನಾ 600 ಮೀ. ಓಟದಲ್ಲಿ ದ್ವಿತೀಯ, ಸಿ. ಚಂದನಾ 100 ಮೀ. ಓಟದಲ್ಲಿ ಹಾಗೂ ಎತ್ತರ ಜಿಗಿತದಲ್ಲಿ ದ್ವಿತೀಯ, ಎಸ್.ಜಿ. ಸಿಜೋ 200 ಮೀ. ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾಳೆ. ವಿದ್ಯಾರ್ಥಿಗಳನ್ನು ಶಾಲಾಭಿವೃದ್ಧಿ ಸಮಿತಿ, ಮುಖ್ಯ ಶಿಕ್ಷಕಿ ಪದ್ಮಾವತಿ, ದೈಹಿಕ ಶಿಕ್ಷಣ ಶಿಕ್ಷಕ ಮಲ್ಲಿಕಾರ್ಜುನ್ ಹಾಗೂ ಸಹ ಶಿಕ್ಷಕರು ಅಭಿನಂದಿಸಿದರು.