ಶನಿವಾರಸಂತೆ, ಆ. 25: ಶನಿವಾರಸಂತೆ ಗ್ರಾ.ಪಂ. 1ನೇ ವಿಭಾಗದ ಬಿಸಿಎಂ ಬಿ ಮೀಸಲಾತಿಯ ತೆರವಾದ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ ನಿಗದಿಯಾಗಿದ್ದು, ವಿವಿಧ ಪಕ್ಷಗಳ ಬೆಂಬಲಿತರಾಗಿ 5 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.

ಉಮೇದುವಾರಿಕೆಯನ್ನು ವಾಪಸ್ ಪಡೆಯಲು ನಿನ್ನೆ ಕಡೆಯ ದಿನವಾಗಿದ್ದು, 2 ಮಂದಿ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಯನ್ನು ವಾಪಸ್ ಪಡೆದಿದ್ದಾರೆ. ಚುನಾವಣಾ ಕಣದಲ್ಲಿ ಇದೀಗ 3 ಮಂದಿ ಅಭ್ಯರ್ಥಿಗಳು ಉಳಿದಿದ್ದಾರೆ.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಯಾಗಿ ಆದಿತ್ಯ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಪುನೀತ್ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕೆ.ಟಿ. ಹರೀಶ್ ಕಣದಲ್ಲಿದ್ದಾರೆ.

1ನೇ ವಿಭಾಗದಲ್ಲಿ 532 ಪುರುಷ ಹಾಗೂ 553 ಮಹಿಳಾ ಮತದಾರರು ಸೇರಿ ಒಟ್ಟು 1085 ಮತದಾರರು ತಾ. 28 ರಂದು ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ.

ಚುನಾವಣಾಧಿಕಾರಿ ರಾಮಚಂದ್ರ ಮೂರ್ತಿ ಹಾಗೂ ಸಹಾಯಕ ಅಧಿಕಾರಿ ಜಿ.ಇ. ಪ್ರವೀಣ್, ಮೂವರು ಅಭ್ಯರ್ಥಿಗಳಿಗೆ ಚಿನ್ಹೆಗಳನ್ನು ಹಂಚಿ ಮಾತನಾಡಿ, ಚುನಾವಣಾ ನೀತಿ, ನಿಯಮಗಳ ಬಗ್ಗೆ ವಿವರಣೆ ನೀಡಿದರು.