ಶನಿವಾರಸಂತೆ, ನ. 10: ಕಾರ್ಪೋರೇಷನ್ ಬ್ಯಾಂಕಿನ ವತಿಯಿಂದ ವಿಚಕ್ಷಣ ಜಾಗೃತಿ ಸಪ್ತಾಹ ಕಾರ್ಯಕ್ರಮ ಶನಿವಾರ ದುಂಡಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್ ವಹಿಸಿದ್ದರು.ಬ್ಯಾಂಕಿನೊಂದಿಗೆ ಸತತ ಸಂಪರ್ಕ ಇಟ್ಟುಕೊಂಡು ಬ್ಯಾಂಕಿನಲ್ಲಿ ದೊರೆಯುವ ವಿವಿಧ ರೀತಿಯ ಸಾಲ ಸೌಲಭ್ಯ ಪಡೆದು ತಮ್ಮ ಆರ್ಥಿಕ ಅಭಿವೃದ್ಧಿಯೊಂದಿಗೆ ಬ್ಯಾಂಕಿನ ಅಭಿವೃದ್ಧಿ ಸಮಾಜದ ಪ್ರಗತಿಗೆ ಕಾರಣವಾಗಬೇಕೆಂದರು.

ಕಾರ್ಪೊರೇಷನ್ ಬ್ಯಾಂಕಿನ ನೋಡಲ್ ಅಧಿಕಾರಿ ಕೆಂಪರಂಗಯ್ಯ ಮಾತನಾಡಿ, ಗ್ರಾಹಕರಿಗೆ ಜನಧನ ಯೋಜನೆ ಹಾಗೂ ಇತರ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಶನಿವಾರಸಂತೆ ಕಾರ್ಪೋರೇಷನ್ ಬ್ಯಾಂಕಿನ ವ್ಯವಸ್ಥಾಪಕ ರಮೇಶ್ ಮಾತನಾಡಿ, ಬ್ಯಾಂಕಿನೊಡನೆ ಪ್ರತಿಯೊಬ್ಬರು ನಿಕಟ ಸಂಪರ್ಕ ಹೊಂದಿರಬೇಕೆಂದರು.

ಸಭೆಯಲ್ಲಿ ಸ್ವಸಹಾಯ ಸಂಘ, ಸ್ತ್ರಿಶಕ್ತಿ ಸಂಘ, ಧರ್ಮಸ್ಥಳ ಸಂಘದ ಮಹಿಳೆಯರು, ಬ್ಯಾಂಕಿನ ಮಿತ್ರರು, ದುಂಡಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರೂಪಾ, ಸದಸ್ಯರುಗಳಾದ ಕಮಲಮ್ಮ, ಪಾರ್ವತಿ, ಉಷಾ ಇತರರು ಉಪಸ್ಥಿತರಿದ್ದರು. ಪಂಚಾಯಿತಿ ಮಾಜಿ ಅಧ್ಯಕ್ಷೆ ಎಸ್.ಪಿ. ಭಾಗ್ಯ ಸ್ವಾಗತಿಸಿ, ವಂದಿಸಿದರು.