ವೀರಾಜಪೇಟೆ, ಜ. 17: ವೀರಾಜಪೇಟೆಯ ರೋಟರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಸಂಸ್ಥೆಯಲ್ಲಿ ಶಾಲಾ ಕ್ರೀಡೋತ್ಸವ ನಡೆಯಿತು. ಮುಖ್ಯ ಅತಿಥಿಗಳಾಗಿ ನಡಿಕೇರಿಯಂಡ ಎಸ್. ನಾಣಯ್ಯ ಭಾಗವಹಿಸಿ ಮಾತನಾಡಿದರು.ವೀರಾಜಪೇಟೆ ರೋಟರಿ ಸಂಸ್ಥೆಯ ಅಧ್ಯಕ್ಷ ಮಂಡೇಪಂಡ ಸಿ. ರಾಬಿನ್ ಮಂದಪ್ಪ ಕ್ರೀಡೋತ್ಸವದ ಧ್ವಜಾರೋಹಣ ನೆರವೇರಿಸಿದರು. ಕ್ರೀಡೋತ್ಸವದ ಉದ್ಘಾಟನೆಯನ್ನು ಬಿದ್ದಂಡ ಸಿ. ಸುಬ್ಬಯ್ಯ ಮಾಡಿದರು.

ಪ್ರೌಢಶಾಲಾ ನಾಯಕಿ ಎಂ.ಎ. ಸನ ಸ್ವಾಗತಿಸಿ, ಪ್ರಾಥಮಿಕ ಶಾಲಾ ನಾಯಕಿ ಎಂ.ಬಿ. ಮೌನ ವಂದಿಸಿದರು. ಕ್ರೀಡೋತ್ಸವದಲ್ಲಿ ರೋಟರಿ ಶಾಲೆಯ ದೈಹಿಕ ಶಿಕ್ಷಕ ಲೂಯಿಸ್ ಬ್ರಿಗೇನ್ಜಾ ಮತ್ತು ಶಿಕ್ಷಕ ವೃಂದ ತರಬೇತಿ ನೀಡಿದ ಪಿ.ಟಿ. ಸ್ಟಾರ್ ಮತ್ತು ಐರ್ಲೆಂಡ್ ನೃತ್ಯ ನೆರೆದಿದ್ದವರ ಗಮನ ಸೆಳೆಯಿತು.