ಮಡಿಕೇರಿ, ನ. 12: ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವಂತಹ ಆಸ್ತಿಗಳ ತೆರಿಗೆದಾರರು, ತೆರಿಗೆ ಪಾವತಿಸಲು ಬಾಕಿ ಇರುವವರು ಹಾಗೂ ಸ್ವಯಂ ಘೋಷಿತ ಆಸ್ತಿ ತೆರಿಗೆ, ನೀರಿನ ಕಂದಾಯ, ಉದ್ದಿಮೆ ಪರವಾನಿಗೆ, ಮಳಿಗೆ ಬಾಡಿಗೆಗಳನ್ನು ಪಾವತಿಸಲು ಬಾಕಿ ಇರುವವರು ತಾ. 30 ರೊಳಗೆ ಪಟ್ಟಣ ಪಂಚಾಯಿತಿಗೆ ತೆರಿಗೆಗಳನ್ನು ಪಾವತಿಸಿ ಸೂಕ್ತ ದಾಖಲಾತಿಗಳನ್ನು ಹಾಜರು ಪಡಿಸಿಕೊಂಡು ನಮೂನೆ ಮೂರು ಉದ್ದಿಮೆ ಪರವಾನಿಗೆಗಳನ್ನು ಪಡೆದುಕೊಳ್ಳಬಹುದು ಹಾಗೂ ಮಳಿಗೆ ಬಾಡಿಗೆದಾರರು ಬಾಡಿಗೆ ಹಣವನ್ನು ಪಾವತಿಸಲು ಅವಕಾಶವಿದೆ.

ಆಸ್ತಿ ತೆರಿಗೆ ಪಾವತಿಸದೇ ಇರುವವರಿಗೆ ಕಾನೂನು ರೀತ್ಯಾ ಅಟ್ಯಾಚ್‍ಮೆಂಟ್ ತರಲಾಗುವದು. ನೀರಿನ ಕಂದಾಯ ಪಾವತಿಸಲು ತಪ್ಪಿದಲ್ಲಿ ನೀರಿನ ಸಂಪರ್ಕ ಕಡಿತಗೊಳಿಸಲಾಗುವದು. ಮಳಿಗೆ ಬಾಡಿಗೆಯನ್ನು ಪಾವತಿಸಲು ತಪ್ಪಿದಲ್ಲಿ ಅಂಗಡಿ ಮಳಿಗೆಗೆ ಬೀಗ ಜಡಿಯಲಾಗುವದು ಹಾಗೂ ಸೂಕ್ತ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವದು ಎಂದು ವೀರಾಜಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ತಿಳಿಸಿದ್ದಾರೆ.