ಈ ಬಾರಿ ಮಳೆಯ ಪ್ರಮಾಣ ನಿರೀಕ್ಷೆಗಿಂತ ಕಡಿಮೆಯಾದ ಕಾರಣ ವೀರಾಜಪೇಟೆ ತಾಲೂಕಿನಲ್ಲಿ ಭತ್ತದ ಬೆಳೆಗೆ ಬೆಂಕಿರೋಗ ತಗಲಿದ್ದು, ಎಲೆ ಸುರುಳಿ ಹಾಗೂ ಹುಳುವಿನ ಬಾಧೆ ಕಾಣಿಸಿಕೊಂಡದೆ. ಬೆಳೆರೋಗ ಪೀಡಿತ ಪ್ರದೇಶಗಳಿಗೆ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ|| ವೀರೇಂದ್ರ ಕುಮಾರ್, ಬಾಳೆಲೆ ಹೋಬಳಿ ಕೃಷಿ ಅಧಿಕಾರಿ ಮೀರಾ, ಆತ್ಮಾ ಯೋಜನೆಯ ಲಿಖಿತಾ ಹಾಗೂ ಶಿವಕುಮಾರ್ ಇವರುಗಳನ್ನೊಳಗೊಂಡ ತಂಡ ತೆರಳಿ ಪರಿಶೀಲನೆ ನಡೆಸಿತು. ಬೆಳೆಗೆ ತಗಲಿರುವ ರೋಗಗಳ ನಿಯಂತ್ರಣಕ್ಕೆ ತಜ್ಞರು ಕೆಲವು ಮಾರ್ಗೋಪಾಯ ಗಳನ್ನು ಸೂಚಿಸಿದ್ದು, ಈ ಕೆಳಗಿನಂತಿದೆ.
ಎಲೆ ಸುರುಳಿ ಹುಳು : ಹುಳುಗಳು ಎಲೆಯ ಅಂಚನ್ನು ಮಡಚಿ ಸುರುಳಿ ಸುತ್ತಿಕೊಂಡು ಎಲೆಯ ಹಸಿರುಭಾಗವನ್ನು ಕೆರೆದು ತಿನ್ನುತ್ತವೆÉ. ಇದರಿಂದ ಪೈರು ಬೆಳ್ಳಗೆ ಬಿಳಿಚಿ ಕೊಂಡಂತೆ ಕಾಣಿಸುತ್ತದೆ. ಬಾಧೆಯು ತೀವ್ರವಾದಾಗ ಬೆಳವಣಿಗೆ ಕುಂಠಿತವಾಗಿ ತೆನೆ ಬರದೆ ನಷ್ಟವುಂಟಾಗುತ್ತದೆ.
ಹತೋಟಿ ಕ್ರಮಗಳು : ಗದ್ದೆಯ ಬದುವಿನಲ್ಲಿರುವ ಕಳೆಗಳನ್ನು ಕಿತ್ತು ಸ್ವಚ್ಛಗೊಳಿಸಬೇಕು. ಶಿಫಾರಸ್ಸು ಮಾಡಿರುವಷ್ಟು ಮಾತ್ರ ಸಾರಜನಕದ ಗೊಬ್ಬರವನ್ನು ಕೊಡಬೇಕು. ಕೀಟವಿರುವ ಸೂಚನೆಯನ್ನು ನೋಡಿಕೊಂಡು 2.0 ಮಿ.ಲೀ. ಕ್ಲೋರ್‍ಪೈರಿಫಾಸ್ 20 ಇ.ಸಿ ಅಥವಾ 2 ಮಿ.ಲೀ. ಕ್ವಿನಾಲ್‍ಫಾಸ್ 25 ಇಸಿ ಇವುಗಳಲ್ಲಿ ಯಾವುದಾದರೂ ಒಂದನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಬೆಂಕಿ ರೋಗ : ಮ್ಯಾಗ್ನೋಪೆÇೀರ್ತಿ ಗ್ರೀಸಿಯಾ ಎಂಬ ಶೀಲೀಂದ್ರದಿಂದ ಬರುವ ಈ ರೋಗವು ಹೆಚ್ಚು ಆದ್ರ್ರತೆ, ಕಡಿಮೆ ರಾತ್ರಿ ಉಷ್ಣಾಂಶ ಮತ್ತು ಸಾರಜನಕ ಗೊಬ್ಬರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಿದಾಗ ತೀವ್ರವಾಗಿ ಕಂಡುಬರುತ್ತದೆ. ರೋಗದ ಮೂಲ ಸೋಂಕು, ರೋಗ ತಗುಲಿದ ಎಲೆ, ಕಡ್ಡಿ, ಕೂಳೆ ಮತ್ತು ಕಳೆಗಳಿಂದ ಉಂಟಾಗಿ, ನಂತರ ಗಾಳಿಯಿಂದ ಪ್ರಸಾರವಾಗುತ್ತದೆ. ಪ್ರಾರಂಭದಲ್ಲಿ ಎಲೆಗಳ ಮೇಲೆ ಸುಮಾರು ಒಂದರಿಂದ ಮೂರು ಮಿ.ಮೀ. ಉದ್ದದ ಕಂದು ಬಣ್ಣದ ಚುಕ್ಕೆಗಳು ಕಂಡು ಬರುತ್ತವೆ. ನಂತರ ಇಂತಹ ಚುಕ್ಕೆಗಳ ಗಾತ್ರ ಹೆಚ್ಚಾಗಿ ಗರಿಗಳ ಮೇಲೆ ಕದಿರಿನಾಕಾರದ ಮೊನಚಾದ ತುದಿಗಳುಳ್ಳ ಚುಕ್ಕೆಗಳಾಗಿ ಕಾಣಿಸಿಕೊಳ್ಳುತ್ತವೆ. ಇಂತಹ ಚುಕ್ಕೆಗಳ ಮಧ್ಯಭಾಗವು ಬೂದಿ ಬಣ್ಣದಿಂದ ಕೂಡಿದ್ದು ಸುತ್ತಲು ಕಂದು ಬಣ್ಣದ್ದಾಗಿರುತ್ತದೆ. ಇಂತಹ ಚುಕ್ಕೆಗಳು ಒಂದಕ್ಕೊಂದು ಕೂಡಿಕೊಂಡು ಎಲೆಯು ಸುಟ್ಟು ಹೋದಂತೆ ಕಂಡುಬರುತ್ತದೆ. ಈ ಲಕ್ಷಣಗಳು ಗರಿಯ ಮೇಲೆ ಸಸಿ ಮಡಿಯಲ್ಲಿ ಮತ್ತು ನಾಟಿ ಮಾಡಿದ ಪೈರಿನ ಮೇಲೂ ಕಾಣಿಸಿಕೊಳ್ಳುತ್ತವೆ. ತೆನೆ ಹೊರ ಬಂದ ಮೇಲೆ ತೆನೆಯ ಬುಡದಲ್ಲಿ, ಗರಿಗಳ ಮೇಲೆ ಕಾಣಿಸಿ ಕೊಂಡು ಆ ಭಾಗವು ಕೊಳೆಯುತ್ತದೆ. ಇದರಿಂದ ತೆನೆಯು ಮುರಿದು ಜೋತಾಡುವದನ್ನು ಕಾಣಬಹುದು. ಬೆಳೆಯು ತೆನೆ ಬಿಟ್ಟ ನಂತರ ಈ ರೋಗ ಕಾಣಿಸಿಕೊಂಡಲ್ಲಿ ಕಾಳುಗಳು ಜೊಳ್ಳಾಗುತ್ತವೆ.ಇದನ್ನು ನಾವು ಕುತ್ತಿಗೆ ಬೆಂಕಿರೋಗವೆಂದು ಕರೆಯುತ್ತೆವೆ.
ಹತೋಟಿ ಕ್ರಮಗಳು : ಸಾರಜನಕವನ್ನು ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಮಣ್ಣು ಪರೀಕ್ಷೆ ಆಧಾರದ ಮೇಲೆ ಕೊಡಬೇಕು. ರೋಗದ ಬಾಧೆ ಶೇ. 5 ಕ್ಕಿಂತ ಜಾಸ್ತಿ ಇದ್ದಲ್ಲಿ ಟ್ರೈಸೈಕ್ಲಜೋಲ್ 0.6 ಗ್ರಾಂ ಎಂಬ ಶಿಲೀಂಧ್ರನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡಬೇಕು. ಇದನ್ನು ನಾಟಿ ಮಾಡಿದ ಗದ್ದೆಯಲ್ಲಿ ತೆಂಡೆ ಹೊಡೆಯುವ ಸಮಯದಲ್ಲಿ, ತೆನೆ ಹೊರ ಬರುವ ಸಮಯದಲ್ಲಿ ಮತ್ತು ತೆನೆ ಹೊರ ಬಂದ ಹತ್ತು ದಿನಗಳ ನಂತರ ಸಿಂಪರಣೆ ಮಾಡಬೇಕು.
ಪೆÇೀಟ್ಯಾಷ್ ಪೆÇೀಷಕಾಂಶದ ಕೊರತೆಯ ಲಕ್ಷಣಗಳು : ಕೊಡಗು ಜಿಲ್ಲೆಯಾದ್ಯಂತ ಭತ್ತದಲ್ಲಿ ಹೆಚ್ಚಾಗಿ ಕಂಡು ಬರುವ ಪೆÇೀಟ್ಯಾಷ್ ಕೊರತೆಯ ಲಕ್ಷಣವನ್ನು ಜಿಲ್ಲೆಯ ರೈತರು ಸಾಮಾನ್ಯವಾಗಿ ಬೆಂಕಿರೋಗ ವೆಂದು ತಿಳಿದು ಸಿಂಪರಣೆ ಮಾಡುತ್ತಿದ್ದಾರೆ. ಆದ್ದರಿಂದ ರೈತರು ಈ ಕೆಳಗೆ ತಿಳಿಸಿರುವ ಪೆÇೀಟ್ಯಾಷ್ ಕೊರತೆ ಇರುವ ಭತ್ತದ ಗದ್ದೆಗಳಲ್ಲಿ ಶಿ¥sóÁರಸ್ಸು ಮಾಡಿರುವಷ್ಟು ಮುರೇಟ್ ಆ¥sóï ಪೆÇೀಟ್ಯಾಷ್‍ನ್ನು ಕೊಡಬೇಕು.
ಪೆÇೀಟ್ಯಾಷ್ ಗೊಬ್ಬರದ ಲಕ್ಷಣಗಳು : ಪ್ರಾರಂಭದಲ್ಲಿ ಭತ್ತದ ಎಲೆಗಳು ಹಳದಿಯಾಗಿ ತುದಿಯ ಭಾಗವು ಒಣಗುತ್ತದೆ. ನಂತರ ಎಲೆಯ ಅಂಚÀಗಳು ಕೂಡ ಒಣಗುತ್ತವೆ. ಈ ಲಕ್ಷಣವನ್ನು ಜಿಲ್ಲೆಯ ರೈತರು ಬೆಂಕಿ ರೋಗವೆಂದು ತಿಳಿದು ಅದಕ್ಕೆ ಶಿಲೀಂಧ್ರನಾಶಕಗಳನ್ನು ಸಿಂಪರಣೆ ಮಾಡುತ್ತಿದ್ದಾರೆ. ಆದ್ದರಿಂದ ಪೆÇೀಟ್ಯಾಷ್ ಕೊರತೆ ಇರುವ ಭತ್ತದ ಗದ್ದೆಗಳಲ್ಲಿ ಎಕರೆಗೆ ಶಿ¥sóÁರಸ್ಸು ಮಾಡಿರುವಷ್ಟು ಮುರೇಟ್ ಆ¥sóï ಪೆÇೀಟ್ಯಾಷ್ 65 ಕೆ.ಜಿ (ಸುಧಾರಿತ ತಳಿಗಳಿಗೆ), 30 ಕೆ.ಜಿ ಮುರೇಟ್ ಆ¥sóï ಪೆÇೀಟ್ಯಾಷ್ (ಸ್ಥಳೀಯ ತಳಿಗಳಿಗೆ)ನ್ನು ಕೊಡಬೇಕು. ವಿನಂತಿ. ಈ ಮೇಲೆ ತಿಳಿಸಿದ ಕೀಟ ಮತ್ತು ರೋಗಗಳ ಹತೋಟಿಗೆ ಶಿ¥sóÁರಸ್ಸು ಮಾಡಿದ ಕೀಟ ಮತ್ತು ರೋಗನಾಶಕಗಳು ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದ್ದು ಜಿಲ್ಲೆಯ ರೈತರು ಇದರ ಉಪಯೋಗವನ್ನು ಪಡೆದುಕೊಳ್ಳ ಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸ ಬೇಕಾದ ವಿಳಾಸ
ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು 08274 - 247274
ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ವೀರಾಜಪೇಟೆ ತಾಲೂಕು 08274 - 257759