ವೀರಾಜಪೇಟೆ, ಸೆ. 10: ಮನುಷ್ಯರ ವ್ಯಕ್ತಿಯ ಪ್ರತಿಭೆಯನ್ನು ಅಂಕಿ ಅಂಶಗಳಿಂದ ಅಳೆಯಲು ಸಾಧ್ಯವಿಲ್ಲ ಎಂದು ಅಂತರ್ರಾಷ್ಟ್ರೀಯ ಹಾಕಿ ಆಟಗಾರ ಏಕಲವ್ಯ ಪ್ರಶಸ್ತಿ ವಿಜೇತ ಹಾಗೂ ಸ್ವಚ್ಛತಾ ರಾಯಬಾರಿ (ಬ್ರಾಂಡ್ ಅಂಬಾಸಿಡರ್) ಕರಿನೆರವಂಡ ಸೋಮಣ್ಣ ಹೇಳಿದರು.

ನಾಡ ಹಬ್ಬ ಗೌರಿ ಗಣೇಶ ಹಬ್ಬದ ಪ್ರಯುಕ್ತ ವೀರಾಜಪೇಟೆ ಪಟ್ಟಣ ಪಂಚಾಯತ್ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಸಾರ್ವಜನಿಕರಿಗೆ ಆಯೋಜಿಸಲಾಗಿದ್ದ ಮೆರಥಾನ್ ಓಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಲಂಪಿಯನ್ ಚೇಂದಂಡ ನಿಕಿನ್ ತಿಮ್ಮಯ್ಯ ಮಾತನಾಡಿ, ಸ್ವಚ್ಛತೆಯಲ್ಲಿ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿರುವದು ಶ್ಲಾಘನೀಯ ಎಂದರು.

ಶಾಸಕ ಕೆ.ಜಿ. ಬೋಪಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ, ಉಪಾಧ್ಯಕ್ಷೆ ತಸ್ನೀಂ ಅಕ್ತರ್, ಕಾವiಗಾರಿ ಸ್ಥಾಯಿ ಸಮಿತಿ ಅಧ್ಯಕ್ಷೆ ಬಿ.ಡಿ ಸುನಿತಾ, ಗೌರಿ ಗಣೇಶ ಆಚರಣಾ ಸಮಿತಿ ಅಧ್ಯಕ್ಷ ಕೇಳಪಂಡ ವಿಶ್ವನಾಥ್ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಸದಸ್ಯರು ಉಪಸ್ಥಿತರಿದ್ದರು. ಮೆರಥಾನ್ ಓಟದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ 400ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಪುರುಷರ ವಿಭಾಗದಲ್ಲಿ ಭಾಗಮಂಡಲದ ಕೋಡಿ ಜೀತು (ಪ್ರ), ನೆಹರೂ ನಗರದ ರಧೀಶ್ (ದ್ವಿ), ಮೇಚಂಡ ಕಾರ್ಯಪ್ಪ (ತೃ), ಮಹಿಳೆಯರ ವಿಭಾಗದಲ್ಲಿ ಹೆಗ್ಗಳದ ವಿದ್ಯಾಶ್ರೀ (ಪ್ರ), ನವ್ಯಶ್ರೀ (ದ್ವಿ), ಲಸಿತಾ ಬಿ ಶೆಟ್ಟಿ (ತೃ) ಸ್ಥಾನ ಪಡೆದುಕೊಂಡರು.