ವೀರಾಜಪೇಟೆ, ಆ. 4: ಕೊಡವ ಭಾಷೆ ಮತ್ತು ಸಾಹಿತ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಾ. 6 ಮತ್ತು 7 ರಂದು ವೀರಾಜಪೇಟೆಯ ಜಿಮ್ಮಿ ಕಲಾ ವೇದಿಕೆಯಲ್ಲಿ ಕೊಡವ ಸಾಹಿತ್ಯ ಪಡಿಪು ಶಿಬಿರವನ್ನು ಆಯೋಜಿಸಲಾಗಿದೆ ಎಂದು ಕೊಡವ ಸಾಹಿತ್ಯ ಅಕಾಡಮಿಯ ಸದಸ್ಯ ಮಾದೇಟ್ಟಿರ ಬೆಳ್ಯಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡವ ಸಾಹಿತ್ಯ ಅಕಾಡಮಿ, ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ವೀರಾಜಪೇಟೆ ಕೊಡವ ಸಮಾಜ ಇವರ ಜಂಟಿ ಆಶ್ರಯದಲ್ಲಿ ಕೊಡವ ಸಾಹಿತ್ಯವನ್ನು ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ 100 ಆಯ್ದ ವಿದ್ಯಾರ್ಥಿಗಳಿಗೆ ಸಾಹಿತ್ಯ ಪಡಿಪು ಶಿಬಿರವನ್ನು ನಡೆಸಲಾಗುತ್ತಿದೆ.
ಕಾರ್ಯಕ್ರಮವನ್ನು ಕುವೆಂಪು ಇನ್ಸ್‍ಟ್ಯೂಟ್ ಆಫ್ ಕನ್ನಡ ಸ್ಟಡಿಸ್‍ನ ಉಪನ್ಯಾಸಕರಾದ ಪ್ರೊ. ಅರವಿಂದ್ ಮಾಲಗತ್ತಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಕನ್ನಡ ಸಂಸ್ಕøತಿ ಇಲಾಖೆಯ ಜಂಟಿ ನಿದೆರ್Éೀಶಕ ಎನ್. ಮಲ್ಲಿಕಾರ್ಜುನಸ್ವಾಮಿ, ಸಾಹಿತಿ ಹಾಗೂ ವಿಮರ್ಶಕ ಮಳಲಿ ವಸಂತ್‍ಕುಮಾರ್, ಸಾಹಿತಿ ನಾಗೇಶ್ ಕಾಲೂರ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ನಾಣಯ್ಯ, ಮೈಸೂರು ರಂಗಾಯಣ ನಿವೃತ್ತ ನಿದೆರ್Éೀಶಕ ಎಸ್.ಐ ಭಾವಿಕಟ್ಟಿ ಪಾಲ್ಗೊಳ್ಳುವರು. ಇದೇ ಸಂದÀರ್ಭದಲ್ಲಿ ದಕ್ಷಿಣ ಭಾರತತ್‍ರ ಓರ್ ಚೆರಿಯ ಆದರ್ಶ ರಾಜ್ಯ ಎಂಬ ಪುಸ್ತಕ ಬಿಡುಗಡೆ ನಡೆಯಲಿದೆ. ಉಳಿದಂತೆ ಸಂವಾದ, ಕೊಡವ ಕವಿಗೋಷ್ಠಿ, ಸಾಹಿತ್ಯ ಪಡಿಪು ಶಿಬಿರ, ತಾ. 7 ರಂದು ಕೊಡವ ಸಾಹಿತ್ಯ ಶಿಬಿರ, ಸಾಕ್ಷ್ಯ ಚಿತ್ರ ಬಿಡುಗಡೆ, ಸಮಾರೋಪ ಸಮಾರಂಭಗಳು ನಡೆಯಲಿದೆ ಎಂದು ಹೇಳಿದರು.
ಕೊಡವ ಸಮಾಜದ ಕಾರ್ಯದರ್ಶಿ ಕುಲ್ಲಚಂಡ ಜಯ ಪೂಣಚ್ಚ ಮಾತನಾಡಿ ವೀರಾಜಪೇಟೆ ಕೊಡವ ಸಮಾಜ ಹಳೆಯ ಸಮಾಜವಾಗಿದ್ದು ಕೊಡವ ಭಾಷೆ, ಸಾಹಿತ್ಯಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಅದೇ ರೀತಿ ಈ ಕಾರ್ಯ ಕ್ರಮಕ್ಕೂ ಸಂಪೂರ್ಣ ಪ್ರೋತ್ಸಾಹ ನೀಡಲಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪಳೆಯಂಡ ಪಾರ್ಥಚಿಣ್ಣಪ್ಪ, ಕೊಡವ ಸಮಾಜದ ಮರಣನಿಧಿ ಕಾರ್ಯದರ್ಶಿ ಅಲ್ಲಪಂಡ ಚಿಣ್ಣಪ್ಪ ಉಪಸ್ಥಿತರಿದ್ದರು.