ವೀರಾಜಪೇಟೆ, ಆ. 24: ರಾಜ್ಯ ಸರ್ಕಾರ ಅಮ್ನೇಸ್ಟಿ ಇಂಟರ್ ನ್ಯಾಷನಲ್ ಮತ್ತು ದಿ ಯುನೈಟೆಡ್ ಥಯೋಲಾಜಿಕಲ್ ಕಾಲೇಜಿನ ವಿರುದ್ಧ ಯಾವದೇ ಕ್ರಮಕೈಗೊಳ್ಳದ ಕ್ರಮವನ್ನು ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಇಂದು ಪ್ರತಿಭಟನೆ ನಡೆಸಿ ತಹಶೀಲ್ದಾರ್‍ಗೆ ಮನವಿ ಪತ್ರ ಸಲ್ಲಿಸಿತು.
ಮನವಿಯಲ್ಲಿ ದೇಶ ದ್ರೋಹ ಘೋಷಣೆಯನ್ನು ಕೂಗಿದವರನ್ನು ಕೂಡಲೆ ಬಂಧಿಸಬೇಕು. ಭಾರತದ ಐಕ್ಯತೆಗೆ ಧಕ್ಕೆ ತರುವ ಮತ್ತು ಭಾರತೀಯ ಸೈನ್ಯದ ವಿರುದ್ಧ ಘೋಷಣೆ ಕೂಗಿದವರನ್ನು ಬಂಧಿಸಬೇಕು. ಅಮ್ನೇಸ್ಟಿ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಕ್ರಮಕೈಗೊಳ್ಳಬೇಕು, ಪ್ರಕರಣವನ್ನು ರಾಷ್ಟ್ರಿಯ ತನಿಖಾದಳಕ್ಕೆ ಒಪ್ಪಿಸಬೇಕು, ಅಮ್ನೇಸ್ಟಿ ಇಂಟರ್‍ನ್ಯಾಷನಲ್ ಸಂಸ್ಥೆಯನ್ನು ಭಾರತದಾದÀ್ಯಂತ ನಿಷೇಧಿಸಬೇಕು ಎಂದು ಆಗ್ರಹಿಸಲಾಗಿದೆ.
ತಹಶೀಲ್ದಾರ್ ಮಹಾದೇವ ಸ್ವಾಮಿ ಮನವಿ ಸ್ವೀಕರಿಸಿ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಲಾಗುವದು ಎಂದು ಹೇಳಿದರು.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ಸಹ ಸಂಚಾಲಕ ಕೆ.ಎಂ. ಶಿವಕುಮಾರ್, ನಗರ ಸಂಚಾಲಕ ಐ.ಕೆ. ಸುಜೀತ್, ಕಾರ್ಯಕರ್ತ ಸಿದ್ಧರಾಜು, ಪ್ರಶಾಂತ್ ನಾಣಯ್ಯ ಮತ್ತಿತರರು ವಹಿಸಿದ್ದರು.