ಸುಂಟಿಕೊಪ್ಪ, ನ. 2: ರಾಜ್ಯ ಸರ್ಕಾರ ಟಿಪ್ಪು ಜಯಂತಿಯನ್ನು ಆಚರಿಸುವದಾದರೆ ಎಲ್ಲಾ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತ ಭದ್ರತೆಯೊಂದಿಗೆ ಶಾಂತಿಯುತವಾಗಿ ಟಿಪ್ಪು ಜಯಂತಿಯನ್ನು ಆಚರಿಸಲಿ ಎಂದು ಸುಂಟಿಕೊಪ್ಪ ಹೋಬಳಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕೊಡಗು ಜಿಲ್ಲಾ ಕಾರ್ಮಿಕರ ಮತ್ತು ಚಾಲಕರ ಸಂಘವು ಜಂಟಿಯಾಗಿ ಒತ್ತಾಯಿಸಿದೆ.

ಟಿಪ್ಪು ಜಯಂತಿಯನ್ನು ಆಚರಿಸ ಬೇಕೆಂದು ಯಾವ ಧರ್ಮದವರಾಗಲಿ, ಯಾವದೇ ಸಂಘಟನೆಯಾಗಲಿ ಸರ್ಕಾರವನ್ನು ಒತ್ತಾಯಿಸಿಲ್ಲ. ಆದರೂ ರಾಜ್ಯ ಸರ್ಕಾರ ತನ್ನ ಸ್ವಇಚ್ಚೆಯಿಂದ ಟಿಪ್ಪು ಜಯಂತಿಯನ್ನು ಆಚರಿಸಲು ಘೋಷಿಸಿದೆ. ಆಚರಣೆಗೆ ನಮ್ಮ ಅಭ್ಯಂತರವಿಲ್ಲ ಎಂದಿರುವ ಸಂಘಟಕರು, ಆಚರಣೆಯ ಸಂದರ್ಭ ಯಾವದೇ ಅಹಿತಕರ ಘಟನೆಗಳು ನಡೆಯಬಾರದು.. ಒಂದು ವೇಳೆ ಸರ್ಕಾರದ ಆದೇಶದಂತೆ ಟಿಪ್ಪು ಜಯಂತಿಯನ್ನು ಆಚರಿಸುವದಾದರೆ ಕಳೆದ ವರ್ಷದಂತೆ ಜಿಲ್ಲಾಡಳಿತ ಮೃದುತ್ವ ಧೋರಣೆ ಅನುಸರಿಸದೆ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಮತ್ತು ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಲಿ.

ಟಿಪ್ಪು ಜಯಂತಿ ಆಚರಣೆಗೆ ಪರ, ವಿರೋಧದ ಹೋರಾಟದಲ್ಲಿ ಜೀವ ಹಾನಿ ಆದಲ್ಲಿ ಸರ್ಕಾರ ಅಥವಾ ಅದಕ್ಕೆ ಕುಮ್ಮಕ್ಕು ನೀಡುವವರು ನೇರ ಹೊಣೆಗಾರರಾಗುತ್ತಾರೆ ಎಂಬದು ಎಲ್ಲರೂ ಅರಿಯುವಂತಾಗಲಿ. ಈ ಹಿನ್ನೆಲೆಯಲ್ಲಿ ಶಾಂತಿ ಸೌಹಾರ್ದv Éಯಿಂದ ಟಿಪ್ಪು ಜಯಂತಿ ಮುಕ್ತಾಯಗೊಳ್ಳಲಿ ಎಂದು ಸುಂಟಿಕೊಪ್ಪ ಹೋಬಳಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾಗೇಶ್ ಪೂಜಾರಿ, ಕೊಡಗು ಜಿಲ್ಲಾ ಕಾರ್ಮಿಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಅಣ್ಣಾ ಶರೀಫ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.