ಕೂಡಿಗೆ: ಇಲ್ಲಿನ ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ ಹಾಗೂ ಯಂಗ್ ಸ್ಟಾರ್ ಅಸೋಸಿಯೇಷನ್ ವತಿಯಿಂದ 10ನೇ ವರ್ಷದ ಗೌರಿ-ಗಣೇಶೋತ್ಸವ ಹಬ್ಬದ ಅಂಗವಾಗಿ ಮೂರ್ತಿ ಯನ್ನು ಪ್ರತಿಷ್ಠಾಪಿಸಿ, ಮೂರು ದಿನಗಳವರೆಗೆ ಪೂಜಿಸಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ವಿಸರ್ಜಿಸಲಾಯಿತು.ವಿದ್ಯುತ್ ಅಲಂಕೃತ ಮಂಟಪದಲ್ಲಿ ಗಣೇಶನ ವಿಗ್ರಹವನ್ನಿರಿಸಿ ಡೊಳ್ಳುಕುಣಿತ ಮತ್ತು ಮಂಡ್ಯದ ವೀರಗಾಸೆ ಸೇರಿದಂತೆ ವಿವಿಧ ಕಲಾ ತಂಡಗಳ ಪ್ರದರ್ಶನದ ಮೆರವಣಿಯೊಂದಿಗೆ ಮದ್ದುಗುಂಡಗಳನ್ನು ಸಿಡಿಸಿ ಮೆರವಣಿಗೆ ಸಾಗಿ ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಎದುರು ಕಾವೇರಿ ನದಿಯಲ್ಲಿ ವಿಸರ್ಜಿಸಿಲಾಯಿತು. ಈ ಸಂದರ್ಭ ಕುಶಾಲನಗರದ ಝೇಂಕಾರ್ ಮೆಲೋಡಿಸ್ ಆರ್ಕೆಷ್ಟ್ರಾ ವತಿಯಿಂದ ರಸಮಂಜರಿ ನಡೆಯಿತು.
ಈ ಸಂದರ್ಭ ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಕೆ.ಬಿ. ಮೋಹನ್, ಯಂಗ್ ಸ್ಟಾರ್ ಅಸೋಸಿಯೇಷನ್ ಅಧ್ಯಕ್ಷ ಕೆ.ಟಿ. ಪ್ರವೀಣ್, ಗೌರವಾಧ್ಯಕ್ಷ ಕೆ.ಎಸ್. ಮಲ್ಲೇಶ್, ಉಪಾಧ್ಯಕ್ಷ ಕೆ.ಟಿ. ಪ್ರಮೋದ್, ಕಾರ್ಯದರ್ಶಿ ಕೆ.ಎಂ. ಮಂಜುನಾಥ್ ಸೇರಿದಂತೆ ಸಮಿತಿಯ ನಿರ್ದೇಶಕರು, ಮೇಲ್ವಿಚಾರಕರು, ಮುಖ್ಯ ಸಂಚಾಲಕರು, ಗ್ರಾಮಸ್ಥರು ಭಾಗವಹಿಸಿದ್ದರು.ಶ್ರೀಮಂಗಲ : ಶ್ರೀಮಂಗಲ ಪಟ್ಟಣದ ಗೌರಿ ಗಣೇಶ ಉತ್ಸವ ಸಮಿತಿಯಿಂದ 2ನೇ ವರ್ಷದ ಉತ್ಸವದಲ್ಲಿ ಸ್ಥಳೀಯ ಕಲಾವಿದರ ತಂಡದಿಂದ ಸೋಮವಾರ ರಾತ್ರಿ ಕೊಡವ ಹಾಡು ಜನಮನ ರಂಜಿಸಿತು. ಪಟ್ಟಣದ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ವಿಶೇಷ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಾಯೋಜಕತ್ವದೊಂದಿಗೆ ನಡೆದ ಕೊಡವ ಹಾಡು ಕಾರ್ಯಕ್ರಮದಲ್ಲಿ ಯುವ ಕೊಡವ ಹಾಡುಗಾರರಾದ ಬೊಪ್ಪಂಡ ಜಪ್ರಿ ಅಯ್ಯಪ್ಪ, ಉಳುವಂಗಡ ಲೋಹಿತ್ ಭೀಮಯ್ಯ, ನೆಲ್ಲಮಕ್ಕಡ ಸಾಗರ್, ಪರದಂಡ ಕಾವ್ಯ, ಅಣ್ಣಳಮಾಡ ಗಿರಿ, ನಾಳಿಯಮ್ಮಂಡ ವೀಣಾ ಅವರ ತಂಡ ವಿವಿಧ ಕೊಡವ ಹಾಡುಗಳನ್ನು ಹಾಡಿ ರಂಜಿಸಿತು. ಚಂದ್ರು ತಬಲ, ಶ್ರೀನಿವಾಸ್ ಕೀಬೋರ್ಡ್, ಶಾಂತಮೂರ್ತಿ ರಿದಂಪ್ಯಾಡ್ ನುಡಿಸಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಕಾರ್ಯಕ್ರಮದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಬಾಚಂಗಡ ದಾದಾ ದೇವಯ್ಯ, ಪದಾಧಿಕಾರಿಗಳು ಭಾಗವಹಿಸಿದ್ದರು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಸುಂಟಿಕೊಪ್ಪ : ವಿಶ್ವ ಹಿಂದೂ ಪರಿಷದ್ ಮತ್ತು ಗೌರಿ-ಗಣೇಶೋತ್ಸವ ಸಮಿತಿಯ ವತಿಯಿಂದ 52ನೇ ವರ್ಷದ ಗೌರಿ-ಗಣೇಶೋತ್ಸವದ ಅಂಗವಾಗಿ ಕೋದಂಡ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ-ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು. ಒಂದು ವಾರಗಳ ಕಾಲ ವಿಶೇಷ ಪೂಜೆ, ಹೋಮ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ಗೌರಿ-ಗಣೇಶ ಮೂರ್ತಿಯನ್ನು ಕುಳ್ಳಿರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡಿ.ಜೆ., ಕೇರಳದ ಚಂಡೆಮೇಳ ಹಾಗೂ ನಾದಸ್ವರದೊಂದಿಗೆ ಹರ್ಷೋದ್ಗಾರಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ನಡೆಸುವ ಮೂಲಕ ಗದ್ದೆಹಳ್ಳದ ವೈ.ಎಂ. ಕರುಂಬಯ್ಯ ಅವರ ಕೆರೆಯಲ್ಲಿ ವಿಸರ್ಜಿಸಲಾಯಿತು.ಸುಂಟಿಕೊಪ್ಪ: ಇಲ್ಲಿನ ವಿಶ್ವ ಹಿಂದೂ ಪರಿಷದ್ ಮತ್ತು ಗೌರಿ-ಗಣೇಶೋತ್ಸವ ಸಮಿತಿಯ ವತಿಯಿಂದ 52ನೇ ಗಣೇಶೋತ್ಸವದ ಅಂಗವಾಗಿ ಅಮ್ಮತ್ತಿಯ ರಾಜ್ಯ ಪ್ರಶಸ್ತಿ ವಿಜೇತ ಎನ್.ಆರ್. ರಾಜೇಶ್ ಮತ್ತು ತಂಡ ನಡೆಸಿಕೊಟ್ಟ ಜಾದೂ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಜಾದೂ ಪ್ರದರ್ಶನದ ಮೂಲಕ ರಾಜೇಶ್ ಮನರಂಜನೆ ನೀಡಿದರು. ಜನ ನೋಡುತ್ತಿದ್ದಂತೆ ವಸ್ತುಗಳು ಕ್ಷಣ ಮಾತ್ರದಲ್ಲಿ ಮಾಯ, ಸಣ್ಣ ಡಬ್ಬಿಗಳಲ್ಲಿ ದೊಡ್ಡದಾದ ಗೊಂಬೆಗಳು, ಮಕ್ಕಳ ಪಕ್ಕದಲ್ಲೇ ರಾಶಿ ರಾಶಿ ಮಿಠಾಯಿಗಳು ಪ್ರತ್ಯಕ್ಷ, ಸಾರ್ವಜನಿಕರ ಪಕ್ಕದಲ್ಲೇ ಗಾಳಿಯಲ್ಲಿ ಹಾರಾಡಿದ ಕುರ್ಚಿ, ಕೊನೆಯಲ್ಲಿ ದೇಶದ ಬಾವುಟವನ್ನು ಜಾದು ಮೂಲಕ ತೋರಿಸಿದಾಗ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡಿದರು.ಸುಂಟಿಕೊಪ್ಪ : ಇಲ್ಲಿನ ವಿಶ್ವ ಹಿಂದೂ ಪರಿಷದ್ ಮತ್ತು ಗೌರಿ-ಗಣೇಶೋತ್ಸವ ಸಮಿತಿಯ ವತಿಯಿಂದ 52ನೇ ವರ್ಷದ ಗೌರಿ-ಗಣೇಶೋತ್ಸವದ ಅಂಗವಾಗಿ ವಿವಿಧ ಸ್ಪರ್ಧೆಗಳು ನಡೆದವು. ಮಹಿಳೆಯರಿಗೆ ಮಡಿಕೆ ಒಡೆಯುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಮಕ್ಕಳಿಗಾಗಿ ಬೆಲೂನ್ ಒಡೆಯುವದು, ಮಡಿಕೆ ಒಡೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಸ್ಪರ್ಧೆ ವಿಜೇತರು
ಮಹಿಳೆಯರ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮಂಜುಳ, ದ್ವಿತೀಯ ಬಹುಮಾನ ಬಿ.ಎ. ಪೂಜಾ, ತೃತೀಯ ಬಹುಮಾನ ಬಿ.ಎಸ್. ಸುಮ. ಮಹಿಳೆಯರ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಪ್ರಥಮ ಮೀರಾ ಪ್ರವೀಣ್, ದ್ವಿತೀಯ ಪ್ರಮೀಳಾ ಮಂಜುನಾಥ್, ತೃತೀಯ ವನಿತ. ಮಕ್ಕಳ ಬೆಲೂನ್ ಒಡೆಯುವ ಸ್ಪರ್ಧೆಯಲ್ಲಿ ಬಾಲಕಿಯರ ವಿಭಾಗದಲ್ಲಿ ಪ್ರಥಮ ಪ್ರತಿಭಾ, ದ್ವಿತೀಯ ಸುಜನ್ಯಾ, ತೃತೀಯ ಖುಷಿ. ಬಾಲಕರ ವಿಭಾಗದಲ್ಲಿ ಪ್ರಥಮ ದಿನೇಶ್, ದ್ವಿತೀಯ ತರುಣ್ ಕುಮಾರ್, ತೃತೀಯ ಸುಜಾ ಲೋಕೇಶ್
ಬಾಲಕಿಯರ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಪ್ರಥಮ ಮಾನ್ಯ, ದ್ವಿತೀಯ ಐಶ್ವರ್ಯ, ತೃತೀಯ ದರ್ಶಿನಿ ಬಹುಮಾನ ಪಡೆದುಕೊಂಡರು.ಸುಂಟಿಕೊಪ್ಪ : ವಿಶ್ವ ಹಿಂದೂ ಪರಿಷದ್ ಮತ್ತು ಗೌರಿ-ಗಣೇಶೋತ್ಸವ ಸಮಿತಿಯ ವತಿಯಿಂದ 52ನೇ ವರ್ಷದ ಗೌರಿ-ಗಣೇಶೋತ್ಸವದ ಅಂಗವಾಗಿ ಸ್ವಸ್ಥ ಶಾಲೆಯ ವಿಶೇಷ ಮಕ್ಕಳಿಂದ ನೃತ್ಯ ಪ್ರದರ್ಶನ ಮತ್ತು ಕುಶಾಲನಗರದ ವಿದ್ವಾನ್ ಶಂಕರಯ್ಯ ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ನಡೆದವು. ಸ್ವಸ್ಥ ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮ ಕೊಡಗಿನ ವೈಭವವನ್ನು ಬಿಂಬಿಸುವ ಕೊಡವ ನೃತ್ಯ ನೆರೆದವರನ್ನು ಆಕರ್ಷಿಸಿತು. ಕುಶಾಲನಗರದ ಶಂಕರಯ್ಯ ಕಲಾ ತಂಡದವರು ನಡೆಸಿಕೊಟ್ಟ ಭರತನಾಟ್ಯ ಮತ್ತು ನೃತ್ಯ ರೂಪಕ ಜನರ ಚಪ್ಪಾಳೆ ಗಿಟ್ಟಿಸಿತು. ನಂತರ ಗೌರಿ ಗಣೇಶ ಮೂರ್ತಿಗೆ ಪೂಜೆ ನಡೆದು, ನೆರೆದಿದ್ದ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.ಚೆಟ್ಟಳ್ಳಿ: ಚೆಟ್ಟಳ್ಳಿಯ ಶ್ರೀ ವೀರಾಂಜನೆಯ ಯುವಕ ಸಂಘದ ವತಿಯಿಂದ 2ನೇ ವರ್ಷದ ಗೌರಿಗಣೇಶೊತ್ಸವನ್ನು ಆಚರಿಸಲಾಯಿತು. ಉತ್ಸವ ಮೂರ್ತಿಯನ್ನು ಚೆಟ್ಟಳ್ಳಿಯ ಸಹಕಾರ ಸಂಘದ ನರೇಂದ್ರ ಮೋದಿ ಭವನದಲ್ಲಿ ಪ್ರತಿಷ್ಠಾಪಿಸಿ ಹೋಮ ಹಾಗೂ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಸಂಘದ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ಅಲಂಕೃತÀ ಮಂಟಪದೊಂದಿಗೆ ಪಟ್ಟಣದುದ್ದಕ್ಕೂ ಮೆರವಣಿಗೆ ತೆರಳಿ ಸುಂಟಿಕೊಪ್ಪ ರಸ್ತೆಯ ಭೂತನಕಾಡು ಹೊಳೆಯಲ್ಲಿ ವಿಸರ್ಜನೆ ಮಾಡಲಾಯಿತು. ಗೌರಿ-ಗಣೇಶ ಹಬ್ಬದ ಪ್ರಯುಕ್ತ ವಿವಿಧ ಸಮಿತಿಗಳ ಆಶ್ರಯದಲ್ಲಿ ಪಟ್ಟಣದಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಗಳ ವಿಸರ್ಜನೆಯ ಶೋಭಾಯಾತ್ರೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ವೆಂಕಟೇಶ್ವರ ಕಾಲೋನಿಯ ಶ್ರೀ ವಿನಾಯಕ ಯುವಕ ಮಂಡಳಿ, ಗಾಂಧಿನಗರದ ಶ್ರೀ ರಾಮ ಮಂದಿರ ಯುವಕ ಮಿತ್ರ ಮಂಡಳಿ, ಶ್ರೀ ವಿಘ್ನೇಶ್ವರ ಸೇವಾ ಸಮಿತಿ, ಶ್ರೀ ಗಜಾನನ ಯುವಕ ಸಂಘ, ಕೋಡಂಬೂರಿನ ಶ್ರೀ ವಿಘ್ನೇಶ್ವರ ಗೆಳೆಯರ ಬಳಗ, ಎಂ. ಬಾಡಗ ಶ್ರೀ ಬಿಸಿಲು ಮಾರಿಯಮ್ಮ ಗೆಳೆಯರ ಬಳಗ, ಭಗವತಿ ಕಾಲೋನಿಯ ಶ್ರೀ ವಿದ್ಯಾ ವಿನಾಯಕ ಗೆಳೆಯರ ಬಳಗ, ಗಾಂಧಿನಗರ ದುರ್ಗಾ ಪರಮೇಶ್ವರಿ ಬಾಲಕ ಭಕ್ತ ಮಂಡಳಿ ಹಾಗೂ ಜೈ ಬಜರಂಗಿ ಯುವಕ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಒಂಭತ್ತು ಗಣಪತಿ ಮೂರ್ತಿಗಳ ಮಂಟಪಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದವು. ವಿವಿಧ ಸ್ಥಳಗಳಲ್ಲಿ ತಾತ್ಕಲಿಕ ವೇದಿಕೆ ನಿರ್ಮಿಸಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಗಳಿಗೆ ಏಳು ದಿನಗಳವರೆಗೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿ ಮಹಾಮಂಗಳಾರತಿ ಬಳಿಕ ವಿದ್ಯುತ್ ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಪಟ್ಟಣದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ರಾತ್ರಿ ಹತ್ತು ಗಂಟೆಯ ಬಳಿಕ ಪಟ್ಟಣಕ್ಕೆ ಸಂಚರಿಸಿದ ಎಲ್ಲಾ ಮಂಟಪಗಳು ಸಾಲು ಸಾಲಾಗಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿತು. ನೆರದ ಭಕ್ತಾದಿಗಳು ಗಣೇಶ ಮೂರ್ತಿಗಳಿಗೆ ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿ, ಭಕ್ತಾದಿಗಳಿಗೆ ಸಮಿತಿಗಳ ವತಿಯಿಂದ ಅನ್ನಸಂತರ್ಪಣೆ ನಡೆಯಿತು. ಮೆರವಣಿಗೆಯಲ್ಲಿ ರಂಗು ರಂಗಿನ ವಿದ್ಯುತ್ ಅಲಕೃಂತ ಮಂಟಪಗಳು ನೋಡುಗರ ಮನತಣಿಸಿತು. ಗಾಂಧಿನಗರದ ಶ್ರೀ ದುರ್ಗಾ ಪರಮೇಶ್ವರಿ ಬಾಲಕ ಭಕ್ತ ಮಂಡಳಿಯ ಶಿವ ಪುತ್ರರ ಶಾಂತಿ ಸ್ವರೂಪ ದರ್ಶನ ಕಥಾ ಭಾಗವನ್ನಧರಿಸಿ ರಚಿಸಲಾದ ಕಲಾಕೃತಿಗಳ ಚಲನವಲನ ಮಂಟಪ ಸಾರ್ವಜನಿಕರ ಗಮನ ಸೆಳೆಯಿತು. ಸೋಮವಾರ ಬೆಳಗ್ಗಿನ ಜಾವ ಬಲಮುರಿ ಕಾವೇರಿ ನದಿಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು.ಶ್ರೀಮಂಗಲ : ಶ್ರೀಮಂಗಲದಲ್ಲಿ ಗೌರಿ-ಗಣೇಶ ಉತ್ಸವ ಸಮಿತಿ ವತಿಯಿಂದ ಸಂಭ್ರಮದ ಗಣಪತಿ ವಿಸರ್ಜನೋತ್ಸವ ನಡೆಯಿತು. ವೈವಿಧ್ಯಮಯ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.