ಮಡಿಕೇರಿ, ನ. 2: ವಿಜಯ ವಿನಾಯಕ ದೇವಾಲಯದ ವಾರ್ಷಿಕೋತ್ಸವದ ಸಂದರ್ಭ ಇಂದು ದೇವಾಲಯಕ್ಕೆ ಮಾಜಿ ಸಂಸದೆ, ರಾಜ್ಯ ಬಿಜೆಪಿ ಕಾರ್ಯದರ್ಶಿ ತೇಜಸ್ವಿನಿ ರಮೇಶ್ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಬಳಿಕ ಅನ್ನಪ್ರಸಾದ ಸ್ವೀಕರಿಸಿ ಮರಳಿದರು. ಈ ಸಂದರ್ಭ ಬಿಜೆಪಿ ಸ್ವಾಭಿಮಾನಿ ಮಹಿಳಾ ತಂಡದ ಕಾಂತಿ ಸತೀಶ್, ಸುಮಿ ಸುಬ್ಬಯ್ಯ, ಪೆಮ್ಮಂಡ ಗೀತಾ ಪವಿತ್ರ ಹಾಗೂ ಇತರರು ಮತ್ತು ದೇವಾಲಯ ಸಮಿತಿ ಅಧ್ಯಕ್ಷ ಶಶಿಧರ್ ರೈ, ಮೋಹನ್ ಮೊಣ್ಣಪ್ಪ, ಜಿ. ಚಿದ್ವಿಲಾಸ್ ಮತ್ತಿತರರು ಹಾಜರಿದ್ದರು.