ವೀರಾಜಪೇಟೆ, ಅ. 1: ವೀರಾಜಪೇಟೆ ಬಳಿಯ ಕಲ್ಲುಬಾಣೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾದ ಕುರಿತು ನಗರ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದಾರೆ.

ವೀರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ನಿಮಿಷಾ (15) ಎಂಬಾಕೆ ನಿನ್ನೆ ದಿನ ಬೆಳಿಗ್ಗೆ 11.30ರ ಸಮಯದಲ್ಲಿ ಮನೆಯ ಕೊಠಡಿಯಲ್ಲಿ ಬಾಗಿಲು ಹಾಕಿಕೊಂಡು ಚೂಡಿದಾರದ ವೇಲ್‍ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೃತೆ ನಿಮಿಷಾಳ ತಂದೆ ಅಶೋಕ್ ಟೈಲರ್ ವೃತ್ತಿಯಲ್ಲಿದ್ದು ತಾಯಿ ಶ್ರೀಜಾ ದುಬೈನಲ್ಲಿ ಮನೆ ಕೆಲಸದ ಉದ್ಯೋಗಿಯಾಗಿದ್ದಾಳೆ. ಈಕೆಗೆ ಸಹೋದರಿಯೊಬ್ಬಳಿದ್ದಾಳೆ.