ಮಡಿಕೇರಿ, ಡಿ. 4: ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ (ಸಿಐಟಿಯು ಸಂಯೋಜಿತ) ಮಡಿಕೇರಿ ತಾಲೂಕು ಸಮಿತಿ ತಾಲೂಕು ಸಮಾವೇಶದ ಭಾಗವಾಗಿ ‘ಪಂಚಾಯತ್ ರಾಜ್ ಆಶಯಗಳು ಮತ್ತು ಇಂದಿನ ಸ್ಥಿತಿಗತಿಗಳು’ ವಿಷಯದ ಕುರಿತು ನಗರದ ಬಾಲಭವನದಲ್ಲಿ ವಿಚಾರ ಸಂಕಿರಣ ನಡೆಯಿತು.

ಕರ್ನಾಟಕ ರಾಜ್ಯ ಗ್ರಾ.ಪಂ.ನೌಕರರ ಸಂಘದ ಅಧ್ಯಕ್ಷ ಮಾರುತಿ ಮಾನ್‍ಪಡೆ ವಿಷಯ ಮಂಡಿಸಿದರು. ಅಧ್ಯಕ್ಷತೆಯನ್ನು ಬಿಜಿವಿಎಸ್‍ನ ರಾಜ್ಯ ಉಪಾಧ್ಯಕ್ಷ ಲತೀಫ್ ವಹಿಸಿದ್ದರು. ಅತಿಥಿಗಳಾಗಿ ರಾಜ್ಯ ರೇಷ್ಮೆ ನಿಗಮ ಮಂಡಳಿಯ ಅಧ್ಯಕ್ಷ ಟಿ.ಪಿ. ರಮೇಶ್, ಸಾಹಿತಿ ಕಣಿವೆ ಭಾರಧ್ವಾಜ್, ಗ್ರಾ.ಪಂ. ನೌಕರರ ಸಂಘದ ಮಡಿಕೇರಿ ತಾಲೂಕು ಸಮಿತಿ ಅಧ್ಯಕ್ಷ ಎಂ.ಜಿ. ಅನೀಶ್, ಜಿಲ್ಲಾಧ್ಯಕ್ಷ ಪಿ.ಆರ್. ಭರತ್, ಜಿಲ್ಲಾ ಉಪ ಕಾರ್ಯದರ್ಶಿ ಬಿ.ಜಿ. ಲೀಲಾವತಿ ಮತ್ತಿತರರು ಪಾಲ್ಗೊಂಡಿದ್ದರು.