ಗೋಣಿಕೊಪ್ಪಲು, ಜು. 29: ಮೂಲತಃ ಕೊಡಗಿನವರಾದ ಪ್ರಸ್ತುತ ಆಗ್ರಾದಲ್ಲಿ ನೆಲೆಸಿರುವ ಪಾಂಡಂಡ ವಿಲ್ಮಾ ಭೀಮಯ್ಯ ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಆಗಿ ನೇಮಕವಾಗಿದ್ದಾರೆ. ಪಾಂಡಂಡ ಭೀಮಯ್ಯ ಅವರ ಪತ್ನಿಯಾಗಿರುವ ವಿಲ್ಮಾ, ಹುದಿಕೇರಿ ಗ್ರಾಮದ ಅಳಮೇಂಗಡ ಡಬ್ಲ್ಯೂ ಮುದ್ದಪ್ಪ ಹಾಗೂ ತಾರಾ ಮುದ್ದಪ್ಪ ಅವರ ಪುತ್ರಿಯಾಗಿದ್ದಾರೆ.