ಶನಿವಾರಸಂತೆ, ಸೆ. 22: ಇಲ್ಲಿಗೆ ಸಮೀಪದ ಮಾಲಂಬಿ ರಸ್ತೆಯಲ್ಲಿ ವಾಹನಗಳು ಪರಸ್ಪರ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರಿಗೆ ಪೆಟ್ಟಾಗಿದ್ದು, ಕಾರು ಜಖಂಗೊಂಡಿರುವ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕೇರಳ ರಾಜ್ಯದ ತಲಚೇರಿ ಮಾಡತ್ತಿಲ್ ಪುರ ಹೌಸ್‍ನ ಎಂ.ಪಿ. ನೌಫಲ್ ಎಂಬರಿಗೆ ಸೇರಿದ ಸ್ವಿಫ್ಟ್ (ಕೆ.ಎಲ್. 58-ಕ್ಯೂ-1002) ಕಾರನ್ನು ಚಾಲಕ ಬೆಂಗಳೂರಿನ ಕೆ.ಆರ್. ಪುರಂ ನಾಯಂಡಹಳ್ಳಿಯ ನಿವಾಸಿ ಅಭಿಷೇಕ್, ಶನಿವಾರಸಂತೆಗೆ ಸ್ನೇಹಿತರಾದ ಪದ್ಮನಾಭ, ಶೀಲಾ, ಮಣಿ ಮತ್ತು ಗಣೇಶ್ ಅವರೊಂದಿಗೆ ಬರುವಾಗ ಮಾಲಂಬಿ ಗ್ರಾಮದ ರಸ್ತೆಯಲ್ಲಿ ಎದುರುಗಡೆಯಿಂದ ಪಿಕ್ ಅರ್ಪ ವಾಹನವನ್ನು ಚಾಲಕ ಸುನಿಲ್ ಚಾಲನೆ ಮಾಡಿಕೊಂಡು ಬಂದು ಸ್ವಿಫ್ಟ್ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯವುಂಟಾಗಿದ್ದು, ಗಾಯಾಳುಗಳನ್ನು ಶನಿವಾರಸಂತೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳ ಪಡಿಸಿದ್ದು, ಚಾಲಕ ಅಭಿಷೇಕ್ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಬಿ.ಎಸ್. ಜನಾರ್ಧನ ಎರಡು ವಾಹನಗಳನ್ನು ವಶಪಡಿಸಿ ಕೊಂಡು ಪ್ರಕರಣ ದಾಖಲಿಸಿದ್ದಾರೆ.