ವೀರಾಜಪೇಟೆ, ಜ. 4: ಕಾವೇರಿ ಕಾಲೇಜು ವೀರಾಜಪೇಟೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ಶಿಬಿರವನ್ನು ಹಚ್ಚಿನಾಡುವಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿತ್ತು. ಸುಮಾರು 100 ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಶಿಬಿರವನ್ನು ವಕೀಲೆ ರೀನಾ ಪ್ರಕಾಶ್ ಉದ್ಛಾಟನೆ ಮಾಡಿದರು. ಯೋಜನಾ ಅಧಿಕಾರಿ ಬಿ.ಯು. ಅಂಬಿಕಾ ಹಾಗೂ ನಾಗರಾಜು ಅವರ ನೇತೃತ್ವದಲ್ಲಿ ಶಿಬಿರ ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಸಂತೋಷ್, ‘ಯುವಜನತೆಯ ಗುರಿ-ನಿರ್ಧಾರ’ ಕುರಿತು, ಪ್ರೊ. ಸುಶೀಲ ‘ಆಧುನಿಕ ಮಹಿಳೆ ಎದುರಿಸುತ್ತಿರುವ ಸವÀುಸ್ಯೆಗಳು’, ಪಿ.ಆರ್. ಶಿವದಾಸ್ ‘ಯುವಜನತೆ ಮತ್ತು ದೇಶ ಭಕ್ತಿ’ಯ ಕುರಿತು, ಎಸ್.ಆರ್. ತರುಮಲ್ಲಯ ‘ಜನಪದ ಸಾಹಿತ್ಯದಲ್ಲಿ ಯುವಜನತೆಯ ಪಾತ್ರ’ದ ಕುರಿತಂತೆ ಮಾರ್ಗದರ್ಶನ ನೀಡಿದರು.
ಪ್ರತಿದಿನ ರಾತ್ರಿ ಸಾಂಸ್ಕøತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾಲೇಜಿನ ಪ್ರಾಧ್ಯಾಪಕ ಆನಂದ್ ಕಾರ್ಲ ಅವರ ತಂಡದಿಂದ ರಸಮಂಜರಿ, ಹಳೆಯ ವಿದ್ಯಾರ್ಥಿಗಳಾದ ಲಿಖಿತ, ಸಂತೋಷ್, ಮೋಹನ್ ಅವರುಗಳಿಂದ ಹಾಡು ಹಾಗೂ ಚಿತ್ರಕಲೆ ಮಾಹಿತಿ ಶಿಬಿರಾರ್ಥಿಗಳ ಪ್ರತಿಭಾ ಪ್ರದರ್ಶನ ನಡೆಯಿತು.