ಸಿದ್ದಾಪುರ, ಆ. 9: ಮೂರ್ನಾಡು ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ತಾ. 29 ರಿಂದ 31 ರವರಗೆ ಸಿದ್ದಾಪುರದಲ್ಲಿ ನಡೆಯಲಿದೆ ಎಂದು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಾಚಯ್ಯ ತಿಳಿಸಿದ್ದಾರೆಇಲ್ಲಿನ ಸಂತ ಅನ್ನಮ್ಮ ಶಾಲಾ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸಂತ ಅನ್ನಮ್ಮ ಶಾಲಾ ಮೈದಾನದಲ್ಲಿ ತಾ. 29 ರಂದು ಉದ್ಘಾಟನೆ ನಡೆಯಲಿದೆ. ವಲಯದ 8 ಶಾಲಾ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಕ್ರೀಡಾಕೂಟಗಳಿಗೆ ಸರ್ಕಾರದ ಧನ ಸಹಾಯ ಅಗತ್ಯವಾಗಿದ್ದು, ಜಿಲ್ಲಾ ಪಂಚಾಯಿತಿ ಮೂಲಕ ಮನವಿ ಸಲ್ಲಿಸಲಾಗಿದೆ. ಗ್ರಾಮೀಣ ಕ್ರೀಡಾಕೂಟಗಳಿಗೆ ಸರಕಾರ ಹೆಚ್ಚಿನ ಅನುದಾನ ನೀಡಬೇಕೆಂದು ಹೇಳಿದರು. ಈ ಸಂದರ್ಭ ವಿವಿಧ ಶಾಲೆಗಳ ದೈಹಿಕ ಶಿಕ್ಷಕರುಗಳಾದ ಐರೀಸ್, ಅಶೋಕ್, ವಿಕ್ಕಿ, ಶಿವಪ್ರಸಾದ್, ಮಂಜು, ಯೊಗೇಶ್, ಮೀನಾ, ಅಬ್ದುಲ್ ನಜೀರ್ ಹಾಗೂ ಮತ್ತಿತರು ಹಾಜರಿದ್ದರು.