ಮಡಿಕೇರಿ, ಅ. 1: ಕಡಂಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಕೋಡಿರ ಎಂ. ತಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘ ಅರಪಟ್ಟು, ಪೊದವಾಡ ಮತ್ತು ಕರಡ ಗ್ರಾಮದ ಕಾರ್ಯವ್ಯಾಪ್ತಿ ಹೊಂದಿದ್ದು, ಪ್ರಸಕ್ತ ವರ್ಷದಲ್ಲಿ ಒಟ್ಟು 1115 ಜನ ಸದಸ್ಯರಿದ್ದು, ರೂ. 39.95 ಲಕ್ಷ ಪಾಲು ಬಂಡವಾಳ ಸಂಗ್ರಹಿಸ ಲಾಗಿದೆ.

ಇದರಲ್ಲಿ 640 ಜನ ಸದಸ್ಯರು ಯಶಸ್ವಿನಿ ಆರೋಗ್ಯ ವಿಮೆಗೆ ಹೆಸರು ನೋಂದಾಯಿಸಿಕೊಂಡಿದ್ದು, ಇದರಲ್ಲಿ 6 ಜನ ಸದಸ್ಯರಿಗೆ ರೂ. 5.50 ಲಕ್ಷದಷ್ಟು ಯಶಸ್ವಿನಿ ವಿಮೆಯ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಂಡಿರುತ್ತಾರೆ. ಸದಸ್ಯರ ಪಾಲು ಹಣ ಮತ್ತು ಮರಣ ನಿಧಿಯನ್ನು ತಲಾ 1000 ಕ್ಕೆ ಏರಿಸಲಾಗಿದ್ದು, ಸದಸ್ಯರು ಮರಣ ಹೊಂದಿದ ಪಕ್ಷದಲ್ಲಿ 10000 ಮರಣ ನಿಧಿ ನೀಡಲಾಗುತ್ತದೆ ಎಂದು ಸಭೆಗೆ ತಿಳಿಸಿದರು.

2015-16ನೇ ಸಾಲಿನಲ್ಲಿ ರೂ. 8.62 ಕೋಟಿ ವ್ಯಾಪಾರ ವಹಿವಾಟು ನಡೆಸಿ ರೂ. 6.86 ಲಕ್ಷದಷ್ಟು ನಿವ್ವಳ ಲಾಭ ಗಳಿಸಿದೆ. ಪ್ರಸ್ತುತ 2015-16 ನೇ ಸಾಲಿಗೆ ಶೇ. 12 ರಷ್ಟು ಡಿವಿಡೆಂಡ್ ನೀಡಲು ನಿರ್ಧರಿಸ ಲಾಗಿದೆ.

ಸಂಘ ಪ್ರಸ್ತುತ ಸಾಲಿನಲ್ಲಿ ರೂ. 3.69 ಕೋಟಿ ವಿವಿಧ ರೀತಿಯ ಠೇವಣಿಯನ್ನು ಸಂಗ್ರಹಿಸಲಾಗಿದೆ. ಸಂಘ 2015-16ನೇ ಸಾಲಿನಲ್ಲಿ ರೂ. 4.20 ಕೋಟಿ ಕೆಸಿಸಿ ಸಾಲ, ಪಿಗ್ಮಿ ಓಡಿ ಸಾಲ, ಸ್ವ-ಸಹಾಯ ಗುಂಪುಗಳ ಸಾಲ ಮತ್ತು ಠೇವಣಿ ಮೇಲಿನ ಸಾಲವನ್ನು ನೀಡಿ, ಶೇ. 99 ರಷ್ಟು ಸಾಲ ವಸೂಲಿಯಾಗಿ ಸಂಘ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ತಿಳಿಸಿದರು.

ಎಸ್.ಎಸ್.ಎಲ್.ಸಿ., ಡಿಗ್ರಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಯಾಗಿರುವ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ನೆರವಂಡ ಎಂ. ಸತೀಶ್, ನಿರ್ದೇಶಕರುಗಳಾದ ಕೋಡಿರ ಎಂ. ನಾಣಯ್ಯ, ಪಾಂಡಂಡ ಎಸ್. ಅಯ್ಯಣ್ಣ, ನಡಿಕೇರಿಯಂಡ ಎ. ಕಾವೇರಪ್ಪ, ಬೇಪಡಿಯಂಡ ಎಸ್. ಬಿದ್ದಪ್ಪ, ಐತಿಚಂಡ ಕೆ. ಆರತಿ, ಕೋಡಿರ ಪೊನ್ನು ಮಂದಣ್ಣ, ಹೆಚ್.ಕೆ. ಕಾವೇರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋನಿಯ ಎಂ.ಎಸ್. ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.